MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Kitchen
  • ಆಲೂ ಸೇಬು ಕಪ್ಪಗಾಗೋ ಟೆನ್ಷನ್‌ ಬಿಟ್ಬಿಡಿ, ಇಂದಿನಿಂದ್ಲೇ ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

ಆಲೂ ಸೇಬು ಕಪ್ಪಗಾಗೋ ಟೆನ್ಷನ್‌ ಬಿಟ್ಬಿಡಿ, ಇಂದಿನಿಂದ್ಲೇ ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

Kitchen Tips : ಕತ್ತರಿಸಿದ ಐದೇ ನಿಮಿಷದಲ್ಲಿ ಆಲೂಗಡ್ಡೆ ಹಾಗೂ ಸೇಬು ಬಣ್ಣ ಕಪ್ಪಾಗುತ್ತೆ. ಮಕ್ಕಳ ಬಾಕ್ಸ್ ಗೆ ಕತ್ತರಿಸಿದ ಸೇಬು ಹಾಕಿದ್ರೆ ಅದು ವಾಪಸ್ ಬರೋದು ಗ್ಯಾರಂಟಿ. ಸೇಬು ಹಾಗೂ ಆಲೂಗಡ್ಡೆ ಕಪ್ಪಾಗಬಾರದು, ಬಹಳ ಸಮಯ ತನ್ನ ಬಣ್ಣ ಕಾಪಾಡಿಕೊಳ್ಬೇಕು ಅಂದ್ರೆ ಸಿಂಪಲ್ ಟಿಪ್ಸ್ ಫಾಲೋ ಮಾಡಿ. 

2 Min read
Author : Roopa Hegde
Published : Feb 28 2026, 10:30 PM IST
Share this Photo Gallery
  • FB
  • TW
  • Linkdin
  • Whatsapp
16
ತಣ್ಣನೆಯ ನೀರು
Image Credit : Asianet News

ತಣ್ಣನೆಯ ನೀರು

ಅಡುಗೆ ಮಾಡುವಾಗ ಮಹಿಳೆಯರನ್ನು ಕಾಡುವ ಸಮಸ್ಯೆಗಳಲ್ಲಿ ಆಲೂಗಡ್ಡೆ, ಸೇಬು ಹಣ್ಣು ಕಪ್ಪಾಗಾಗೋದು ಸೇರಿದೆ. ಕತ್ತರಿಸಿದ ಅರೆ ಕ್ಷಣಕ್ಕೆ ಇವುಗಳ ಬಣ್ಣ ಬದಲಾಗುತ್ತದೆ. ಕಪ್ಪಗಾದ ಸೇಬು ತಿನ್ನಲು ಮನಸ್ಸು ಬರೋದಿಲ್ಲ. ದೀರ್ಘಕಾಲ ಬಣ್ಣ ಹಾಗೆ ಇರಬೇಕು ಅಂದ್ರೆ ನೀವು ತಣ್ಣನೆಯ ನೀರನ್ನು ಬಳಸಬೇಕು. ಆಲೂಗಡ್ಡೆ ಹಾಗೂ ಸೇಬು ಹಣ್ಣನ್ನು ಕತ್ತರಿಸಿದ ನಂತ್ರ ಅದನ್ನು ತಣ್ಣನೆ ನೀರಿನಲ್ಲಿ ಹಾಕಬೇಕು. ಇದ್ರಿಂದ ಅವು ಗಾಳಿಯ ಸಂಪರ್ಕಕ್ಕೆ ಬರೋದಿಲ್ಲ. ಬಹುಬೇಗ ಕಪ್ಪಾಗೋದಿಲ್ಲ.

26
ನಿಂಬೆ ರಸ
Image Credit : Asianet News

ನಿಂಬೆ ರಸ

ಸೇಬು ಹಣ್ಣನ್ನು ಕತ್ತರಿಸಿದ ಮೇಲೆ ನೀವು ಅದಕ್ಕೆ ನಿಂಬೆ ರಸವನ್ನು ಹಾಕಿ. ನಿಂಬೆ ಹಣ್ಣಿನಲ್ಲಿರುವ ವಿಟಮಿನ್ ಸಿ ಆಕ್ಸಿಡೀಕರಣ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಸೇಬು ಹಣ್ಣು ದೀರ್ಘಕಾಲ ತಾಜಾ ಇರುತ್ತದೆ. ಅತಿಯಾಗಿ ನಿಂಬೆ ರಸ ಬಳಸೋದನ್ನು ತಪ್ಪಿಸಿ. ಇದು ಹಣ್ಣಿನ ರುಚಿ ಹಾಳು ಮಾಡುತ್ತದೆ. ನೀವು ಒಂದು ಹನಿ ನಿಂಬೆ ರಸವನ್ನು ಇಡೀ ಹಣ್ಣಿಗೆ ಬಳಸಬೇಕು.

