Asianet Suvarna News Asianet Suvarna News

ದೇಹದಲ್ಲಿರುವ ಸಪ್ತ ಚಕ್ರಗಳ ಅಚ್ಚರಿಯ ಸಂಗತಿಗಳು!

ಈ ಯೋಗ, ಧ್ಯಾನಗಳಲ್ಲಿ ಚಕ್ರಗಳ ಕುರಿತ ಮಾತು ಆಗಾಗ ನಿಮ್ಮ ಕಿವಿಗೆ ಅಷ್ಟೋ ಇಷ್ಟೋ ಬಿದ್ದಿರಬಹುದು. ಎಲ್ಲಿರುತ್ತವೆ ಈ ಚಕ್ರಗಳು? ಅವುಗಳಿಂದೇನು ಉಪಯೋಗ? 

Significance of 7 chakras in human  body
Author
Bangalore, First Published Aug 31, 2019, 3:36 PM IST

ನಾಲ್ಕು ಚಕ್ರಗಳು ಕಾರನ್ನು ಬ್ಯಾಲೆನ್ಸ್ ಮಾಡುವಂತೆ ನಮ್ಮ ದೇಹವನ್ನು ಬ್ಯಾಲೆನ್ಸ್ ಮಾಡಲೂ ಏಳು ಚಕ್ರಗಳಿವೆ ಎಂಬುದು ಹಿಂದುತ್ವ ಹಾಗೂ ಬೌದ್ಧತತ್ವಗಳಲ್ಲಿ ಶತಮಾನಗಳಿಂದ ನಂಬಿಕೊಂಡು ಬರಲಾಗುತ್ತಿದೆ. ದೇಹ, ಆತ್ಮ ಹಾಗೂ ಮನಸ್ಸಿನ ನಡುವೆ ಸಮತೋಲನ ಕಾಪಾಡುವ ಕೆಲಸ ಚಕ್ರಗಳದ್ದು. ಇದು ದೇಹದೆಲ್ಲೆಡೆ ಸರಿಯಾದ ಕ್ರಮದಲ್ಲಿ ಶಕ್ತಿ ಸಂಚಯವಾಗುವಂತೆ ನೋಡಿಕೊಳ್ಳುತ್ತದೆ.

ನಮ್ಮ ಒಟ್ಟಾರೆ ಆರೋಗ್ಯ ಕಾಪಾಡುವುದರಿಂದ ಹಿಡಿದು, ಧನಾತ್ಮಕ ಆಲೋಚನೆಗಳನ್ನು ಉಳಿಸಿಕೊಳ್ಳಲು ಈ 7 ಚಕ್ರಗಳನ್ನು ತೆರೆಯುವುದು ಹಾಗೂ ಶಕ್ತಿ ಒಳಹರಿಯುವುದಕ್ಕೆ ಅವಕಾಶ ನೀಡುವುದು ಮುಖ್ಯ. ಏಳು ಚಕ್ರಗಳಲ್ಲಿ ಒಂದೊಂದೂ ದೇಹದ ಒಂದೊಂದು ಭಾಗಕ್ಕೆ ಸಂಬಂಧಿಸಿದ್ದು, ಪ್ರತಿಯೊಂದಕ್ಕೂ ಅದರದೇ ಆದ ಪ್ರಾಮುಖ್ಯತೆ ಇದೆ. ಅವು ನಮ್ಮ ಬೆನ್ನ ಹುರಿಯ ತುದಿಯಿಂದ ಆರಂಭವಾಗಿ ತಲೆಯವರೆಗೆ ಆವರಿಸಿವೆ. 

ಗರ್ಭಿಣಿಯರಲ್ಲಿ ಮೂತ್ರನಾಳ ಸೋಂಕು; ಏನು, ಹೇಗೆ, ಪರಿಹಾರವೇನು?

ಚಕ್ರಗಳೆಂದರೇನು?

