ಯಾವತ್ತಾದರೂ ನಿಮ್ಮ ಎಕ್ಸ್ ಜೊತೆ ಸೆಕ್ಸ್ ಮಾಡಿದಂತೆ ಕನಸು ಬಿದ್ದು ಎಚ್ಚರಾದ ಮೇಲೆ ಬಹಳಷ್ಟು ಹೊತ್ತು ಹೀಗೆೇಕೆ ಬಿತ್ತೆಂದು ಯೋಚಿಸಿದ್ದೀರಾ? ಟೆನ್ಷನ್ ಬೇಡ. ಇಂಥ ಕನಸು ಬಿದ್ದಿರುವುದು ನಿಮಗೊಬ್ಬರಿಗೇ ಅಲ್ಲ! ಕನಸಿನ ಲೋಕವೇ ಅಂಥದ್ದು- ವಿಚಿತ್ರ ಹಾಗೂ ನಿಗೂಢ. ಅದರಲ್ಲೂ ಸೆಕ್ಸ್ ಸಂಬಂಧಿ ಕನಸುಗಳು ಬಿದ್ದಾಗ ಹುಚ್ಚುಲೋಕ ಎಂದೂ ಎನಿಸುತ್ತದೆ. ತಲೆಬುಡವಿಲ್ಲದ ಕನಸುಗಳಿಗೂ ಅರ್ಥ ಹುಡುಕತೊಡಗಿದಾಗ ಅದಕ್ಕೆ ಕಾಲು ಬಾಲವೆಲ್ಲ ಬೆಳೆದು ಆತಂಕ ಕಾಡುತ್ತದೆ. ಅಂದ ಹಾಗೆ ಸೆಕ್ಸ್ ಕುರಿತ ಚಿತ್ರವಿಚಿತ್ರ ಕನಸುಗಳು ಬೀಳುವುದು ಅಪರೂಪವೇನಲ್ಲ.

ಬಹಳಷ್ಟು ಜನರಿಗೆ ಇಂಥ ಕನಸುಗಳು ಬೀಳುತ್ತಿರುತ್ತವೆ. ಯಾರೋ ಅಪರಿಚಿತನೊಡನೆ ಸೆಕ್ಸ್ ಮಾಡಿದಂತೆ, ಬಾಸ್‌ನೊಂದಿಗೆ ರೊಮ್ಯಾನ್ಸ್ ಮಾಡಿದಂತೆ ಕನಸುಗಳು ಬಿದ್ದರೆ ಅದಕ್ಕಾಗಿ ತಪ್ಪಿತಸ್ಥ ಮನೋಭಾವನೆಯಿಂದ ಬಳಲಬೇಕಿಲ್ಲ. ಏಕೆಂದರೆ ಅವು ನಿಮ್ಮ ಆಸೆಕನಸುಗಳು, ಕಲ್ಪನೆಗಳಿಗೆ ಸಂಬಂಧಿಸಿರಲೇಬೇಕೆಂದೇನಿಲ್ಲ. ಹೀಗೆ ಸಾಮಾನ್ಯವಾಗಿ ಬೀಳುವ ಸೆಕ್ಸ್ ಸಂಬಂಧಿ ಕನಸುಗಲು ಹಾಗೂ ಅವುಗಳ ಗೂಢಾರ್ಥವನ್ನು ಇಲ್ಲಿ ಕೊಡಲಾಗಿದೆ.

ದಾಂಪತ್ಯದಲ್ಲಿ ಕಿರಿ ಕಿರಿ: ಡಿವೋರ್ಸ್‌ಗೆ ದಾರಿ!

