ಅಡುಗೆಮನೆಯಲ್ಲಿ ಹೆಚ್ಚು ದಿನ ಸಂಗ್ರಹಿಸಿಟ್ಟ ಹಿಟ್ಟು ಮತ್ತು ಅಕ್ಕಿಯಲ್ಲಿ ಹುಳುಗಳಾಗುವುದು ಸಾಮಾನ್ಯ. ಜರಡಿ ಹಿಡಿಯುವ ಬದಲು ನಾವು ಹೇಳುವ ಸರಳ ಉಪಾಯದಿಂದ ಈ ಕೀಟಗಳನ್ನು ಸುಲಭವಾಗಿ ಹೊರಹಾಕಬಹುದು. ಅಕ್ಕಿಗೆ ಲವಂಗ ಅಥವಾ ಪುಲಾವ್ ಎಲೆ ಬಳಸಿ ಹುಳು ಬರದಂತೆ ತಡೆಯಬಹುದು.
Kannada Kitchen Hacks: ಕಲೆವೊಮ್ಮೆ ಅಡುಗೆಮನೆಯಲ್ಲಿಟ್ಟ ವಸ್ತುಗಳನ್ನು ಮರೆಯುತ್ತವೆ. ಇದರಿಂದ ಆ ವಸ್ತುಗಳಲ್ಲಿ ಹುಳು ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಹಾಳಾಗುತ್ತದೆ. ಅದರಲ್ಲಿಯೂ ಗೋಧಿ, ಜೋಳ, ಕಡಲೆ ಅಥವಾ ಸಜ್ಜೆ ಹಿಟ್ಟನ್ನು ಹೆಚ್ಚು ದಿನ ಸ್ಟೋರ್ ಮಾಡಿದ್ರೆ ಹುಳು ಆಗುತ್ತವೆ. ಸಣ್ಣ ಸಣ್ಣ ಕೀಟ ಅಥವಾ ಚಿಟ್ಟೆಯಂತಹ ಕೀಟಗಳು ಮನೆ ತುಂಬೆಲ್ಲಾ ಹಾರಾಡಲು ಶುರು ಮಾಡುತ್ತವೆ. ಹಿಟ್ಟಿನಲ್ಲಿ ಹುಳು ಆದ್ರೆ ಅದನ್ನು ಜರಡಿ ಹಿಡಿಯಬೇಕಾಗುತ್ತದೆ. ಜರಡಿ ಹಿಡಿಯುವ ಕೆಲಸ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇಂದು ನಿಮಗೆ ಜರಡಿ ಹಿಡಿಯದೇ ಹಿಟ್ಟಿನಲ್ಲಾಗಿರುವ ಹುಳುಗಳನ್ನು ಹೇಗೆ ತೆಗೆಯೋದು ಎಂದು ನೋಡೋಣ ಬನ್ನಿ.
ಸಾಮಾನ್ಯವಾಗಿ ಜನರು 15 ಅಥವಾ ಒಂದು ತಿಂಗಳಿಗೆ ಆಗುವಷ್ಟು ಹಿಟ್ಟನ್ನು ಮನೆಯಲ್ಲಿ ಸ್ಟೋರ್ ಮಾಡಿಕೊಳ್ಳುತ್ತಾರೆ. ಕೊನೆಗೆ ಇನ್ನೊಂದೆರಡು ಬಾರಿ ಬಳಕೆಯಾಗುವಷ್ಟು ಹಿಟ್ಟು ಉಳಿದಾಗ ಅದರಲ್ಲಿ ಸಣ್ಣ ಹುಳು ಅಥವಾ ಕೀಟಗಳು ಕಾಣಿಸಿಕೊಳ್ಳಲು ಆರಂಭಿಸುತ್ತವೆ. ಹುಳು ಆಗಿರುವ ಸಂದರ್ಭದಲ್ಲಿ ಎರಡ್ಮೂರು ಬಾರಿ ಜರಡಿ ಹಿಡಿಯಬೇಕಾಗುತ್ತದೆ. ಜರಡಿ ಹಿಡಿಯಲು ಸಮಯವಿಲ್ಲದಿದ್ರೆ ಈ ಸಣ್ಣ ಉಪಾಯವನ್ನು ನೀವು ಬಳಸಬಹುದು. ಈ ಉಪಾಯ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಹುಳು ತೆಗೆಯಲು ಏನು ಮಾಡಬೇಕು?
