Kitchen Tips: ಹಾಲು ಬೇಗ ಹಾಳಾಗ್ಬಾರದು ಅಂದ್ರೆ ಸುಲಭವಾಗಿರುವ ಈ ಟಿಪ್ಸ್ ಫಾಲೋ ಮಾಡಿ
ಬೆಳಿಗ್ಗೆ ಟೀನಿಂದ ಹಿಡಿದು ಮೊಸರು, ಮಜ್ಜಿಗೆ ಬೆಣ್ಣೆ ಅಂತ ಎಲ್ಲದಕ್ಕೂ ಹಾಲು ಬೇಕು. ಈ ಹಾಲನ್ನು ಹಾಳಾಗ್ದಂತೆ ನೋಡ್ಕೊಳ್ಳೋದು ದೊಡ್ಡ ಚಾಲೆಂಜ್. ಬೇಸಿಗೆಯಲ್ಲಿ ಮಧ್ಯಾಹ್ನ ಆಗೋಷ್ಟ್ರಲ್ಲಿ ಹಾಳು ಒಡೆದಿರುತ್ತೆ. ಸಿಂಪಲ್ ಟಿಪ್ಸ್ ಬಳಸಿ ನೀವು ಹಾಲು ಹಾಳಾಗ್ದಂತೆ ನೋಡ್ಕೊಳ್ಬಹುದು.

ಖರೀದಿಸಿದ ತಕ್ಷಣ ಫ್ರಿಜ್ ನಲ್ಲಿಡಿ
ಹಾಲನ್ನು ಖರೀದಿ ಮಾಡಿ ಮನೆಗೆ ತಂದ ತಕ್ಷಣ ಅದನ್ನು ಫ್ರಿಜ್ ನಲ್ಲಿಡೋದು ಮೊದಲ ಉಪಾಯ. ಬೇಸಿಗೆಯಲ್ಲಿ ಹಾಲು ಸಾಮಾನ್ಯ ತಾಪಮಾನದಲ್ಲಿ ತುಂಬಾ ಸಮಯ ಇದ್ರೆ ಬೇಗ ಹಾಳಾಗುತ್ತೆ. ಹಾಲಿನಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಬೇಗ ಆಗುತ್ತೆ. ಹಾಗಾಗಿ ಹಾಲು ಖರೀದಿಸಿ ತಂದ ತಕ್ಷಣ ನೀವು ಅದನ್ನು ಫ್ರಿಜ್ ನಲ್ಲಿಡಿ. ಇನ್ನೇನು ಸ್ವಲ್ಪ ಟೈಂನಲ್ಲೇ ಹಾಲನ್ನು ಕಾಯಿಸ್ತೇವೆ ಎನ್ನುವವರು ಕೂಡ ಫ್ರಿಜ್ ನಲ್ಲಿ ಹಾಲಿಡೋದನ್ನು ರೂಢಿಸಿಕೊಳ್ಳಿ.
ಫ್ರಿಜ್ ನಲ್ಲಿ ಹಾಲನ್ನು ಎಲ್ಲಿಡ್ಬೇಕು?
ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆ ಫ್ರಿಜ್ ಬಾಗಿಲಿಗೆ ಹಾಲಿನ ಪ್ಯಾಕ್ ಕಾಣ್ತೇವೆ. ಆದ್ರೆ ಇದು ಹಾಲಿಡುವ ಜಾಗವಲ್ಲ. ಫ್ರಿಜ್ ಬಾಗಿಲನ್ನು ಆಗಾಗ ತೆಗೆಯೋದ್ರಿಂದ ಅದ್ರ ತಾಪಮಾನ ಬದಲಾಗ್ತಿರುತ್ತದೆ. ನೀವು ಹಾಲಿನ ಪ್ಯಾಕನ್ನು ಫ್ರಿಜ್ ಒಳಗಿರುವ ಶೆಲ್ಫ್ ನಲ್ಲಿ ಇಡ್ಬೇಕು. ಅಲ್ಲಿನ ತಾಪಮಾನ ಸಾಮಾನ್ಯವಾಗಿ ಒಂದೇ ರೀತಿ ಇರೋದ್ರಿಂದ ಹಾಲು ಬೇಗ ಹಾಳಾಗೋದಿಲ್ಲ.