Related Articles

Related image1
ಪಕ್ಕಾ ಹೊಟೆಲ್ ರುಚಿಯ ಮಸಾಲೆ ವಡೆ ಮಾಡೋದಕ್ಕೆ ಈ ಪದಾರ್ಥ ಬಳಸಿ, ಈ ಸೀಕ್ರೆಟ್ ನಿಮ್ಗೆ ಇನ್ಯಾರೂ ಹೇಳಿರಲ್ಲ!
Related image2
ಹೀಗೆ ಮಾಡಿದ್ರೆ ಹಾಲು ಒಡೆಯಲ್ಲ, ಎರಡು ದಿನದವರೆಗೆ ಫ್ರೆಶ್ ಆಗಿಯೇ ಇರುತ್ತೆ
36
ಉಪ್ಪು ನೀರು
Image Credit : Asianet News

ಉಪ್ಪು ನೀರು

ನೀವು ಸೇಬು ಹಾಗೂ ಆಲೂಗಡ್ಡೆ ಎರಡಕ್ಕೂ ಈ ಟಿಪ್ಸ್ ಬಳಸಬಹುದು. ಮೊದಲು ಸೇಬು ಅಥವಾ ಆಲೂಗಡ್ಡೆಯನ್ನು ಕತ್ತರಿಸಿ. ಒಂದು ಪಾತ್ರೆಗೆ ನೀರನ್ನು ಹಾಕಿ, ಅದಕ್ಕೆ ಅರ್ಧ ಚಮಚ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದರ ನಂತ್ರ ಕತ್ತರಿಸಿದ ಸೇಬು ಅಥವಾ ಆಲೂಗಡ್ಡೆಯನ್ನು 5 ರಿಂದ ಹತ್ತು ನಿಮಿಷ ನೆನೆಹಾಕಿ. ನಂತ್ರ ಶುದ್ಧ ನೀರಿನಲ್ಲಿ ಸ್ವಚ್ಛಗೊಳಿಸಿ. ಹೀಗೆ ಮಾಡಿದಲ್ಲಿ ದೀರ್ಘಕಾಲ ಸೇಬು ಹಣ್ಣು ಹಾಗೂ ಆಲೂಗಡ್ಡೆ ಕಪ್ಪಾಗುವುದಿಲ್ಲ.

46
ವಿನೇಗರ್
Image Credit : Asianet News

ವಿನೇಗರ್

ವಿನೆಗರ್ ಮತ್ತು ಕಿತ್ತಳೆ ರಸವು ನಿಂಬೆ ರಸದಂತೆ ಕೆಲ್ಸ ಮಾಡುತ್ತದೆ. ನೀವು ಸೇಬು ಹನ್ಣು ಅಥವಾ ಆಲೂಗಡ್ಡೆಗೆ ವಿನೆಗರ್ ಅಥವಾ ಕಿತ್ತಳೆ ರಸವನ್ನು ಕೂಡ ಹಚ್ಚಬಹುದು. ಇದು ಕೂಡ ಕಪ್ಪಾಗುವುದನ್ನು ತಡೆಯುತ್ತದೆ. ನೀವು ಇದನ್ನು ಮಿತವಾಗಿ ಬಳಕೆ ಮಾಡ್ಬೇಕು. ಒಂದು ಹನಿ ವಿನೆಗರ್ ಬಳಸಿದ್ರೆ ಸಾಕು. ಹೆಚ್ಚಿನ ಪ್ರಮಾಣದಲ್ಲಿ ವಿನೆಗರ್ ಅಥವಾ ಕಿತ್ತಳೆ ರಸ ಹಾಕಿದ್ರೆ ಹಣ್ಣು ರುಚಿ ಕಳೆದುಕೊಳ್ಳುತ್ತದೆ.

