How to store garlic in Kannada: ಸೀಸನ್‌ನಲ್ಲಿ ಕಡಿಮೆ ಬೆಲೆಗೆ ಸಿಗುವ ಬೆಳ್ಳುಳ್ಳಿಯನ್ನು ಬಲ್ಕ್ ಆಗಿ ತಂದು ಹಾಳಾಗದಂತೆ ಹೇಗೆ ಶೇಖರಿಸಿಡಬೇಕು? ಬೆಳ್ಳುಳ್ಳಿ ಜೊಳ್ಳಾಗದೆ, ಫ್ಲೇವರ್ ಕಳೆದುಕೊಳ್ಳದೆ ಬರೋಬ್ಬರಿ 2 ರಿಂದ 3 ವರ್ಷಗಳ ಕಾಲ ತಾಜಾವಾಗಿಡುವ ಸುಲಭ ಕಿಚನ್ ಟಿಪ್ಸ್ ಇಲ್ಲಿವೆ.

ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಸೀಸನ್‌ನಲ್ಲಿ ಕಡಿಮೆ ಬೆಲೆಗೆ ಮತ್ತು ಉತ್ತಮ ಗುಣಮಟ್ಟದಲ್ಲಿ ಸಿಗುತ್ತದೆ. ಆದರೆ, ಅದನ್ನು ತಂದು ಮನೆಯಲ್ಲಿಟ್ಟರೆ ಕೆಲವೇ ದಿನಗಳಲ್ಲಿ ಒಣಗಿ ಹೋಗುವುದು, ಜೊಳ್ಳಾಗುವುದು ಅಥವಾ ಮೊಳಕೆ ಬಂದು ಕೊಳೆಯುವುದು ಸಾಮಾನ್ಯ. ಹಾಗಾಗಿ, ಸೀಸನ್‌ನಲ್ಲಿ ಕಡಿಮೆ ಬೆಲೆಗೆ ಸಿಗುವಾಗ ಬೆಳ್ಳುಳ್ಳಿಯನ್ನು ಬಲ್ಕ್ ಆಗಿ ತಂದು, 1 ರಿಂದ 3 ವರ್ಷಗಳ ಕಾಲ ಹಾಳಾಗದಂತೆ ಸುರಕ್ಷಿತವಾಗಿ ಶೇಖರಿಸಿಡುವ (Store) ಸರಳ ವಿಧಾನಗಳು ಇಲ್ಲಿವೆ.

1. ಪ್ಲಾಸ್ಟಿಕ್ ಕವರ್ ಬಳಸಬೇಡಿ

ಬೆಳ್ಳುಳ್ಳಿಯನ್ನು ಎಂದಿಗೂ ಗಾಳಿಯಾಡದ ಪ್ಲಾಸ್ಟಿಕ್ ಕವರ್‌ಗಳಲ್ಲಿ ಇಡಬಾರದು. ಅದರಿಂದ ತೇವಾಂಶ ಉಂಟಾಗಿ ಬೆಳ್ಳುಳ್ಳಿ ಬೇಗ ಕೊಳೆಯುತ್ತದೆ. ಬದಲಿಗೆ, ಗಾಳಿಯಾಡುವ ನೆಟ್ ಬ್ಯಾಗ್ (Mesh bag), ಸೆಣಬಿನ ಚೀಲ (Jute bag) ಅಥವಾ ಪೇಪರ್ ಕವರ್‌ಗಳಲ್ಲಿ ಹಾಕಿ ಗಾಳಿಯಾಡುವ, ಒಣಗಿದ ಜಾಗದಲ್ಲಿ ಇಟ್ಟರೆ ತಿಂಗಳುಗಟ್ಟಲೆ ಹಾಳಾಗುವುದಿಲ್ಲ.

2. ಸಿಪ್ಪೆ ಸುಲಿದ ಬೆಳ್ಳುಳ್ಳಿ ಶೇಖರಣೆ (ದೈನಂದಿನ ಬಳಕೆಗೆ)

ಪ್ರತಿದಿನ ಅಡುಗೆಗೆ ಸಿಪ್ಪೆ ಸುಲಿಯಲು ಸಮಯವಿಲ್ಲದಿದ್ದರೆ
ಬೆಳ್ಳುಳ್ಳಿ ಎಸಳುಗಳ ಸಿಪ್ಪೆ ಸುಲಿದು, ಚೆನ್ನಾಗಿ ಒರೆಸಿ ತೇವಾಂಶವಿಲ್ಲದಂತೆ ನೋಡಿಕೊಳ್ಳಿ.
ಗಾಜಿನ ಬಾಟಲಿ (Glass Jar) ಅಥವಾ ಏರ್‌ಟೈಟ್ ಬಾಕ್ಸ್‌ನ ತಳದಲ್ಲಿ ಟಿಶ್ಯೂ ಪೇಪರ್ ಹಾಕಿ, ಅದರಲ್ಲಿ ಸುಲಿದ ಬೆಳ್ಳುಳ್ಳಿ ಹಾಕಿ ಫ್ರಿಡ್ಜ್‌ನಲ್ಲಿಟ್ಟರೆ 2-3 ತಿಂಗಳು ಫ್ರೆಶ್ ಆಗಿರುತ್ತದೆ.

