Kannada

ಟೊಮೆಟೊ

ಮನೆಯ ಕೈತೋಟದಲ್ಲಿ ಅಥವಾ ಗ್ರೋ ಬ್ಯಾಗ್‌ಗಳಲ್ಲಿ ಟೊಮೆಟೊ ಗಿಡ ಬೆಳೆಸಿದ್ದರೂ ಸರಿಯಾಗಿ ಫಸಲು ಸಿಗುತ್ತಿಲ್ವಾ? ಹಾಗಿದ್ರೆ ಈ ಕೆಲವು ವಿಷಯಗಳ ಬಗ್ಗೆ ಗಮನ ಹರಿಸಿ.

Kannada

ಸೂರ್ಯನ ಬೆಳಕು

ಟೊಮೆಟೊ ಗಿಡಕ್ಕೆ ಚೆನ್ನಾಗಿ ಬಿಸಿಲು ಬೇಕು. ದಿನಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ನೇರ ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಗಿಡಗಳನ್ನು ಇಡಿ.

Image credits: Getty
Kannada

ಸರಿಯಾಗಿ ನೀರು ಹಾಕಿ

ಗಿಡಕ್ಕೆ ನಿಯಮಿತವಾಗಿ ನೀರುಣಿಸುವುದು ಬಹಳ ಮುಖ್ಯ. ಮಣ್ಣು ಯಾವಾಗಲೂ ತೇವಾಂಶದಿಂದ ಕೂಡಿರಬೇಕು, ಆದರೆ ನೀರು ನಿಲ್ಲಬಾರದು. ಬೆಳಗ್ಗಿನ ಹೊತ್ತು ನೀರು ಹಾಕಿದರೆ ಒಳ್ಳೆಯದು.

Image credits: Getty
Kannada

ಫಂಗಸ್ ರೋಗಗಳು

ಗಿಡದ ಬುಡಕ್ಕೆ ನೇರವಾಗಿ ನೀರು ಹಾಕಿ. ಎಲೆ ಮತ್ತು ಕಾಂಡಗಳ ಮೇಲೆ ನೀರು ಬಿದ್ದರೆ ಫಂಗಸ್ ರೋಗಗಳು ಬರುವ ಸಾಧ್ಯತೆ ಇರುತ್ತದೆ.

Image credits: Getty
Kannada

ಗಿಡಕ್ಕೆ ಆಸರೆ ನೀಡಿ

ಗಿಡ ಬೆಳೆಯುವಾಗಲೇ ಅದಕ್ಕೆ ಕೋಲು ಅಥವಾ ಕಡ್ಡಿಯಿಂದ ಆಸರೆ ನೀಡಿ. ಟೊಮೆಟೊ ಭಾರಕ್ಕೆ ಗಿಡದ ಕಾಂಡ ಮುರಿಯದಂತೆ ಮತ್ತು ಕಾಯಿಗಳು ಮಣ್ಣಿಗೆ ತಾಗಿ ಕೊಳೆಯದಂತೆ ಇದು ತಡೆಯುತ್ತದೆ.

Image credits: Getty
Kannada

ಸಾವಯವ ಗೊಬ್ಬರ ಹಾಕಿ

ಗಿಡ ನೆಡುವ ಮಣ್ಣಿನ ಮಿಶ್ರಣದಲ್ಲಿ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಚೆನ್ನಾಗಿ ಬೆರೆಸಿ. ಗಿಡ ಬೆಳೆದಂತೆ 15 ದಿನಕ್ಕೊಮ್ಮೆ ಕಡಲೆ ಹಿಂಡಿ, ಬೇವಿನ ಹಿಂಡಿ, ಮತ್ತು ಗಂಜಿಯನ್ನು ತೆಳ್ಳಗೆ ಮಾಡಿ ಗಿಡಕ್ಕೆ ಹಾಕಬಹುದು.