56
ಫ್ರಿಜ್ ಬಳಸಿ
Image Credit : Asianet News

ಫ್ರಿಜ್ ಬಳಸಿ

ನೀವು ಆಲೂಗಡ್ಡೆ ಫ್ರೈಸ್ ಅಥವಾ ಪಲ್ಯ ಸೇರಿದಂತೆ ಖಾದ್ಯಗಳನ್ನು ಮಾಡುವ ಪ್ಲಾನ್ ನಲ್ಲಿದ್ದರೆ ಕತ್ತರಿಸಿದ ಆಲೂಗಡ್ಡೆಯನ್ನು ಮೊದಲು ನೀರಿನಲ್ಲಿ ನೆನೆ ಹಾಕಿ. ನಂತ್ರ ಅದನ್ನು ಫ್ರಿಜ್ ನಲ್ಲಿ ಇಡಬೇಕು. ಇದು ದೀರ್ಘಕಾಲ ಬಣ್ಣ ಕಾಯ್ದುಕೊಳ್ಳುತ್ತದೆ. ಗಾಳಿಯಾಡದ ಪಾತ್ರೆಯಲ್ಲಿ ನೀವು ಕತ್ತರಿಸಿದ ಆಲೂಗಡ್ಡೆಯನ್ನು ಇಡಬಹುದು.

66
ಈ ಚಾಕು ಬಳಸಿ
Image Credit : Asianet News

ಈ ಚಾಕು ಬಳಸಿ

ನೀವು ಆಲೂಗಡ್ಡೆ ಹಾಗೂ ಸೇಬು ಹಣ್ಣನ್ನು ಯಾವ ಚಾಕುವಿನಿಂದ ಕತ್ತರಿಸ್ತೀರಿ ಎಂಬುದು ಕೂಡ ಮುಖ್ಯವಾಗುತ್ತದೆ. ನೀವು ಸ್ಟೀಲ್ ಚಾಕುವನ್ನು ಬಳಸಬೇಕು. ಹರಿತವಾದ ಚಾಕು ಬಳಸಬೇಕು. ಮೊಂಡಾದ ಚಾಕು ಬಳಸಿದ್ರೆ ಹಣ್ಣುಗಳು ಹಾಗೂ ತರಕಾರಿಗಳು ಬೇಗ ಆಕ್ಸಿಡೀಕರಣಗೊಳ್ಳಲು ಪ್ರಾರಂಭಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಅಡುಗೆಮನೆ ಸಲಹೆಗಳು
ಜೀವನಶೈಲಿ

Latest Videos
Recommended Stories
Recommended image1
ಹೀಗೆ ಮಾಡಿದ್ರೆ ಹಾಲು ಒಡೆಯಲ್ಲ, ಎರಡು ದಿನದವರೆಗೆ ಫ್ರೆಶ್ ಆಗಿಯೇ ಇರುತ್ತೆ
Recommended image2
ಪಕ್ಕಾ ಹೊಟೆಲ್ ರುಚಿಯ ಮಸಾಲೆ ವಡೆ ಮಾಡೋದಕ್ಕೆ ಈ ಪದಾರ್ಥ ಬಳಸಿ, ಈ ಸೀಕ್ರೆಟ್ ನಿಮ್ಗೆ ಇನ್ಯಾರೂ ಹೇಳಿರಲ್ಲ!
Recommended image3
ಕುಕ್ಕರ್ ಸೀಟಿ ಪದೇ ಪದೇ ಹಾಳಾಗುತ್ತಿದೆಯೇ? ಈ ಸುಲಭ ಟ್ರಿಕ್ಸ್‌ನಿಂದ ನೀವೇ ಸರಿಪಡಿಸಿ.. ಸಮಯ, ಹಣ ಉಳಿಸಿ!
Related Stories
Recommended image1
ಪಕ್ಕಾ ಹೊಟೆಲ್ ರುಚಿಯ ಮಸಾಲೆ ವಡೆ ಮಾಡೋದಕ್ಕೆ ಈ ಪದಾರ್ಥ ಬಳಸಿ, ಈ ಸೀಕ್ರೆಟ್ ನಿಮ್ಗೆ ಇನ್ಯಾರೂ ಹೇಳಿರಲ್ಲ!
Recommended image2
ಹೀಗೆ ಮಾಡಿದ್ರೆ ಹಾಲು ಒಡೆಯಲ್ಲ, ಎರಡು ದಿನದವರೆಗೆ ಫ್ರೆಶ್ ಆಗಿಯೇ ಇರುತ್ತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved