ನಮ್ಮಿಡೀ ದೇಹದ ಭಾರ, ಒತ್ತಡಗಳೆಲ್ಲವನ್ನೂ ನಮ್ಮ ಅಂಗಾಲು ಹೊರುತ್ತದೆ ಎಂಬುದನ್ನು ನಾವು ಸಾಮಾನ್ಯವಾಗಿ ಗಮನಿಸುವುದಿಲ್ಲ. ಅಂಗಾಲು ನಮ್ಮಿಂದ ಕಡೆಗಣನೆಗೆ ಒಳಗಾಗುವುದೇ ಹೆಚ್ಚು. ಆದರೆ, ನಮ್ಮ ಭಾರವನ್ನು ಹೊರುವ ಅದರ ನೋವಿಗೂ ಕಿವಿಗೊಟ್ಟರೆ ಅದು ಇನ್ನಷ್ಟು ಚೇತೋಹಾರಿಯಾಗಿ ತನ್ನ ಕೆಲಸ ಮಾಡಬಲ್ಲದು. ಪ್ರತಿದಿನ ಅದಕ್ಕಾಗಿ ಕೆಲ ನಿಮಿಷಗಳ ಕಾಲ ಫೂಟ್ ಮಸಾಜ್ ಮಾಡಬಹುದಲ್ಲವೇ? ಅಯ್ಯೋ ಸಮಯ ಹಾಳು ಎನ್ನುವವರಿಗಾಗಿಯೇ ತಯಾರಾದವು ಈ ಆಕ್ಯುಪ್ರೆಶರ್ ಚಪ್ಪಲಿಗಳು. 

ಚಪ್ಪಲಿ ಧರಿಸಿ ನಿಮ್ಮ ಪಾಡಿಗೆ ನೀವು ದೈನಂದಿನ ಕೆಲಸ ಮಾಡುತ್ತಿದ್ದರೂ, ಈ ಚಪ್ಪಲಿ ತನ್ನ ಪಾಡಿಗೆ ತಾನು ಅಂಗಾಲಿಗೆ ಮಸಾಜ್ ಮಾಡುತ್ತಿರುತ್ತದೆ. ಈ ಆಕ್ಯುಪ್ರೆಶರ್ ಚಪ್ಪಲಿಗಳಿಂದ ಬಹಳಷ್ಟು ಆರೋಗ್ಯ ಲಾಭಗಳಿವೆ. ಅವು ಯಾವುವು ಗೊತ್ತಾ? 

ಕಾಮಾಸಕ್ತಿ ಹೆಚ್ಚಲು ಆಕ್ಯೂ ಪ್ರೆಷರ್ ಎಂಬ ಚಿಕಿತ್ಸೆ..

ನಿದ್ರೆ

ಆಕ್ಯುಪ್ರೆಶರ್ ಮಸಾಜ್ ಚಪ್ಪಲಿಗಳನ್ನು ಧರಿಸಿದಾಗ ಅವು ಅಂಗಾಲಿಗೆ ಮಸಾಜ್ ಮಾಡುವ ಮೂಲಕ ಪಾದದ ನೋವನ್ನು ನಿವಾರಿಸುತ್ತದೆ. ಇದರಿಂದ ಉತ್ತಮ ನಿದ್ರೆ ಬರುತ್ತದೆ. ನಿಮಗೆ ತಿಳಿದಂತೆ ಅಂಗೈ ಹಾಗೂ ಅಂಗಾಲಿನಲ್ಲಿ ಎಲ್ಲ ಕಡೆಯ ನರಗಳ ಕೊನೆಯ ವೈರಿಂಗ್ ಇರುತ್ತದೆ. ಹಾಗಾಗಿ, ಈ ಚಪ್ಪಲಿಯು ಕಾಲುಗಳಿಗೆ ಒತ್ತಿದಾಗ ರಕ್ತ ಸಂಚಾರ ಚೆನ್ನಾಗಾಗುತ್ತದೆ. ಇದರಿಂದ ನರಗಳು ರಿಲ್ಯಾಕ್ಸ್ ಆಗುತ್ತವೆ. 

ಖಿನ್ನತೆ ವಿರುದ್ಧ ಹೋರಾಟ

ದೇಹದ ಬಹುತೇಕ ಅಂಗಗಳಿಗೆ ಸಂಬಂಧಿಸಿದ ನರಗಳು ಅಂಗಾಲಿನಲ್ಲಿ ತುದಿ ಹೊಂದಿರುತ್ತವೆ. ಆಕ್ಯುಪ್ರೆಶರ್ ಚಪ್ಪಲಿಯು ಪಾದಕ್ಕೆ ಒತ್ತುವಾಗ ಈ ನರಗಳು ಹೆಚ್ಚು ಆ್ಯಕ್ಟಿವೇಟ್ ಆಗುತ್ತವೆ. ಅಂಗಾಲಿನ ಮಧ್ಯೆಭಾಗ ಹಾಗೂ ಹಿಂಭಾಗ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಸಂಬಂಧಿಸಿದುದು. ಈ ಭಾಗಗಳಿಗೆ ಚಪ್ಪಲಿ ಆಕ್ಯುಪ್ರೆಶರ್ ನೀಡುವುದರಿಂದ ಖಿನ್ನತೆಯ ಲಕ್ಷಣಗಳಿಂದ ಹೊರಬರಬಹುದು.

