ಹೆಂಡ್ತೀರು ಈ ಗುಟ್ಟು ಬಿಟ್ಟು ಕೊಡೋದು ಕಷ್ಟ...?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Jan 2019, 6:23 PM IST
5 things woman hides from her husband usually
Highlights

ಹೆಣ್ಣು ಭಾವನಾಜೀವಿ. ಹಾಗಂಥ ಕೆಲವು ಭಾವನೆಗಳನ್ನು ಅಪ್ಪಿ ತಪ್ಪಿಯೂ ಎಕ್ಸ್‌ಪ್ರೆಸ್ ಮಾಡುವುದೇ ಇಲ್ಲ. ಗಂಡ ತಾನಾಗೇ ಅರ್ಥ ಮಾಡಿಕೊಳ್ಳಲಿ ಎಂದು ಭಯಸುತ್ತಾರೆ. ಮತ್ತೆ ಕೆಲವು ಗೊತ್ತಾಗದಿರಲಿ ಎಂದು ಕೊಳ್ಳುತ್ತಾಳೆ. ಎಂಥ ಗುಟ್ಟುಗಳು ಅವು?

ಹೆಂಡ್ತೀರು ಖಂಡಿತವಾಗಿ ತಮ್ಮ ಪತಿ ಬಳಿ ಕೆಲವು ಗುಟ್ಟನ್ನು ಬಿಟ್ಟು ಕೊಡಲ್ಲ. ಮದುವೆ ಆದ ಮೇಲೆ ಪತ್ನಿಗೆ ಪತಿಯೇ ಸರ್ವಸ್ವ. ಆಕೆ ಸಂಪೂರ್ಣವಾಗಿ ತನ್ನೆಲ್ಲವನ್ನೂ ಆತನಿಗೆ ಧಾರೆ ಎರೆಯುತ್ತಾಳೆ. ಅಷ್ಟೇ ಯಾಕೆ ಆತನಿಂದ ಯಾವುದೇ ವಿಷಯಗಳನ್ನು ಹೆಚ್ಚಾಗಿ ಆಕೆ ಮುಚ್ಚಿಡಲು ಬಯಸೋದಿಲ್ಲ. ಆದರೂ ಕೆಲವೊಂದಿಷ್ಟು ಸೂಕ್ಷ್ಮ ವಿಚಾರಗಳಿವೆ ಅವುಗಳನ್ನು ಪತ್ನಿ ಅಪ್ಪಿ ತಪ್ಪಿಯೂ ತನ್ನ ಪತಿ ಬಳಿ ಹೇಳೋದಿಲ್ಲ, ಅಂತಹ ವಿಚಾರಗಳು ಯಾವುವು ನೋಡಿ.. 

- ಮಹಿಳೆಯರು ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ತಮ್ಮ ಬೆಸ್ಟ್ ಫ್ರೆಂಡ್ ಬಳಿ ಮಾತ್ರ ಹೇಳಿಕೊಳ್ಳುತ್ತಾರೆ. ತಮ್ಮ ಪತಿ ಬಳಿಯೂ ಹೇಳೋದಿಲ್ಲ. ಅದೆಷ್ಟು ಪ್ರಮುಖವಾದ ವಿಷವಾದರೂ ಸಹ ಬೆಸ್ಟ್ ಫ್ರೆಂಡ್‌ಗೆ ಮಾತ್ರ ಆ ಬಗ್ಗೆ ತಿಳಿಸಿರುತ್ತಾರೆ. 
- ಮಹಿಳೆ ಖಂಡಿತವಾಗಿ ಮೇಕಪ್ ಪ್ರಿಯೆ, ಆಕೆ ತನ್ನ ಪತಿ ಮುಂದೆ ಚೆನ್ನಾಗಿ ಕಾಣಬೇಕೆಂದು  ಮೇಕಪ್ ಮಾಡಿಕೊಳ್ಳುತ್ತಾಳೆ. ಆದರೆ ಯಾವತ್ತೂ ಸಹ ಆಕೆ ತನ್ನ ಬಳಿ ಯಾವೆಲ್ಲ ಮೇಕಪ್ ಐಟಮ್‌ಗಳಿವೆ ಅನ್ನೋದನ್ನು ತೋರಿಸುವುದಿಲ್ಲ. 
- ತಮ್ಮ ಎಕ್ಸ್ ಅಂದರೆ ಮಾಜಿ ಪ್ರೇಮ -ಪ್ರೇಮಿಯ ಬಗ್ಗೆ ಹೆಚ್ಚಾಗಿ ಯಾರೂ ಪತಿ ಬಳಿ ಹೇಳುವುದಿಲ್ಲ. ಇದರಿಂದ ಮುಂದೆ ಏನಾದರೂ ಸಮಸ್ಯೆಯಾಗಬಹುದು, ಸಂಬಂಧ ಮುರಿಯಬಹುದೆಂಬ ಭಯವಿರುತ್ತದೆ ಅವರಿಗೆ. 

