ಮೊಟ್ಟೆ : ಪ್ರಾಚೀನ ಕಾದಲ್ಲಿ ಮಹಿಳೆಯರು ತಮ್ಮ ಸೌಂದರ್ಯ ವರ್ಧನೆಗೆ ಮೊಟ್ಟೆಗಳನ್ನು ಬಳಸುತ್ತಿದ್ದರು.  ಮೊಟ್ಟೆಯ ಬಿಳಿ ಭಾಗವನ್ನು ಮುಖಕ್ಕೆ ಹಚ್ಚಿ ಒಣಗಿದ ಮೇಲೆ ತೊಳೆಯುವುದರಿಂದ ಮುಖದ ಚರ್ಮ ಹೆಚ್ಚು ಟೈಟ್ ಆಗುತ್ತದೆ.  ಅಲ್ಲದೇ ಚರ್ಮ ಹೈಡ್ರೇಟ್ ಆಗುತ್ತದೆ. 

ಸೌತೇಕಾಯಿ : ಸೌತೇಕಾಯಿ ಹೆಚ್ಚಿ ಕಣ್ಣ ಮೇಲೆ ಇರಿಸಿಕೊಳ್ಳುವುದರಿಂದ ಕಣ್ಣಿನ ಡಾರ್ಕ್ ಸರ್ಕಲ್ ಮಾಯವಾಗುತ್ತದೆ.  ಅಲ್ಲದೇ ಕಣ್ಣುಗಳು ರೀಫ್ರೆಶ್ ಆಗುತ್ತವೆ. 

ಟೀ ಬ್ಯಾಗ್ : ಟೀ ಬ್ಯಾಗ್ ಕೂಡ ಸೌಂದರ್ಯ ವರ್ಧಕವಾಗಿ ಬಳಕೆ ಮಾಡಬಹುದು. ಡಾರ್ಕ್ ಸರ್ಕಲ್ ತೊಲಗಿಸಲು ಕಣ್ಣಿನ ಮೇಲೆ ಇರಿಸಿಕೊಳ್ಳಬೇಕು. 

ನಿಂಬೆ ಮತ್ತು ಜೇನುತುಪ್ಪ : ಬಿಸಿಲಿನಿಂದ ಆಗುವ ಟ್ಯಾನ್ ರಿಮೂವ್ ಮಾಡಲು ಅತ್ಯುಪಯುಕ್ತ. ನಿಂಬೆಯಲ್ಲಿ ವಿಟಮಿನ್ ಸಿ ಪ್ರಮಾಣ ಅತ್ಯಧಿಕ ಪ್ರಮಾಣದಲ್ಲಿ ಇದ್ದು,  ಚರ್ಮವನ್ನು ಬ್ರೈಟ್ ಆಗಿಸುತ್ತದೆ.   ಲಿಂಬೆ - ಜೇನು ಸೇರಿದರೆ ನೈಸರ್ಗಿಕ ಬ್ಲೀಚ್ ಆಗಿ ಕಾರ್ಯ ನಿರ್ವಹಿಸುತ್ತದೆ.

ಕೇಸರಿ : ಅತ್ಯಂತ ಹೆಚ್ಚು ಬೆಲೆ ಬಾಳುವ ಕೇಸರಿ ಚರ್ಮದ ಸೌಂದರ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಚರ್ಮಕ್ಕೆ ಹಚ್ಚುವುದರಿಂದ ಸೌಂದರ್ಯವು ಹೆಚ್ಚಾಗಲಿದೆ. 

ಹಾಲು - ಜೇನು :  ಈಜಿಪ್ಟ್ ರಾಣಿ ಕ್ಲಿಯೋಪಾತ್ರ ತನ್ನ ಸೌಂದರ್ಯ ಕಾಪಾಡಿಕೊಳ್ಳಲು ಹಾಲನ್ನು ಬಳಕೆ ಮಾಡುತ್ತಿದ್ದಳು ಎನ್ನಲಾಗುತ್ತದೆ. ಅದರಂತೆ ಹಾಲು ಹಾಗೂ ಜೇನಿನ ಬಳಕೆಯು ಚರ್ಮದ ಸೌದರ್ಯ ಕಾಪಾಡುತ್ತದೆ.