ದೇಹದಲ್ಲಿರುವ ಸಪ್ತ ಚಕ್ರಗಳ ಅಚ್ಚರಿಯ ಸಂಗತಿಗಳು!

ನೋವು ಶಮನಕಾರಿ

ಆಕ್ಯುಪ್ರೆಶರ್ ಚಪ್ಪಲಿಗಳನ್ನು ಧರಿಸಿ ವಾಕ್ ಮಾಡುವುದರಿಂದ ದೇಹದ ನೋವುಗಳು ಕಡಿಮೆಯಾಗುತ್ತವೆ. ಪ್ರತಿ ದಿನ 30 ನಿಮಿಷ ಈ ಚಪ್ಪಲಿ ಬಳಸಿ ವಾಕ್ ಮಾಡುವುದರಿಂದ ಕತ್ತು, ಕೆಳಬೆನ್ನು, ತೊಡೆ, ಮೈಗ್ರೇನ್, ತಲೆನೋವು, ಕಾಲು ನೋವುಗಳಿಂದ ಮುಕ್ತಿ ಪಡೆಯಬಹುದು. 

ಮೆನೋಪಾಸ್ ಸುಲಭಗೊಳಿಸುತ್ತದೆ

ಬಹಳಷ್ಟು ಮಹಿಳೆಯರು ಮುಟ್ಟಿಗೂ ಮೊದಲ ವಾರದಲ್ಲಿ ಮೂಡ್ ಸ್ವಿಂಗ್ಸ್ ಹಾಗೂ ನೋವಿನಿಂದ ಬಳಲುತ್ತಾರೆ. ಇನ್ನು ಮುಟ್ಟು ನಿಲ್ಲುವ ಸಂದರ್ಭದಲ್ಲಿ ಖಿನ್ನತೆ, ಬೆನ್ನುನೋವು, ಕಾಲುನೋವುಗಳು ಸಾಮಾನ್ಯ. ಈ ಸಮಸ್ಯೆಗಳಿ ಆಕ್ಯುಪ್ರೆಶರ್ ಚಪ್ಪಲಿ ಧರಿಸುವುದರಿಂದ ಪರಿಹಾರ ಕಾಣುತ್ತವೆ. ಹೆಬ್ಬೆರಳು ಹಾಗೂ ಅಂಗಾಲಿನ ನಡುವಿನ ಭಾಗಕ್ಕೆ ಆಕ್ಯುಪ್ರೆಶರ್ ಆಗುವುದರಿಂದ ಈ ಸಮಸ್ಯೆಗಳು ನಿವಾರಣೆಯಾಗುತ್ತವೆ.

ರೆಸ್ಟ್‌ಲೆಸ್ ಲೆಗ್ ಸಿಂಡ್ರೋಮ್

ಕಾಲಿನಲ್ಲಿ ಎಳೆದಂತೆ, ಸುಟ್ಟಂತೆ ಭಾಸವಾಗುತ್ತಾ, ಸದಾ ಕಾಲಾಡಿಸಬೇಕೆನ್ನಿಸುವ ಸಮಸ್ಯೆಯೇ ರೆಸ್ಟ್‌ಲೆಸ್ ಲೆಗ್ ಸಿಂಡ್ರೋಮ್. ಇದು ನರಸಂಬಂಧಿ ಸಮಸ್ಯೆಯಾಗಿದ್ದು, ಮಸಾಜ್ ಚಪ್ಪಲಿಯ ಮೇಲೆ ನಡೆಯುವುದರಿಂದ ನರಕೋಶಗಳಿಂದ ನೋವು ತೆಗೆದು, ರಕ್ತ ಸಂಚಾರ ಹೆಚ್ಚಾಗುತ್ತದೆ. ಇದರಿಂದ ಆರೋಗ್ಯಕರ ಪಾದ ನಿಮ್ಮದಾಗುತ್ತದೆ. 

ಶರೀರದ ದೋಷ ನಿವಾರಕ ಪಂಚಕರ್ಮ ಎಂಬ ಚಿಕಿತ್ಸೆ

ಮಲ್ಟಿಪಲ್ ಸ್ಕ್ಲೀರೋಸಿಸ್

ಮಲ್ಟಿಪ್ಲ್ ಸ್ಕ್ಲೀರೋಸಿಸ್ ಇರುವ ರೋಗಿಗಳಲ್ಲಿ ಸುಸ್ತನ್ನು ಹೋಗಲಾಡಿಸುವಲ್ಲಿ ಮಸಾಜ್ ಚಪ್ಪಲಿಗಳು ಸಹಾಯ ಮಾಡುತ್ತವೆ. 
ಇವಿಷ್ಟೇ ಅಲ್ಲದೆ, ಚಯಾಪಚಯ ಕ್ರಿಯೆ ಹೆಚ್ಚಿಸುತ್ತವೆ ಮಸಾಜ್ ಚಪ್ಪಲಿಗಳು. ರಕ್ತ ಸಂಚಾರ ಚೆನ್ನಾಗಿ ಆಗುವುದರಿಂದ ಹೃದಯ, ಮೆದುಳು ಸೇರಿದಂತೆ  ಪ್ರತಿಯೊಂದು ಅಂಗಗಳೂ ಅಗತ್ಯ ಆಕ್ಸಿಜನ್ನನ್ನು ಪಡೆದು ಆರೋಗ್ಯಯುತವಾಗಿ ಕೆಲಸ ಮಾಡುತ್ತವೆ. a