ಬೇಸಿಗೆಯಲ್ಲಿ ಎಸಿ ಮತ್ತು ಇಂಡಕ್ಷನ್ ಸ್ಟೌವ್ ಅನ್ನು ಒಂದೇ ಸಮಯದಲ್ಲಿ ಬಳಸುವುದರಿಂದ ನಿಮ್ಮ ಮನೆಯ ವಿದ್ಯುತ್ ಲೋಡ್ ಮಿತಿ ಮೀರುತ್ತೆ. ಇದು ವಿದ್ಯುತ್ ಇಲಾಖೆಯಿಂದ ನೋಟಿಸ್ ಮತ್ತು ಭಾರಿ ದಂಡಕ್ಕೆ ಕಾರಣವಾಗಬಹುದು. ಇದನ್ನು ತಪ್ಪಿಸಲು, ನಿಮ್ಮ ಮನೆಯ ವಿದ್ಯುತ್ ಲೋಡ್ ಹೆಚ್ಚಳಕ್ಕೆ ಅರ್ಜಿ ಸಲ್ಲಿಸುವುದು ಉತ್ತಮ 

ಬೇಸಿಗೆಯ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಎಸಿ ಹಾಕುತ್ತೇವೆ, ಅತ್ತ ಗ್ಯಾಸ್ ಸಿಲಿಂಡರ್ ಅಭಾವಕ್ಕೆ ಹೆದರಿ ಇಂಡಕ್ಷನ್ ಸ್ಟೌವ್‌ನಲ್ಲಿ ಅಡುಗೆ ಮಾಡುತ್ತೇವೆ. ಆದರೆ, ಇವೆರಡನ್ನೂ ಒಂದೇ ಸಮಯದಲ್ಲಿ ಆನ್ ಮಾಡಿದರೆ ನಿಮ್ಮ ಮನೆಗೆ ವಿದ್ಯುತ್ ಇಲಾಖೆಯಿಂದ ನೋಟಿಸ್ ಬರಬಹುದು! ಅಷ್ಟೇ ಅಲ್ಲ, ಭಾರಿ ದಂಡ ತೆರಬೇಕಾದ ಪರಿಸ್ಥಿತಿಯೂ ಎದುರಾಗಬಹುದು. ಯಾಕೆ ಹೀಗಾಗುತ್ತದೆ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿದ್ಯುತ್ ಲೋಡ್ ಎಂಬ 'ಸೈಲೆಂಟ್ ಕಿಲ್ಲರ್'!

ಪ್ರತಿ ಮನೆಗೂ ಇಂತಿಷ್ಟು 'ಕಿಲೋವ್ಯಾಟ್' (kW) ಲೋಡ್ ಎಂದು ವಿದ್ಯುತ್ ಇಲಾಖೆ ಅನುಮೋದನೆ ನೀಡಿರುತ್ತದೆ. ನಾವು ಬಳಸುವ ಉಪಕರಣಗಳು ಆ ಮಿತಿಗಿಂತ ಹೆಚ್ಚಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಸಾಮಾನ್ಯವಾಗಿ ಒಂದು ಇಂಡಕ್ಷನ್ ಸ್ಟೌವ್ ಸುಮಾರು 2 ಕಿಲೋವ್ಯಾಟ್ ವಿದ್ಯುತ್ ಬಳಸಿದರೆ, ಒಂದು ಎಸಿ 1.2 ರಿಂದ 1.5 ಕಿಲೋವ್ಯಾಟ್ ಲೋಡ್ ಎಳೆಯುತ್ತದೆ. ನಿಮ್ಮ ಮನೆಯಲ್ಲಿ ಎರಡು ಎಸಿಗಳಿದ್ದರೆ ಈ ಲೋಡ್ ದ್ವಿಗುಣಗೊಳ್ಳುತ್ತದೆ. ಇದರ ಜೊತೆಗೆ ಫ್ರಿಜ್, ವಾಷಿಂಗ್ ಮೆಷಿನ್ ಸೇರಿದರೆ ನಿಮ್ಮ ಮೀಟರ್ ಓಡುವ ವೇಗ ಕಂಡು ನೀವೇ ಬೆಚ್ಚಿಬೀಳುತ್ತೀರಿ!

ಲೆಕ್ಕಾಚಾರ ತಪ್ಪಿದರೆ ದಂಡ ಫಿಕ್ಸ್!

ನೀವು ವಿದ್ಯುತ್ ಇಲಾಖೆಗೆ ಘೋಷಿಸಿದ ಲೋಡ್‌ಗಿಂತ ಹೆಚ್ಚಿನ ವಿದ್ಯುತ್ ಅನ್ನು ಸತತವಾಗಿ ಬಳಸುತ್ತಿದ್ದರೆ, ಸ್ಮಾರ್ಟ್ ಮೀಟರ್‌ಗಳ ಕಾಲದಲ್ಲಿ ಇದು ತಕ್ಷಣವೇ ಇಲಾಖೆಯ ಗಮನಕ್ಕೆ ಬರುತ್ತದೆ. ನಿಯಮ ಮೀರಿದ ಬಳಕೆ ಕಂಡುಬಂದಲ್ಲಿ ಮೊದಲು ನೋಟಿಸ್ ನೀಡಲಾಗುತ್ತದೆ, ಆಮೇಲೆ ನೀವು ಅನುಮೋದಿತ ಲೋಡ್‌ಗಿಂತ ಹೆಚ್ಚಿನದನ್ನು ಬಳಸುತ್ತಿದ್ದರೆ ದಂಡದ ರೂಪದಲ್ಲಿ ದೊಡ್ಡ ಮೊತ್ತದ ಬಿಲ್ ನಿಮ್ಮ ಕೈ ಸೇರಬಹುದು.

ಪರಿಹಾರವೇನು? ಈಗಲೇ ಹೀಗೆ ಮಾಡಿ..

ಬೇಸಿಗೆಯಲ್ಲಿ ಕೂಲರ್, ಫ್ಯಾನ್, ಎಸಿ ಅನಿವಾರ್ಯ. ಇದಕ್ಕೆ ಇಂಡಕ್ಷನ್ ಸ್ಟೌವ್ ಕೂಡ ಸೇರಿಕೊಂಡರೆ ಮನೆಯ ಒಟ್ಟು ಲೋಡ್ ಕನಿಷ್ಠ 5-6 ಕಿಲೋವ್ಯಾಟ್‌ಗಳಾಗುತ್ತದೆ. ನಿಮ್ಮ ಮನೆಯ ಕನೆಕ್ಷನ್ ಲೋಡ್ ಕಡಿಮೆ ಇದ್ದರೆ, ತಕ್ಷಣವೇ ವಿದ್ಯುತ್ ಇಲಾಖೆಯನ್ನು ಸಂಪರ್ಕಿಸಿ 'ಲೋಡ್ ಹೆಚ್ಚಳ'ಕ್ಕಾಗಿ (Load Enhancement) ಅರ್ಜಿ ಸಲ್ಲಿಸಿ. ಆಗ ನೀವು ಯಾವುದೇ ಟೆನ್ಷನ್ ಇಲ್ಲದೆ ಎಸಿ ಮತ್ತು ಇಂಡಕ್ಷನ್ ಎರಡನ್ನೂ ಬಳಸಬಹುದು.