3. ಬೆಳ್ಳುಳ್ಳಿ ಪೇಸ್ಟ್ ಮಾಡಿ ಫ್ರೀಜರ್‌ನಲ್ಲಿಡುವುದು

ಬೆಳ್ಳುಳ್ಳಿಯನ್ನು ನೀರು ಹಾಕದೆ ಸ್ವಲ್ಪ ಉಪ್ಪು ಮತ್ತು ಒಂದೆರಡು ಚಮಚ ಅಡುಗೆ ಎಣ್ಣೆ ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ.
ಇದನ್ನು ಐಸ್ ಕ್ಯೂಬ್ ಟ್ರೇನಲ್ಲಿ (Ice Tray) ಹಾಕಿ ಫ್ರೀಜ್ ಮಾಡಿ, ನಂತರ ಆ ಕ್ಯೂಬ್‌ಗಳನ್ನು ಜಿಪ್‌ಲಾಕ್ ಕವರ್‌ನಲ್ಲಿ ಹಾಕಿ ಫ್ರೀಜರ್‌ನಲ್ಲಿಟ್ಟರೆ 6 ತಿಂಗಳಿಗೂ ಹೆಚ್ಚು ಕಾಲ ಬಣ್ಣ ಮತ್ತು ಫ್ಲೇವರ್ ಬದಲಾಗದೆ ಉಳಿಯುತ್ತದೆ.

4. ಬೆಳ್ಳುಳ್ಳಿ ಪುಡಿ (Garlic Powder) ಮಾಡಿ 2-3 ವರ್ಷ ಇಡಿ

ಬೆಳ್ಳುಳ್ಳಿ ಎಸಳುಗಳನ್ನು ಸಣ್ಣದಾಗಿ ಹೆಚ್ಚಿ ಅಥವಾ ಜಜ್ಜಿ, ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ (Dehydrate).
ಚೆನ್ನಾಗಿ ಗರಿಗರಿಯಾಗಿ ಒಣಗಿದ ನಂತರ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ, ಗಾಜಿನ ಬಾಟಲಿಯಲ್ಲಿ ಹಾಕಿ ಫ್ರೀಜರ್‌ನಲ್ಲಿಡಿ.
ಈ ಹೋಮ್‌ಮೇಡ್ ಬೆಳ್ಳುಳ್ಳಿ ಪುಡಿಯನ್ನು (Garlic Powder) ಸಾರು, ಸಾಂಬಾರ್, ಪಲ್ಯ ಅಥವಾ ಗ್ರೇವಿಗಳಿಗೆ ಬಳಸಬಹುದು. ಇದು 2 ರಿಂದ 3 ವರ್ಷಗಳ ಕಾಲ ಯಾವುದೇ ಫ್ಲೇವರ್ ಮತ್ತು ರುಚಿ ಕಳೆದುಕೊಳ್ಳದೆ ಹೊಸದರಂತೆಯೇ ಇರುತ್ತದೆ!

ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಖರೀದಿಸುವಾಗ ಈ ತಪ್ಪು ಮಾಡಬೇಡಿ (Buying Guide)

ಬೆಳ್ಳುಳ್ಳಿಯನ್ನು ದೀರ್ಘಕಾಲ ಶೇಖರಿಸಿಡಬೇಕೆಂದರೆ ಖರೀದಿಸುವಾಗಲೇ ಸರಿಯಾದದ್ದನ್ನು ಆರಿಸಬೇಕು. ಗಡ್ಡೆಯನ್ನು ಕೈಯಲ್ಲಿ ಹಿಡಿದು ನೋಡಿದಾಗ ಅದು ಗಟ್ಟಿಯಾಗಿ ಮತ್ತು ತೂಕವಾಗಿರಬೇಕು (ಹಗುರವಾಗಿದ್ದರೆ ಒಳಗೆ ಜೊಳ್ಳಾಗಿರುತ್ತದೆ). ಗಡ್ಡೆಯ ಮೇಲೆ ಹಸಿರು ಮೊಳಕೆ ಬಂದಿರಬಾರದು ಅಥವಾ ಕಪ್ಪು ಬಣ್ಣದ ಬೂಸ್ಟ್ (Fungus) ಇರಬಾರದು. ಸಾಧ್ಯವಾದರೆ ನಾಟಿ ಬೆಳ್ಳುಳ್ಳಿ (ಗಾತ್ರ ಸಣ್ಣದಿದ್ದರೂ ಹೆಚ್ಚು ಘಾಟು ಮತ್ತು ಬಾಳಿಕೆ ಜಾಸ್ತಿ) ಖರೀದಿಸಿ.

ಆಲೂಗಡ್ಡೆಯ ಜೊತೆ ಬೆಳ್ಳುಳ್ಳಿ ಎಂದಿಗೂ ಇಡಬೇಡಿ! (Common Mistake)

ಹಲವರು ಬೆಳ್ಳುಳ್ಳಿ ಮತ್ತು ಆಲೂಗಡ್ಡೆಯನ್ನು ಒಂದೇ ಬುಟ್ಟಿಯಲ್ಲಿ ಒಟ್ಟಿಗೆ ಇಡುತ್ತಾರೆ. ಇದು ತಪ್ಪು! ಆಲೂಗಡ್ಡೆಯಿಂದ ಬಿಡುಗಡೆಯಾಗುವ ತೇವಾಂಶ ಮತ್ತು ಗ್ಯಾಸ್‌ನಿಂದಾಗಿ ಬೆಳ್ಳುಳ್ಳಿ ಬೇಗನೆ ಮೊಳಕೆ ಬರುತ್ತದೆ ಅಥವಾ ಕೊಳೆಯಲು ಶುರುವಾಗುತ್ತದೆ. ಇವೆರಡನ್ನೂ ಯಾವಾಗಲೂ ಪ್ರತ್ಯೇಕ ಬುಟ್ಟಿಯಲ್ಲಿಡಬೇಕು.