ಚಕ್ರಗಳೆಂದರೆ ಶಕ್ತಿವಲಯಗಳು ಮತ್ತು ಇವು ನಮ್ಮ ದೇಹದ ಶಕ್ತಿ ಸಂಚಲನವನ್ನು ಸೂಚಿಸುತ್ತವೆ. ನಾವು ಪ್ರತಿಯೊಬ್ಬರ ದೇಹದಲ್ಲೂ 7 ಚಕ್ರಗಳಿದ್ದು, ಅವು ಎನರ್ಜಿ ಕೇಂದ್ರಗಳು. ನಮ್ಮ ಭಾವನೆಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತವೆ. ಈ 7 ಚಕ್ರಗಳು ಎಂಡೋಕ್ರೈನ್ ವ್ಯವಸ್ಥೆಗೆ ನೇರ ಸಂಪರ್ಕವನ್ನು ಹೊಂದಿದ್ದು, ಅದನ್ನು ನಿಯಂತ್ರಿಸುವ ಮೂಲಕ ವಯಸ್ಸಾಗುವಿಕೆಯನ್ನು ತಡೆಯುತ್ತವೆ. ಅವು ಭೌತಿಕ ದೇಹಕ್ಕೆ ಶಕ್ತಿಯ ಹರಿವನ್ನು ಪ್ರಭಾವಿಸುತ್ತವೆ. ವಾತಾವರಣದಿಂದ ಪ್ರಾಥಮಿಕ ಶಕ್ತಿಯನ್ನು ಹೀರಿಕೊಳ್ಳುತ್ತವೆ ಮತ್ತು ಇದನ್ನು ಶಕ್ತಿಯ ಅಗತ್ಯವಿರುವಲ್ಲಿಗೆ ಹರಿಸುತ್ತವೆ. ಯಾವಾಗಲಾದರೂ ಈ ಚಕ್ರಗಳು ಸರಿಯಾಗಿ ಸಿಂಕ್ ಆಗಲಿಲ್ಲವೆಂದಾಗ ನೆಗೆಟಿವಿಟಿ ಪುಟಿಯುತ್ತದೆ. ಅದು ನಮ್ಮ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 

ಈ ಚಕ್ರಗಳು ಎಲ್ಲಿವೆ ಹಾಗೂ ಅವುಗಳ ಕ್ರಮವೇನು ಎಂದು ತಿಳಿದುಕೊಳ್ಳುವ ಮೂಲಕ ನಮ್ಮ ಮಾನಸಿಕ ಹಾಗೂ ದೈಹಿಕ ಗಾಯಗಳನ್ನು ಗುಣಪಡಿಸಿಕೊಳ್ಳಬಹುದು. ಈ ಏಳು ಚಕ್ರಗಳು ಯಾವುವು ಗೊತ್ತಾ?

1. ಮೂಲಾಧಾರ ಚಕ್ರ

ಮೂಲಧಾರ ಚಕ್ರವನ್ನು ಮೂಲ ಚಕ್ರ ಎಂದೂ ಕರೆಯಲಾಗುತ್ತದೆ. ಇದು ಬೆನ್ನು ಹುರಿಯ ಬುಡದಲ್ಲಿರುತ್ತದೆ. ಇದು ಕೆಂಪು ಬಣ್ಣ ಹೊಂದಿದ್ದು, ದೇಹ, ಮನಸ್ಸು, ಆತ್ಮವನ್ನು ಭೂಮಿಯೊಂದಿಗೆ ಸಂಪರ್ಕ ಹೊಂದುವಂತೆ ಮಾಡುತ್ತದೆ.  ಇದು ಮೂಲತಃ ಸ್ತ್ರೀ ಪ್ರಕೃತಿ ಹೊಂದಿದ ಚಕ್ರವಾಗಿದ್ದು, ನಮ್ಮನ್ನು ಭೂಮಿಯ ಶಕ್ತಿಯೊಂದಿಗೆ ಬೆಸೆಯುತ್ತದೆ. ಮೂಲಾಧಾರ ಚಕ್ರವು ಕ್ರಿಯಾಶೀಲವಾಗಿರದಿದ್ದರೆ, ಮಲಬದ್ಧತೆ, ಬೇಧಿ, ಮೂಲವ್ಯಾಧಿ, ಪದೇ ಪದೆ ಮೂತ್ರ ವಿಸರ್ಜನೆ, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಕಲ್ಲುಗಳು, ನಪುಂಸಕತ್ವ ಮತ್ತು ಸೊಂಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. 

ಮಗುವಿನ ಊಟದಲ್ಲಿ ಈ 5 ಅಂಶ ಮಿಸ್‌ ಆಗದಿರಲಿ!