Image credits: Getty
Kannada

ಪ್ರೂನಿಂಗ್ ಮಾಡಿ

ಗಿಡದ ಬುಡದಲ್ಲಿ, ಮಣ್ಣಿಗೆ ತಾಗುವಂತಿರುವ ಎಲೆಗಳನ್ನು ಕತ್ತರಿಸಿ ತೆಗೆಯಿರಿ. ಇದು ಮಣ್ಣಿನಿಂದ ಬರುವ ಫಂಗಸ್ ಸೋಂಕನ್ನು ತಡೆಯುತ್ತದೆ.

Image credits: Getty
Kannada

ಪರಾಗಸ್ಪರ್ಶ

ಪಾಟ್‌ಗಳಲ್ಲಿ ಗಿಡ ಬೆಳೆಸುವಾಗ ಪರಾಗಸ್ಪರ್ಶಕ್ಕೆ ಗಾಳಿ ಅಥವಾ ಜೇನುನೊಣಗಳು ಕಡಿಮೆ ಇರುತ್ತವೆ. ಆಗ, ಹೂವು ಬಿಟ್ಟಿರುವ ಕೊಂಬೆಗಳನ್ನು ಬೆಳಿಗ್ಗೆ ನಿಮ್ಮ ಬೆರಳಿನಿಂದ ನಿಧಾನವಾಗಿ ತಟ್ಟಿ.

Image credits: Getty
Kannada

ಕ್ಯಾಲ್ಸಿಯಂ ಕೊರತೆ

ಕ್ಯಾಲ್ಸಿಯಂ ಕೊರತೆ ನೀಗಿಸಲು ಗಿಡ ನೆಡುವಾಗ ಮತ್ತು ಆಗಾಗ ಸ್ವಲ್ಪ ಸುಣ್ಣ ಅಥವಾ ಮೊಟ್ಟೆ ಸಿಪ್ಪೆಯ ಪುಡಿಯನ್ನು ಮಣ್ಣಿಗೆ ಸೇರಿಸುವುದು ಒಳ್ಳೆಯದು.

Image credits: Getty
Kannada

ರೋಗ-ಕೀಟ ನಿಯಂತ್ರಣ

ಟೊಮೆಟೊ ಗಿಡಕ್ಕೆ ಎಲೆ ಸುರುಳಿ ರೋಗ ಮತ್ತು ಬಿಳಿ ನೊಣಗಳ ಕಾಟ ಹೆಚ್ಚು. ಇದನ್ನು ತಡೆಯಲು ವಾರಕ್ಕೊಮ್ಮೆ ಬೇವಿನೆಣ್ಣೆ-ಬೆಳ್ಳುಳ್ಳಿ ಮಿಶ್ರಣ ಅಥವಾ ಸೋಪಿನ ದ್ರಾವಣವನ್ನು ಎಲೆಗಳ ಎರಡೂ ಬದಿಗೆ ಸಿಂಪಡಿಸಿ.

Image credits: Getty

ಫ್ರಿಡ್ಜ್‌ನಲ್ಲಿ ಯಾವ ತರಕಾರಿ ಎಲ್ಲಿಡಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್

ಬಾಯಿ ಹುಣ್ಣು ಬಂತೆಂದು ಬಾಯಿ ಬಡ್ಕೋಬೇಡಿ, ಈ 6 ಮನೆಮದ್ದು ಹಚ್ಚಿ ನೋಡಿ!

ಡಬ್ಬದಲ್ಲಿಟ್ಟ ಬೆಲ್ಲ ನೀರಾಗಿದ್ಯಾ? ಈ ಟ್ರಿಕ್ಸ್ ಮೂಲಕ ವರ್ಷ ಪೂರ್ತಿ ಫ್ರೆಶ್ ಆಗಿರಿಸಿ

Pressure Cooker: ನೀವು ಹೀಗೆ ಮಾಡಿದ್ರೆ ಪ್ರೆಶರ್ ಕುಕ್ಕರ್‌ನಿಂದ ನೀರು ಹೊರಬರಲ್ಲ