ಮಳೆಗಾಲದಲ್ಲಿ ಅಥವಾ ಸ್ವಲ್ಪ ತೇವಾಂಶ ತಗುಲಿದರೂ ಅಕ್ಕಿಯಲ್ಲಿ ಹುಳುಗಳಾಗುವುದು ಸಾಮಾನ್ಯ. ಈ ಸಮಸ್ಯೆಯನ್ನು ತಡೆಯಲು ಅರಿಶಿಣ, ಸಕ್ಕರೆ, ಲವಂಗ ಮತ್ತು ಕಾಳುಮೆಣಸನ್ನು ಬಳಸಿ ಮಾಡುವ ಒಂದು ಸರಳ ಮನೆಮದ್ದಿನ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.  

ಅಕ್ಕಿಯಲ್ಲಿ ಹುಳು ಆಗೋದು ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲಿಯೂ ಮಳೆಗಾಲದಲ್ಲಿ ಇದು ಹೆಚ್ಚು ಹೌದಾದರೂ, ಅನ್ನನೋ, ದೋಸೆಗೋ ಅಕ್ಕಿ ಹಾಕುವ ಸಂದರ್ಭದಲ್ಲಿ ಕೈಯಲ್ಲಿ ಇರುವ ಸ್ವಲ್ಪ ತೇವಾಂಶ ಅದಕ್ಕೆ ತಗುಲಿದರೂ ಬೇಗನೇ ಹುಳು ಆಗಿಬಿಡುತ್ತವೆ. ಅದರಲ್ಲಿಯೂ ಹೆಚ್ಚು ಅಕ್ಕಿ ತಂದು ಇಟ್ಟರೆ ಅದರಲ್ಲಿ ಗೊತ್ತಿಲ್ಲದಂತೆಯೇ ಸುರಭಿಯೋ ಇಲ್ಲವೇ ಹುಳುವೋ ಆಗಿಬಿಡುತ್ತವೆ. ಇದು ಸರ್ವೇಸಾಮಾನ್ಯ ಎನ್ನುವಂತಾಗಿದೆ. ಅದರಲ್ಲಿಯೂ, ಸಾವಯವ ಅಕ್ಕಿಗಳು ರಾಸಾಯನಿಕ ಮುಕ್ತ ಆಗಿರುವ ಹಿನ್ನೆಲೆಯಲ್ಲಿ ಹುಳುಗಳ ಬಾಧೆ ಹೆಚ್ಚು. ಹಾಗಿದ್ದರೆ, ಹುಳು ಆಗದಂತೆ ಅಕ್ಕಿಯನ್ನು ಕಾಪಿಡುವುದು ಹೇಗೆ ಎನ್ನುವ ಚಿಂತೆಯಲ್ಲಿ ಇದ್ದರೆ ಇಲ್ಲೊಂದು ಸುಲಭದ ಉಪಾಯವಿದೆ.

ಅಷ್ಟಕ್ಕೂ ನಮ್ಮ ಹಿರಿಯಲು ಹಲವು ಉಪಾಯಗಳನ್ನು ಇದಾಗಲೇ ಕಂಡುಕೊಂಡಿದ್ದಾರೆ. ಆದರೆ ಅವುಗಳಿಗಿಂತಲೂ ಸುಲಭದಲ್ಲಿ, 100% ವರ್ಕ್​ ಆಗುವಂಥ ಉಪಾಯವೊಂದು ಇಲ್ಲಿದೆ ನೋಡಿ.

ಏನೇನು ಸಾಮಗ್ರಿಗಳು ಬೇಕು?

ಇದಕ್ಕೆ ಬೇಕಿರುವುದು

- ಅರಿಶಿಣದ ಪುಡಿ ಸ್ವಲ್ಪ

- ಸ್ವಲ್ಪ ಸಕ್ಕರೆ

-ನಾಲ್ಕೈದು ಲವಂಗ

-ನಾಲ್ಕೈದು ಕಾಳುಮೆಣಸು

ಇದನ್ನು ಮಾಡುವುದು ಹೇಗೆ?

ಒಂದು ಟಿಶ್ಯೂ ಪೇಪರ್​ನಲ್ಲಿ ಅರಿಶಿಣದ ಪುಡಿ, ಸಕ್ಕರೆ, ಲವಂಗ ಹಾಗೂ ನಾಲ್ಕೈದು ಕಾಳು ಮೆಣಸು ಹಾಕಿಕೊಂಡು ಅದನ್ನು ಮಡಚಿ ರಬ್ಬರ್​ ಬ್ಯಾಂಡ್​ ಕಟ್ಟಿ ಅಕ್ಕಿ ಇಟ್ಟಲ್ಲಿ ಹಾಕಿದರೆ ಸಾಕು. ಇದರಿಂದ ಹುಳುಗಳು ಆಗುವುದೇ ಇಲ್ಲ.