2. ಸ್ವಾಧಿಷ್ಠಾನ ಚಕ್ರ

ಸ್ವಾಧಿಷ್ಠಾನ ಚಕ್ರವು ಹೊಕ್ಕುಳಿನಿಂದ 3 ಇಂಚು ಕೆಳಗಿರುತ್ತದೆ. ಇದರ ಬಣ್ಣ ಕೇಸರಿ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಜವಾಬ್ದಾರನಾಗುವ ಜೊತೆಗೆ ಲೈಂಗಿಕ ಭಾವನೆಗಳಿಗೂ ಕಾರಣಕರ್ತ. ಸ್ವಾಧಿಷ್ಠಾನ ಚಕ್ರವು ಕ್ರಿಯಾಶೀಲವಾಗದಿದ್ದರೆ,  ಋತುಸ್ರಾವದಲ್ಲಿ ಏರುಪೇರು, ಋತುಚಕ್ರದ ಸಮಸ್ಯೆಗಳು, ಗರ್ಭಾಶಯದ ತೊಂದರೆಗಳು, ಇರಿಟೆಬಲ್ ಬಾವೆಲ್ ಸಿಂಡ್ರೋಮ್, ಎಂಡೋಮೆಟ್ರಿಯಾಸಿಸ್, ವೃಷಣದ ರೋಗಗಳು ಇತ್ಯಾದಿಗಳನ್ನು ಉಂಟುಮಾಡಬಹುದು.

3. ಮಣಿಪೂರ ಚಕ್ರ

ಮಣಿಪೂರ ಚಕ್ರವು ಹೊಕ್ಕುಳಿನ ಹಿಂಭಾಗದಲ್ಲಿದ್ದು, ಹಳದಿ ಬಣ್ಣ ಹೊಂದಿದೆ. ಇದು ಆತ್ಮವಿಶ್ವಾಸ, ಶಿಸ್ತು ಹಾಗೂ ಜ್ಞಾನಕ್ಕೆ ಸಂಬಂಧಿಸಿದೆ. ಯಾವುದೋ ವಿಷಯ ನಮಗೆ ಸರಿಯಾದುದಲ್ಲ ಎಂದು ಆರನೇ ಇಂದ್ರಿಯ ಹೇಳುತ್ತದಲ್ಲ, ಆ ಭಾವನೆಗೆ ಇದು ಜವಾಬ್ದಾರನಾಗಿದೆ. ಇನ್ನು ಇದರಲ್ಲಿ ಏರುಪೇರಾದರೆ ಹೊಟ್ಟೆ ಸಂಬಂಧಿ ಕಾಯಿಲೆಗಳು, ಮಧುಮೇಹ ಮುಂತಾದವಕ್ಕೆಡೆ ಮಾಡಬಹುದು. 

4. ಅನಾಹತ ಚಕ್ರ

ಅನಾಹತ ಚಕ್ರವನ್ನು ಹೃದಯ ಚಕ್ರ ಎಂದೂ ಕರೆಯುತ್ತಾರೆ. ಇದು ಎದೆಯ ಮಧ್ಯಭಾಗದಲ್ಲಿರುತ್ತದೆ. ಈ ಚಕ್ರದ ಬಣ್ಣ ಹಸಿರು. ಅನಾಹತ ಚಕ್ರವು ಪ್ರೀತಿ ಹಾಗೂ ವಾತ್ಸಲ್ಯದೊಂದಿಗೆ ಗುರುತಿಸಿಕೊಂಡಿದೆ.  ಈ ಚಕ್ರವು ನಮ್ಮ ಭಾವನಾತ್ಮಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯದ ಜವಾಬ್ದಾರ. 

ರಾತ್ರಿ ನಿದ್ದೆ ಕಡಿಮೆಯಾದರೆ ಶುರುವಾಗುತ್ತೆ ಹೈಪರ್ ಟೆನ್ಷನ್; ಜೋಕೆ!