ಇಂಥ ಗುಣವಿರೋ ಹುಡುಗರನ್ನು ನಂಬಬಾರದು..
- ಇನ್ನು ತಮ್ಮ ಕನಸಿನ ರಾಜಕುಮಾರನ ಬಗ್ಗೆ ಹತ್ತು, ಹಲವು ಕನಸುಗಳನ್ನು ಕಂಡಿರುತ್ತಾರೆ. ಕೆಲವರು ಅಂತ ರಾಜಕುಮಾರನನ್ನೇ ಮದುವೆಯಾಗಿರುತ್ತಾರೆ. ಆದರೆ ಇನ್ನು ಹಲವರಿಗೆ ಅದು ಕನಸಾಗಿಯೇ ಇರುತ್ತದೆ. ಪತಿಯಿಂದ ಈ ವಿಷಯವನ್ನು ಮುಚ್ಚಿಡುತ್ತಾರೆ. 
- ಮದುವೆಯಾಗಿ ಪತಿ ಮನೆಗೆ ಹೋದ ಮಹಿಳೆ ಅಲ್ಲಿನ ಸಂದರ್ಭಕ್ಕೆ ತಕ್ಕಂತೆ ತನ್ನನ್ನು ತಾನು ಬದಲಾಯಿಸುತ್ತಾಳೆ. ಕೆಲವೊಮ್ಮೆ ತಮ್ಮ ಮನೆಯಲ್ಲಿ ಹಾಗಿತ್ತು, ಹೀಗಿತ್ತು ಎಂದು ಹೇಳುವ ಮನಸ್ಸಾಗುತ್ತದೆ. ಆದರೆ ಅದರಿಂದ ಪತಿಯ ಮನೆಯಲ್ಲಿ ಏನಾದರೂ ಸಮಸ್ಯೆ ಉಂಟಾಗಬಹುದು ಎಂಬ ಕಾರಣದಿಂದ ಪ್ರಬುದ್ಧ ಹೆಣ್ಣು ಮಕ್ಕಳು ಸುಮ್ಮನಿದ್ದು ಬಿಡುತ್ತಾರೆ. 

ರೊಮ್ಯಾಂಟಿಕ್ ಫ್ಲರ್ಟ್ ಎಂದ್ರೆ ಹೆಣ್ಣಿಗಿಷ್ಟ

ಪ್ರೀತಿಯನ್ನು ಉಳಿಸಿಕೊಳ್ಳುವುದು ಹೇಗೆ?

ಹಿಂದೆ ಗಂಡನ್ನು ಹೆಣ್ಣು ಆಕರ್ಷಿಸುತ್ತಿದ್ದು ಹೀಗೆ..

ಹೀಗ್ ಮಾಡಿದರೆ ಅಮ್ಮನ ಆಯಸ್ಸು ವೃದ್ಧಿಯಾಗುತ್ತೆ!
 

loader