ಮೊದಲಿಗೆ ಒಂದು ಅಗಲವಾದ ಪಾತ್ರೆಯನ್ನು ತೆಗೆದುಕೊಳ್ಳಿ. ಈ ಪಾತ್ರೆಯಲ್ಲಿ ಕಾಲು ಭಾಗದಷ್ಟು ನೀರು ಹಾಕಿಕೊಳ್ಳಿ. ನಂತರ ಈ ಪಾತ್ರೆಯಲ್ಲಿ ಹುಳು ಆಗಿರುವ ಹಿಟ್ಟನ್ನು ಒಂದು ಬೌಲ್ಗೆ ಹಾಕಿ ಇದರೊಳಗೆ ಇಟ್ಟುಕೊಳ್ಳಿ. ನಂತರ ಒಂದು ಚಿಕ್ಕ ಬೌಲ್ನಲ್ಲಿ ವಿನೇಗರ್ ತುಂಬಿಸಿ, ಹಿಟ್ಟಿನ ಪಾತ್ರೆಯ ಮಧ್ಯದಲ್ಲಿಡಿ.
ವಿನೇಗರ್ ಕಡುವಾಸನೆಗೆ ಹುಳುಗಳು ಹಿಟ್ಟಿನಿಂದ ಹೊರಗೆ ಬರಲು ಆರಂಭಿಸುತ್ತದೆ. ಹೊರಗಡೆ ಬರುತ್ತಿದ್ದಂತೆ ಹುಳುಗಳು ನೀರಿನಲ್ಲಿ ಬಿದ್ದು ಸಾಯುತ್ತವೆ. ಇದರಿಂದ ಸರಳವಾಗಿ ಹುಳುಗಳೇ ಹಿಟ್ಟಿನಿಂದ ಹೊರಗೆ ಹೋಗಿ ನಿಮ್ಮ ಕೆಲಸವನ್ನು ಸರಳವಾಗಿ ಮಾಡುತ್ತದೆ. ಹುಳು ಹೋದ್ಮೇಲೆ ಒಂದು ಬಾರಿ ಜರಡಿ ಹಿಡಿದ್ರೆ ಹಿಟ್ಟು ಬಳಕೆಗೆ ಯೋಗ್ಯವಾಗುತ್ತದೆ.
ಅಕ್ಕಿಯಲ್ಲಿ ಹುಳು
ಅಕ್ಕಿ ಅಥವಾ ಬೇಳೆಕಾಳುಗಳಲ್ಲಿಯೂ ನುಶಿ ಅಥವಾ ಹುಳುಗಳಾಗಿದ್ರೆ ಈ ಮೇಲಿನ ಟ್ರಿಕ್ಸ್ ಬಳಸಬಹುದು. ಅಕ್ಕಿಯಲ್ಲಿ ನುಶಿಯಾದ್ರೆ, ಡಬ್ಬದಲ್ಲಿ ಒಂದು ಬೌಲ್ನೊಳಗೆ ವಿನೇಗರ್ ಸೇರಿಸಿಡಿ. ವಿನೇಗರ್ ವಾಸನೆಗೆ ನುಶಿ ಹೊರಗೆ ಬರುತ್ತದೆ. ನುಶಿಯನ್ನು ತೆಗೆಯುವ ಕೆಲಸವನ್ನು ವಿನೇಗರ್ ಮಾಡುತ್ತದೆ. ಅಕ್ಕಿಯಲ್ಲಿ ನುಶಿಯಾಗದಂತೆ ತಡೆಯಲು ಒಂದೆರಡು ಲವಂಗ ಅಥವಾ ಪುಲಾವ್ ಎಲೆ ಸೇರಿಸಬಹುದು.
ಇದನ್ನೂ ಓದಿ: ಬೆಂಗಳೂರಿನ ಮಲ್ಲೇಶ್ವರದ ಪ್ರಸಿದ್ಧ CTR ದೋಸೆಯಲ್ಲಿ ಜಿರಳೆ ಪತ್ತೆ, ಗ್ರಾಹಕರ ಕ್ಷಮೆ ಕೋರಿದ ಹೋಟೆಲ್
ಇದನ್ನೂ ಓದಿ: Recipe: ಇಡ್ಲಿ ಬ್ಯಾಟರ್ನಿಂದ ಕ್ರಿಸ್ಪಿ & ಸ್ಪಾಂಜಿ ದೋಸೆ; ಕಾವಲಿ ಬೇಡ, ಬಾಣಲೆ ಬೇಕು




