Kitchen Tips: ಅಡುಗೆ ಮನೆಯಲ್ಲಿ ಅಗತ್ಯವಾಗಿ ಬೇಕಾಗುವ ಕತ್ತರಿಯನ್ನು ಮತ್ತೆ ಶಾರ್ಪ್ ಮಾಡಲು ನೀವು ಹೊರಗಡೆ ಹೋಗಬೇಕಾಗಿಲ್ಲ. ಬದಲಾಗಿ ಮನೆಯಲ್ಲಿ ನ್ಯೂಸ್ ಪೇಪರ್ ಇದ್ದರೆ, ಅದನ್ನು ಬಳಸಿ ಸುಲಭವಾಗಿ ಕೆಲವೇ ನಿಮಿಷಗಳಲ್ಲಿ ಚಾಕು ಶಾರ್ಪ್ ಮಾಡಬಹುದು.
ನ್ಯೂಸ್ ಪೇಪರ್ ಬಳಸಿ ಚಾಕು ಶಾರ್ಪ್ ಮಾಡೋದು ಹೇಗೆ?
ಅಡುಗೆಮನೆಯಲ್ಲಿ ಬಳಸುವ ಚಾಕು ಕೆಲವು ಸಮಯ ಕಳೆದ ಬಳಿಕ ಅದರ ಶಾರ್ಪ್ ನೆಸ್ ಕಳೆದುಕೊಂಡು ಉಪಯೋಗಕ್ಕೆ ಬರದಂತೆ ಮೊಂಡು ಆಗೋದು ಸಾಮಾನ್ಯ. ಇದರಿಂದ ತರಕಾರಿ, ಹಣ್ಣು ಅಥವಾ ಇತರ ವಸ್ತುಗಳನ್ನು ಕತ್ತರಿಸಲು ಹೆಚ್ಚು ಶ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹಾಗಂತ ಚಾಕುವನ್ನು ಶಾರ್ಪ್ ಮಾಡಲು ದುಬಾರಿ ಶಾರ್ಪನರ್ ಖರೀದಿಸುವ ಅಗತ್ಯವಿಲ್ಲ. ಅಥವಾ ಹೊರಗಡೆ ತೆಗೆದುಕೊಂಡು ಹೋಗುವ ಅಗತ್ಯವೂ ಇಲ್ಲ. ಮನೆಯಲ್ಲಿರುವ ಹಳೆಯ ಸುದ್ದಿಪತ್ರಿಕೆ (ನ್ಯೂಸ್ ಪೇಪರ್) ಬಳಸಿ ಚಾಕನ್ನು ಶಾರ್ಪ್ ಮಾಡಬಹುದು. ಅದು ಹೇಗೆ ಇಲ್ಲಿದೆ ಸಿಂಪಲ್ ಟ್ರಿಕ್ಸ್.
ನ್ಯೂಸ್ ಪೇಪರ್ ನಿಂದ ಚಾಕುವನ್ನು ಹರಿತಗೊಳಿಸಬಹುದೇ?
ವೃತ್ತಪತ್ರಿಕೆಯ ಶಾಯಿ ಮತ್ತು ಸೂಕ್ಷ್ಮವಾದ ವಿನ್ಯಾಸವು ಎಬ್ರೆಸಿವ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚಾಕುವಿನ ಅಂಚನ್ನು ಶಾರ್ಪ್ ಮಾಡಲು ಸಹಾಯ ಮಾಡುತ್ತದೆ.
ನ್ಯೂಸ್ ಪೇಪರ್ ಬಳಸಿ ಚಾಕು ಶಾರ್ಪ್ ಮಾಡೋದು ಹೇಗೆ?
- ಸುದ್ದಿಪತ್ರಿಕೆಯನ್ನು 4–5 ಬಾರಿ ಮಡಚಿ
- ಅದನ್ನು ಸಮತಟ್ಟಾದ ಮೇಜಿನ ಮೇಲೆ ಇಡಿ.
- ಚಾಕುವನ್ನು ಸುಮಾರು 15–20 ಡಿಗ್ರಿ ಕೋನದಲ್ಲಿ ಹಿಡಿಯಿರಿ.
- ಚಾಕಿನ ಹಿಂಭಾಗದಿಂದ ಮುಂಭಾಗದ ತುದಿವರೆಗೆ ನಿಧಾನವಾಗಿ ಪತ್ರಿಕೆಯ ಮೇಲೆ ಒರೆಸಿ.
- ಒಂದು ಬದಿಯಲ್ಲಿ 10–15 ಬಾರಿ ಮಾಡಿದ ನಂತರ ಮತ್ತೊಂದು ಬದಿಯಲ್ಲೂ ಅದೇ ರೀತಿ ಮಾಡಿ.
- ಕೊನೆಯಲ್ಲಿ ಸ್ವಚ್ಛವಾದ ಬಟ್ಟೆಯಿಂದ ಚಾಕುವನ್ನು ಒರೆಸಿ.
- ಈಗ ನಿಮ್ಮ ಚಾಕ್ ಮೊದಲಿಗಿಂತಲೂ ಶಾರ್ಪ್ ಆಗಿರೋದನ್ನು ನೀವು ನೋಡಬಹುದು.
ಚಾಕು ಶಾರ್ಪ್ ಮಾಡುವಾಗ ಗಮನಿಸಬೇಕಾದ ಸಂಗತಿಗಳು
- ಹೆಚ್ಚು ಒತ್ತಡ ಕೊಡಬೇಡಿ
- ನಿರಂತರವಾಗಿ ಒಂದೇ ಆಂಗಲ್ ಕಾಯ್ದುಕೊಳ್ಳಿ.
- ಚಾಕು ತುಂಬಾ ಮಂದವಾಗಿದ್ದರೆ ಈ ಪ್ರಕ್ರಿಯೆಯನ್ನು ಎರಡು ಅಥವಾ ಮೂರು ಬಾರಿ ಪುನರಾವರ್ತಿಸಬಹುದು.
- ಸುರಕ್ಷತೆಯ ದೃಷ್ಟಿಯಿಂದ ಚಾಕುವಿನ ಚಲನೆ ಬೆರಳುಗಳಿಂದ ದೂರವಾಗಿರಲಿ.
ಕೊನೆಯದಾಗಿ ಒಂದು ಮಾತು ನೆನಪಿರಲಿ
ನ್ಯೂಸ್ ಪೇಪರ್ ಬಳಸಿ ಚಾಕು ಶಾರ್ಪ್ ಮಾಡುವುದು ಕಡಿಮೆ ವೆಚ್ಚದ ಮತ್ತು ಸುಲಭವಾದ ಟ್ರಿಕ್ಸ್ ಆಗಿದೆ. ನೀವು ಪ್ರತಿದಿನ ಸಣ್ಣ ಪುಟ್ಟ ತರಕಾರಿ, ಹಣ್ಣುಗಳನ್ನು ಕತ್ತರಿಸುವ ಚಾಕುವನ್ನು ಶಾರ್ಪ್ ಆಗಿರಿಸಲು ಇದನ್ನು ಟ್ರೈ ಮಾಡಬಹುದು. ಆದರೆ, ದೊಡ್ಡ ವಸ್ತುಗಳನ್ನು ಕತ್ತರಿಸಲು ಈ ಟ್ರಿಕ್ಸ್ ವರ್ಕ್ ಆಗುವುದಿಲ್ಲ.