ಪದೇ ಪದೇ ಬಿಸಿ ಮಾಡ್ಬೇಡಿ
ಹಾಲನ್ನು ಆಗಾಗ ಬಿಸಿ ಮಾಡುವ ಹವ್ಯಾಸ ಅನೇಕರಿಗಿದೆ. ನೀವು ಆಗಾಗ ಹಾಲನ್ನು ಬಿಸಿ ಮಾಡಿ ಮತ್ತೆ ಅದನ್ನು ತಣ್ಣಗಾಗಲು ಫ್ರಿಜ್ ನಲ್ಲಿಟ್ರೆ ಹಾಲು ಗುಣಮಟ್ಟ ಕಳೆದುಕೊಳ್ಳೋದಲ್ಲದೆ ಅದ್ರ ಜೀವಿತಾವಧಿ ಬೇಗ ಕಡಿಮೆಯಾಗುತ್ತದೆ. ನೀವು ಅಗತ್ಯವಿರುವ ಹಾಲನ್ನು ಒಂದು ಪಾತ್ರೆಗೆ ಹಾಕಿ ಅದನ್ನು ಬಿಸಿ ಮಾಡಿ. ಉಳಿದ ಹಾಲನ್ನು ಫ್ರಿಜ್ ನಲ್ಲಿಡಿ.
ಪಾತ್ರೆ ಸ್ವಚ್ಛವಾಗಿರಲಿ
ಹಾಲನ್ನು ಪಾತ್ರೆಗೆ ಹಾಕುವಾಗ ಪಾತ್ರೆ ಸ್ವಚ್ಛವಾಗಿದೆಯೇ, ಒಣಗಿದೆಯೇ ಎಂಬುದನ್ನು ನೋಡಿ. ಕೊಳಕಾದ ಪಾತ್ರೆಗೆ ಹಾಲು ಹಾಕಿದ್ರೆ ಹಾಲು ಹಾಳಾಗುತ್ತದೆ. ಹಾಲಿಗಾಗಿಯೇ ಪ್ರತ್ಯೇಕ ಪಾತ್ರೆ ಇಡುವುದು ಉತ್ತಮ. ಗಾಳಿಯಾಡದ ಪಾತ್ರೆಯಲ್ಲಿ ಹಾಲಿಡಿ. ನೀವು ಹಾಲನ್ನು ಫ್ರಿಜ್ ನಲ್ಲಿ ಮುಚ್ಚಿಡಬೇಕು. ಬೇರೆ ಆಹಾರದ ವಾಸನೆ ಹಾಲಿಗೆ ತಗುಲದಂತೆ ನೋಡಿಕೊಳ್ಳಿ.
ಅತಿ ಹೆಚ್ಚು ಕುದಿಸ್ಬೇಡಿ
ಹಾಲನ್ನು ಅತಿ ಹೆಚ್ಚು ಕುದಿಸಿದ್ರೆ ಅದು ಗುಣಮಟ್ಟ ಕಳೆದುಕೊಳ್ಳುತ್ತದೆ. ಹಾಲನ್ನು ನೀವು ಸಮ ಪ್ರಮಾಣದಲ್ಲಿ ಕುದಿಸಿ ತಣ್ಣಗಾದ ತಕ್ಷಣ ಫ್ರಿಜ್ ನಲ್ಲಿ ಇಡಬೇಕು. ಹಾಗೆಯೇ ಫ್ರಿಜ್ ತಾಪಮಾನ ಪರಿಶೀಲನೆ ಮಾಡ್ತಿರಬೇಕು. ಫ್ರಿಜ್ ತಾಪಮಾನ ಕಡಿಮೆ ಇದ್ರೆ ಹಾಲು ಹಾಳಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