ಎಕ್ಸ್‌ನೊಂದಿಗೆ ಸೆಕ್ಸ್

ನಿಮ್ಮ ಗಂಡನೊಂದಿಗೆ ನೆಮ್ಮದಿಯಾಗಿರುವಾಗ ಇದ್ದಕ್ಕಿದ್ದಂತೆ ಒಂದು ದಿನ ಮರೆತೆನೆಂದುಕೊಂಡ ಹಳೆಯ ಬಾಯ್‌ಫ್ರೆಂಡ್ ಜೊತೆ ಹಾಟ್ ರೊಮ್ಯಾನ್ಸ್‌ನಲ್ಲಿ ತೊಡಗಿರುವಂಥ ಕನಸು ಬಿದ್ದು ಹಾವು ತುಳಿದಂಥ ಭಯದೊಂದಿಗೆ ಎಚ್ಚರವಾಗಬಹುದು. ನೀವು ನಿಮ್ಮ ಎಕ್ಸ್‌ನೊಂದಿಗೆ ಸೆಕ್ಸ್ ಮಾಡಿದ ಕನಸು ಬಿತ್ತೆಂದ ಮಾತ್ರಕ್ಕೆ ನೀವು ಆತನನ್ನು ಒಳಗೊಳಗೇ ಬಯಸುತ್ತಿದ್ದೀರಿ ಎಂಬರ್ಥವಲ್ಲ. ಇದರ ಅರ್ಥವೆಂದರೆ ಒಳಗಿನಿಂದ ಇನ್ನೂ ಪೂರ್ತಿ ಸರಿಯಾಗದ ಕೆಲ ಗೊಂದಲಗಳು, ನೋವುಗಳಿದ್ದು, ಅವು ಗುಣವಾಗಲು ಸಮಯ ಬೇಕಿದೆ ಎಂದು. ಅಲ್ಲದೆ, ನಿಮ್ಮ ಈಗಿನ ಲವ್ ಲೈಫ್‌ನಲ್ಲಿ ಏನಾಗುತ್ತಿದೆಯೋ ಅದನ್ನೇ ಈ ಕನಸುಗಳು ಪ್ರತಿನಿಧಿಸಿರಬಹುದು. ಇದರಿಂದ ಚಿಂತಿತರಾಗುವ ಬದಲು, ಕನಸಿನಲ್ಲಿ ಕಂಡದ್ದನ್ನು ನಿಮ್ಮ ಪತಿಯೊಂದಿಗೆ ಊಹಿಸಿಕೊಂಡು ಟ್ರೈ ಮಾಡಿ. 

ಬಾಸ್‌ನೊಂದಿಗೆ ಸೆಕ್ಸ್

ಈ ಕನಸುಗಳು ಕೆಲವೊಮ್ಮೆ ಸ್ವತಃ ಅದೆಷ್ಟು ಅವಮಾನಕಾರಿ ಹಾಗೂ ವಿಚಿತ್ರವೆಂದರೆ ನೀವೆಂದೂ ಯೋಚಿಸಿಯೇ ಇರದ ನಿಮ್ಮ ಬಾಸ್ ನಿಮ್ಮ ಕನಸಿನಲ್ಲಿ ನಿಮ್ಮೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರಬಹುದು. ಇದರರ್ಥ ಹುಡುಕುವುದು ಸ್ವಲ್ಪ ಕಷ್ಟವೇ. ಒಂದು ವೇಳೆ ಬಾಸ್ ನಿಮ್ಮ ಆದರ್ಶ ವ್ಯಕ್ತಿಯಾಗಿದ್ದರೆ, ಅವರ ಯಾವುದೋ ಗುಣವನ್ನು ನೀವು ಅನುಕರಿಸಲು ಬಯಸುತ್ತಿದ್ದರೆ ಆಗ ಕೂಡಾ ಇಂಥ ಕನಸು ಬೀಳಬಹುದು. ಕೆಲವೊಮ್ಮೆ ನಿಮ್ಮ ಬಾಸ್ ಹುಡುಗಿಯರ ವಿಷಯದಲ್ಲಿ ಸರಿಯಿಲ್ಲ ಎಂಬ ಮಾತುಗಳನ್ನು ಕೇಳಿದ್ದರೆ ಅವು ಕೂಡಾ ಇಂಥ ಕನಸು ಬೀಳಲು ಕಾರಣವಾಗಿರಬಹುದು. ಇನ್ನು ಬಾಸ್ ಮೇಲೆ ಕ್ರಶ್ ಇದ್ದರೆ ಅಥವಾ ಬೇರೆ ರೀತಿಯ ಆಕರ್ಷಣೆ ಇದ್ದರೆ ಆಗ ಕನಸಿನ ಅರ್ಥ ಹುಡುಕುವ ಗೊಡವೆಗೆ ನೀವು ಹೇಗೂ ಹೋಗುವುದಿಲ್ಲ ಬಿಡಿ.

