ಪ್ರಗ್ನೆನ್ಸಿ ಕುರಿತ ಈ ನಂಬಿಕೆಗಳು ನಿಜವಲ್ಲ!

ಯಾರಾದರೂ  ಪ್ರಗ್ನೆಂಟ್ ಆದರೆ ಸಾಕು, ಮಕ್ಕಳಿರುವ ಮಹಾತಾಯಿಯರು ಸಲಹಾ ಸಮಿತಿಯನ್ನೇ ತೆರೆದವರಂತೆ ಅದು ತಿನ್ನು, ಇದು ತಿನ್ನಬೇಡ, ಹಾಗೆ ಮಾಡು, ಹೀಗೆ ಮಾಡಬೇಡ ಎಂದು ನೂರಾರು ಸಲಹೆ ಕೊಡುತ್ತಾರೆ. ತಮ್ಮ ಹಿರಿಯರಿಂದ ಹರಿದು ಬಂದ ಮೂಢನಂಬಿಕೆಗಳನ್ನು ಧಾರಾಳವಾಗಿ ಧಾರೆ ಎರೆದು ನಿರಾಳರಾಗುತ್ತಾರೆ. ಹಾಗಿದ್ದರೆ ಪ್ರಗ್ನೆನ್ಸಿ ಕುರಿತು ಇರುವ ನಿಜವಲ್ಲದ ಸಾಮಾನ್ಯ ನಂಬಿಕೆಗಳು ಯಾವುವು?

commons myths about pregnancy

ಮನೆಯಲ್ಲಿ ಗರ್ಭಿಣಿಯೊಬ್ಬಳು ಇದ್ದರೆ, ಮನೆಮಂದಿಗೆ ಸಡಗರ, ಸಂಭ್ರಮ, ಕನಸುಗಳು... ಆಕೆಯನ್ನು ಖುಷಿಯಾಗಿಟ್ಟುಕೊಳ್ಳಬೇಕೆನ್ನುವುದು ಎಲ್ಲರ ಇರಾದೆಯೂ ಆಗುತ್ತದೆ. ಆದರೆ, ತಲೆಮಾರುಗಳಿಂದ ಹರಿದು ಬಂದಿರುವ ಕೆಲವೊಂದು ಮೂಢನಂಬಿಕೆಗಳಿಂದ ಗರ್ಭಿಣಿಗೆ ಬೇಡದ ತಾಪತ್ರಯಗಳನ್ನೂ ನೀಡಲಾಗುತ್ತದೆ. ಆ ನಂಬಿಕೆಗಳನ್ನು ಎಷ್ಟು ನಂಬಬಹುದು ನೋಡೋಣ.

ನಂಬಿಕೆ: ಡೈರಿ ಉತ್ಪನ್ನಗಳು ಹಾಗೂ ಡ್ರೈ ಫ್ರೂಟ್ಗಳು ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ
ನಿಜ: ಗರ್ಭಿಣಿಗೆ ಫುಡ್ ಅಲರ್ಜಿ ಇಲ್ಲ ಎಂದಲ್ಲಿ ಹಾಲಿನ ಉತ್ಪನ್ನಗಳು ಹಾಗೂ ಡ್ರೈಫ್ರೂಟ್ಸ್ ಗಳು ಆರೋಗ್ಯಕ್ಕೆ ಒಳ್ಳೆಯದು. ಹಸಿ ಮಾಂಸ, ಮೀನು, ಅರೆ ಬೇಯಿಸಿದ ಮೊಟ್ಟೆ ಹಾಗೂ ಐಸ್ ಕ್ರೀಂಗಳನ್ನು ಗರ್ಭಿಣಿ ತಿನ್ನದಿರುವುದು ಒಳಿತು. 

ಈ ಕಿವಿಯೋಲೆ ಧರಿಸಿದ್ರೆ ಸಾಕು, ಮಕ್ಕಳಾಗೋ ಚಿಂತೆನೇ ಇಲ್ಲ!

ನಂಬಿಕೆ: ಮಗು ಹಾಗೂ ತಾಯಿ, ಇಬ್ಬರ ಪಾಲಿನ ಊಟ ಮಾಡಬೇಕು. ಇಲ್ಲದಿದ್ದಲ್ಲಿ ಮಗು ಬಡವಾಗುತ್ತದೆ.
ನಿಜ: ಅತಿಯಾಗಿ ತಿನ್ನುವುದು ಯಾವಾಗಲೂ ದೇಹಕ್ಕೆ ಒಳ್ಳೆಯದಲ್ಲ. ಇದು ಗರ್ಭಿಣಿಯ ಲಿವರ್ ನ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ತಾಯಿ ಮಗು ಇಬ್ಬರಿಗೂ ಒಳ್ಳೆಯದಲ್ಲ. ಎಷ್ಟು ಬೇಕೋ ಅಷ್ಟು ಪೋಷಕಾಂಶಯುಕ್ತ ಆಹಾರ ಸೇವಿಸಿದರೆ ಸಾಕು. 

ನಂಬಿಕೆ: ಬಿಸಿ ನೀರು ಸ್ನಾನ ಹಾಗೂ ಆರ್ಟಿಫಿಶಿಯಲ್ ಕೆಮಿಕಲ್ ಬಳಕೆ ಬೇಡ
ನಿಜ: ಇದೇನು ಪೂರ್ತಿ ತಪ್ಪಲ್ಲ. ಅತಿಯಾದ ಬಿಸಿ ನೀರು ಹಾರ್ಮೋನ್ ಏರುಪೇರಿಗೆ ಕಾರಣವಾಗಿ ಮೂಡ್ ಹಾಳು ಮಾಡುತ್ತದೆ. ಬೆಚ್ಚಗಿನ ನೀರಿನ ಸ್ನಾನ ಯಾವಾಗಲೂ ಒಳ್ಳೆಯದು. ಜೊತೆಗೆ ತಲೆಗೆ ಡೈ ಮಾಡುವುದು, ಕಲರಿಂಗ್, ಫುಡ್ ಕಲರಿಂಗ್ ಮುಂತಾದ ಕೆಮಿಕಲ್ ಗಳ ಬಳಕೆಯಿಂದ ದೂರ ಇರುವುದು ತಾಯಿ ಮಗುವಿಗಿಬ್ಬರಿಗೂ ಒಳಿತು.

ಗರ್ಭಿಣಿ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಬಹುದಾ? 

ನಂಬಿಕೆ: ಗರ್ಭಿಣಿಯರು ಹೊರಗೆ ತಿರುಗಬಾರದು. ಯೋಗ ಮಾಡಬಾರದು.
ನಿಜ: ಆರೋಗ್ಯ ಎಲ್ಲವೂ ಸರಿಯಿದ್ದಲ್ಲಿ ಭಾರ ಹೊರುವುದರ ಹೊರತಾಗಿ ಇನ್ನೆಲ್ಲವನ್ನೂ ಗರ್ಭಿಣಿಯರು ಮಾಡಬಹುದು. ಯೋಗತಜ್ಞರ ಸಲಹೆ ಪಡೆದು ಕಸರತ್ತು ಮುಂದುವರಿಸಿ. 

Latest Videos
Follow Us:
Download App:
  • android
  • ios