ಪಿಸ್ತಾ ಯಾವ ರೀತಿ ಆರೋಗ್ಯಕ್ಕೆ ಲಾಭದಾಯಕವಾಗಿದೆಯೋ ಅದೇ ರೀತಿ ಇದು ಸೌಂದರ್ಯ ಹೆಚ್ಚಿಸುವಲ್ಲಿಯೂ ಮುಖ್ಯ ಪಾತ್ರ ವಹಿಸುತ್ತದೆ. ಇದರ ಸೇವನೆಯಿಂದ ಮೆದುಳು ಚುರುಕಾಗುತ್ತದೆ. ಪಿಸ್ತಾ ಸೇವನೆಯಿಂದ ಶಕ್ತಿ ಸಿಗುತ್ತದೆ. ಇದರಲ್ಲಿ ಫೈಬರ್, ಪ್ರೊಟೀನ್, ವಿಟಮಿನ್ ಸಿ, ಸತು, ಪೊಟ್ಯಾಷಿಯಂ, ಐರನ್, ಎಲ್ಲವೂ ಇವೆ. ಇದನ್ನು ಪ್ರತಿ ದಿನ ಸೇವಿಸಿದರೆ ಸೌಂದರ್ಯ ಹೆಚ್ಚುತ್ತದೆ. 

ತ್ವಚೆ ಹೊಳೆಯುತ್ತದೆ: ಪಿಸ್ತಾದಲ್ಲಿ ಫ್ಯಾಟಿ ಆ್ಯಸಿಡ್ ಇರುತ್ತದೆ. ಇವುಗಳ ಸೇವನೆಯಿಂದ ತ್ವಚೆ ಆರೋಗ್ಯದಿಂದಿರುತ್ತದೆ. ಜೊತೆ ತ್ವಚೆ  ಹೊಳೆಯುತ್ತದೆ. 

ನ್ಯಾಚುರಲ್ ಮಾಯಿಶ್ಚರೈಸರ್:  ಪಿಸ್ತಾ ಒಂದು ನ್ಯಾಚುರಲ್ ಮಾಯಿಶ್ಚರೈಸರ್. ಪ್ರತಿದಿನ ಪಿಸ್ತಾ ಬಳಸುವುದರಿಂದ ಚರ್ಮ ಕೋಮಲ ಮತ್ತು ಮೃದುವಾಗುತ್ತದೆ. 

ವಯಸ್ಸಾಗುವಿಕೆಯನ್ನು ತಡೆಯುತ್ತದೆ : ವಯಸ್ಸಾಗುವಿಕೆಯ ಲಕ್ಷಣಗಳಾದ  ರಿಂಕಲ್, ಸುಕ್ಕು, ಕಲೆ ಡ್ರೈ ನೆಸ್ ಎಲ್ಲ ಸಮಸ್ಯೆಯನ್ನೂ ನಿವಾರಿಸಿ, ನಿಮ್ಮನ್ನು ಎಂಗ್ ಆ್ಯಂಡ್ ಎನೆರ್ಜಿಟಿಕ್ ಆಗಿ ಕಾಣುವಂತೆ ಮಾಡುತ್ತದೆ. 

ಸ್ಕಿನ್ ಆರೋಗ್ಯದಿಂದಿರುತ್ತದೆ : ಪಿಸ್ತಾ ಸೇವಿಸುವುದರಿಂದ ತ್ವಚೆಯ ಆರೋಗ್ಯ ಹೆಚ್ಚುತ್ತದೆ. 

ಕೂದಲು ಉದುರುವಿಕೆ ಕಡಿಮೆಯಾಗುತ್ತದೆ: ನಿಮ್ಮ ಕೂದಲು ಹೆಚ್ಚಾಗಿ ಉದುರುತ್ತಿದ್ದರೆ ಪಿಸ್ತಾ ಹೇರ್ ಪ್ಯಾಕ್ ಮಾಡಿ ತೆಂಗಿನ ಎಣ್ಣೆಯೊಂದಿಗೆ ತಲೆಗೆ ಹಚ್ಚಿ. 

ಪ್ರಾಚೀನ ಮಹಿಳೆಯರ ಬ್ಯೂಟಿ ಸೀಕ್ರೇಟ್ ಏನ್ ಗೊತ್ತಾ..?