ವಿವಾಹಕ್ಕೂ ಮುಂಚೆ ನಿಮ್ಮ ಬಾಯ್‌ಫ್ರೆಂಡ್ ಜೊತೆ ಈ ಅನುಭವ ಇದ್ರೆ ಒಳ್ಳೇದು!

ನಿಮ್ಮ ಸಂಗಾತಿ ನಿಮಗೆ ಮೋಸ ಮಾಡಿದಂತೆ ಅಥವಾ ನೀವೇ ಅವರಿಗೆ ಮೋಸ ಮಾಡುತ್ತಿರುವಂತೆ

ಇಂಥ ಕನಸು ಬಿದ್ದಾಗ ಚಿಂತಿಸುವ ಮೊದಲು ಅಥವಾ ನಿಮ್ಮ ಸಂಬಂಧವನ್ನೇ ಅನುಮಾನಿಸಿ ಹೊಸ ದೃಷ್ಟಿಯಿಂದ ನೋಡುವ ಮೊದಲು ಅರ್ಥ ಮಾಡಿಕೊಳ್ಳಬೇಕಾದುದೇನೆಂದರೆ, ನಿಮಗೆ ಹಿಂದೆ ಯಾರಿಂದಲಾದರೂ ಮೋಸ ಹೋದ ಅನುಭವವಾಗಿರಬಹುದು. ಇಲ್ಲವೇ ನಿಮಗೆ ನಿಮ್ಮ ಸಂಬಂಧ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಪೂರ್ತಿ ನೆಮ್ಮದಿ, ಸಮಾಧಾನ ಇಲ್ಲದಿರುವುದರ ಸೂಚನೆಯೂ ಆಗಿರಬಹುದು. ಇನ್ನೊಂದು ಕಾರಣವೆಂದರೆ ನೀವು ನಿಮ್ಮ ಸಂಬಂಧಕ್ಕೆ ಪೂರ್ತಿಯಾಗಿ ಕೊಡಲು ಆಗುತ್ತಿಲ್ಲವೆಂದು ಕೊರಗುತ್ತಿದ್ದುದರ ಪರಿಣಾಮವೂ ಇರಬಹುದು. 

ಮುತ್ತಿನ ಮತ್ತೇ ಗಮ್ಮತ್ತು. ಇದರ ಬಗ್ಗೆ ನಿಮಗೆಷ್ಟು ಗೊತ್ತು?

ಸಾರ್ವಜನಿಕವಾಗಿ ಸೆಕ್ಸ್ ಮಾಡಿದಂತೆ

ಕೆಲವೊಮ್ಮೆ ಕನಸಿನಲ್ಲಿ ಸಾರ್ವಜನಿಕವಾಗಿ ಖಾಸಗಿ ಕ್ಷಣಗಳನ್ನು ಕಳೆದಂತೆ ಕಾಣಬಹುದು. ಇಂಥ ಕನಸು ಬಿದ್ದಿದೆ ಎಂದರೆ ಬಹುಷಃ ನೀವು ನಿಮ್ಮ ಸೆಕ್ಸ್ ಲೈಫನ್ನು ನೆಕ್ಸ್ಟ್ ಲೆವೆಲ್‌ಗೆ ಕೊಂಡೊಯ್ಯಲು ಬಯಸುತ್ತಿದ್ದೀರೆಂದರ್ಥ. ಹಾಸಿಗೆಯ ಮೇಲೆ ಮಸಾಲೆ ಸ್ವಲ್ಪ ಜಾಸ್ತಿ ಬಯಸುತ್ತಿದ್ದೀರಿ. ಜೊತೆಗೆ, ವೈಲ್ಡ್ ಸೆಕ್ಸ್ ಟ್ರೈ ಮಾಡುವ ಮನಸ್ಸು ಮಾಡಿದ್ದೀರಿ ಎಂದರ್ಥ.