5. ವಿಶುದ್ಧ ಚಕ್ರ

ವಿಶುದ್ಧ ಚಕ್ರವು ಗಂಟಲು ಹಾಗೂ ಶ್ವಾಸಕೋಶದ ಪ್ರದೇಶದಲ್ಲಿ ಇರುತ್ತದೆ. ಇದರ ಬಣ್ಣ ನೀಲಿ. ಇದು ನಮ್ಮ ಸೃಜನಶೀಲತೆಗೆ ಹಾಗೂ ಭಾವನೆಗಳನ್ನು ಮಾತಾಗಿಸುವುದಕ್ಕೆ ಶಕ್ತಿಸಂಚಯ ಮಾಡುತ್ತದೆ. ಸತ್ಯ ಹೇಳುವುದು, ಅಭಿಪ್ರಾಯ ಹಂಚಿಕೊಳ್ಳುವುದು ಕೂಡಾ ಇದಕ್ಕೆ ಸಂಬಂಧಿಸಿದ್ದೇ. ಈ ಚಕ್ರದ ಕಾರ್ಯದಲ್ಲಿ ಸಮಸ್ಯೆಯಾದಾಗ ಅಸ್ತಮಾ, ಕಿವುಡು, ಗಂಟಲು ನೋವು, ಬಾಯಿಯ ಅಲ್ಸರ್ ಮುಂತಾದವು ಕಾಣಿಸಿಕೊಳ್ಳಬಹುದು.

6. ಆಜ್ಞಾ ಚಕ್ರ

ಆಜ್ಞಾ ಚಕ್ರವು ಹಣೆಯ ಮಧ್ಯಭಾಗದಲ್ಲಿ ಇದ್ದು ಆಕಾಶನೀಲಿ ಬಣ್ಣ ಹೊಂದಿರುತ್ತದೆ. ಇದನ್ನು ನಮ್ಮ ಮೂರನೇ ಕಣ್ಣೆಂದೂ ಭಾವಿಸಬಹುದು. ಇದು ನಮ್ಮ ಕುರಿತ ಮಾಹಿತಿ ಹಾಗೂ ವಸ್ತುಲೋಕದ ಹೊರತಾದ ಮಾಹಿತಿಗಳಿಗೆ ಕಾರಣ. ಇದರ ಕಾರ್ಯದಲ್ಲಿ ಲೋಪವಾದಲ್ಲಿ ಒತ್ತಡ, ತಲೆನೋವು, ಮೈಗ್ರೇನ್, ದೃಷ್ಟಿ ಸಮಸ್ಯೆಗಳು, ಸೈನಸ್ ಮುಂತಾದ ಸಮಸ್ಯೆಗಳು ತಲೆದೋರಬಹುದು. 

7. ಸಹಸ್ರಾರ ಚಕ್ರ

ಸಹಸ್ರಾರ ಚಕ್ರವು ತಲೆಯ ಮೇಲಿನ ಚಕ್ರವಾಗಿದ್ದು, ತಲೆ ಹಾಗೂ ಮೆದುಳಿನ ಮೇಲಿರುತ್ತದೆ. ಇದರ ಬಣ್ಣ ನೇರಳೆ. ಇದು ದೇವರು ಹಾಗೂ ಪ್ರಜ್ಞಾಶಕ್ತಿಯ ಕಾರಣಕರ್ತ. ಬೌದ್ಧಧರ್ಮದಲ್ಲಿ ಹೇಳುವ ನಿರ್ವಾಣ ಅವಸ್ಥೆ ತಲುಪಲು ಈ ಚಕ್ರ ಜಾಗೃತವಾಗುವುದು ಅಗತ್ಯ. ಈ ಚಕ್ರ ಬ್ಯಾಲೆನ್ಸ್ ಮಾಡಬಲ್ಲಿರಾದರೆ, ಉಳಿದೆಲ್ಲ ಚಕ್ರಗಳೂ ಬ್ಯಾಲೆನ್ಸ್ ಆಗುತ್ತವೆ. ಆದರೆ, ಮನುಷ್ಯ ಮಾತ್ರರಿಗೆ ಈ ಚಕ್ರವನ್ನು ಸಂಪೂರ್ಣವಾಗಿ ಬ್ಯಾಲೆನ್ಸ್ ಮಾಡುವುದು ಸಾಧ್ಯವಿಲ್ಲ ಎನ್ನಲಾಗುತ್ತದೆ. ಸಹಸ್ರಾರ ಚಕ್ರ ಕ್ರಿಯಾಶೀಲವಾಗದೆ ಇದ್ದಲ್ಲಿ ಖಿನ್ನತೆ, ಸ್ಕಿಝೋಫ್ರೆನಿಯಾ, ಅಪಸ್ಮಾರ, , ಮನೋರೋಗಗಳು, ತಲೆ ಸುತ್ತುವಿಕೆ ಮುಂತಾದವಕ್ಕೆ ಕಾರಣವಾಗುತ್ತದೆ. 

Follow Us:
Download App:
  • android
  • ios