ಅಮ್ಮನ ಆಯಸ್ಸು ವೃದ್ಧಿಸಲು ಹೀಗ್ ಮಾಡಿ...!

ಪೋಷಕರೊಂದಿಗೆ ಸಮಯ ಕಳೆಯುವ ಕ್ಷಣ ಸುಮಧುರ. ಅಷ್ಟೇ ಅಲ್ಲದೆ ಇದರಿಂದ ಅವರ ಆಯಸ್ಸು ಹೆಚ್ಚಾಗುತ್ತದೆ. ಹೇಗೆಂದು ತಿಳಿಯಲು ಈ ಲೇಖನ ಓದಿ...

Do this to make you mother live longer

ಕೈಯಲ್ಲೊಂದು ಫೋನ್, ಮನೆಗೊಂದು ಟಿವಿ ಇದ್ದರೆ ಸಾಕು, ಬೇರೆ ಪ್ರಪಂಚವೇ ಬೇಡವೆನ್ನುವಂತೆ ವರ್ತಿಸಲು ಆರಂಭಿಸಿದ್ದೇವೆ. ಇದರಿಂದ ಕೇವಲ ನಿಮಗೆ ಮಾತ್ರವಲ್ಲದೆ ನಿಮ್ಮ ಪೋಷಕರ ಆರೋಗ್ಯಕ್ಕೂ ಕುತ್ತು ಎಂಬುವುದು ಗೊತ್ತಾ? 

  • ಲಾಸ್ಟ್ ಟೈಂ ತಾಯಿಯೊಂದಿಗೆ ಸಮಯ ಕಳೆದದ್ದು ಯಾವಾಗ ಎಂದು ಜ್ಞಾಪಕ ಇದ್ಯಾ? 
  • ಕೆಲಸದಲ್ಲಿ ಬ್ಯುಸಿ ಇದ್ದಾಗ ಅಮ್ಮನ ಕರೆ ಬಂದರೆ ಸಾಕು. ಸಿಡಿಮಿಡಿಗೊಳ್ಳುತ್ತೇವೆ. ಆದರೆ, 'ಏನಮ್ಮಾ..? ಎಂದು ವಿಚಾರಿಸುವ ವ್ಯವಧಾನ ನಿಮಗಿದ್ಯಾ? - ಅಮ್ಮನನ್ನು ಕೇಳಿಸಿಕೊಳ್ಳಿ. ಅಂಥದ್ದೇನೂ ಅರ್ಜೆಂಟ್ ವಿಷ್ಯವಲ್ಲದಿದ್ದರೆ ಮತ್ತೆ ಫೋನ್ ಮಾಡುವುದಾಗಿ ಹೇಳಿ. ಮಕ್ಕಳನ್ನು ಅರ್ಥ ಮಾಡಿಕೊಳ್ಳದಂಥ ತಾಯಿ ಇರೋಲ್ಲ ಬಿಡಿ. 
  • ಮಕ್ಕಳ ಭಾವನೆಗಳನ್ನು ತಾಯಿಯಷ್ಟು ಸುಲಭವಾಗಿ ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂಬುವುದು ನೆನಪಿರಲಿ. ನಿಮ್ಮ ಬಾಳಿನ ದೇವತೆಗೆ ತುಸು ಸಮಯ ಮೀಸಲಿಡಿ. 
  • ಕ್ಯಾಲಿಫೋನಿಯಾದಲ್ಲಿ ನಡೆದ ಸಂಶೋಧನೆ ಪ್ರಕಾರ  ವಯಸ್ಸಾದ ತಾಯಿಯೊಂದಿಗೆ ಹೆಚ್ಚಾಗಿ ಸಮಯ ಕಳೆದರೆ,  ಅವರ ಆಯಸ್ಸು ಹೆಚ್ಚುತ್ತಂತೆ. ಅಮ್ಮನ ಆಯಸ್ಸು ಮಾತ್ರವಲ್ಲ, ಮಕ್ಕಳ ಒತ್ತಡವೂ ಇದರಿಂದ ಕಡಿಮೆಯಾಗುವುದರಲ್ಲಿ ಅನುಮಾನವೇ ಇಲ್ಲ. 
  • ಎಲ್ಲ ಜವಾಬ್ದಾರಿ ಮುಗಿಸಿದ ಅಮ್ಮನಿಗೆ ಸುಮ್ಮನೆ ಕೂರುವುದೆಂದರೆ ಒಂಟಿತನ ಕಾಡುವುದು ಸಹಜ. ಈ ಒಂಟಿತನವೆಂಬುವುದು 15 ಸಿಗರೇಟ್‌ ಸೇದುವುದಕ್ಕೆ ಸಮವೆಂದು ಸಂಶೋಧನೆ ಹೇಳುತ್ತದೆ. ಇದು ಖಿನ್ನತೆಗೂ ಮನುಷ್ಯನನ್ನು ತಳ್ಳಬಹುದು. 

ಬೇಡದ ಮೆಸೇಜ್ ನೋಡಿ ಅಥವಾ ಸ್ನೇಹತರೊಂದಿಗೆ ಅಮುಖ್ಯ ವಿಷ್ಯವನ್ನು ಚರ್ಚಿಸೋ ಬದಲು ಅಮ್ಮನಿಗೊಂದು ಕರೆ ಮಾಡಿ ಹಾಯ್ ಹೇಳಿ. ಮಕ್ಕಳು ಊಟ ಮಾಡಿದರೋ, ಇಲ್ಲವೋ, ಏನು ತಿಂದರೋ ಎಂದು ಆತಂಕಗೊಳ್ಳುವ ಮಾತೃ ಹೃದಯಿ ಊಟ ಮಾಡಿದ್ಯಾ ಎಂಬುದನ್ನು ವಿಚಾರಿಸಿಕೊಳ್ಳಿ. ಜೀವನದ ಸಂಧ್ಯಾ ಕಾಲದಲ್ಲಿ ಅಮ್ಮನ ಮೊಗದಲ್ಲಿ ನಗು ಇರುವಂತೆ ನೋಡಿಕೊಳ್ಳುವುದು ಮಕ್ಕಳ ಹೊಣೆ. ಬೇರೇನೂ ಬಯಸದ ತಾಯಿಗೆ ಒಂಟಿತನ ಕಾಡದಂತೆ ನೋಡಿಕೊಳ್ಳಲಾಗುವುದಿಲ್ಲವೇ? 

Latest Videos
Follow Us:
Download App:
  • android
  • ios