ಇಂದಿನ ದಿನಗಳಲ್ಲಿ ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದು ಸಾಮಾನ್ಯವಾಗಿದೆ. ರಾಸಾಯನಿಕಯುಕ್ತ ಹೇರ್ ಡೈಗಳು ಕ್ಯಾನ್ಸರ್‌ನಂತಹ ಅಪಾಯಗಳನ್ನು ತರುವುದರಿಂದ, ಮನೆಯಲ್ಲಿಯೇ ದಾಳಿಂಬೆ ಸಿಪ್ಪೆ, ಸಾಸಿವೆ ಎಣ್ಣೆ ಬಳಸಿ ನೈಸರ್ಗಿಕವಾಗಿ ಮತ್ತು ಶಾಶ್ವತವಾಗಿ ಕೂದಲನ್ನು ಕಪ್ಪಾಗಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
ಮುಂಚೆಲ್ಲಾ ಒಂದು ವಯಸ್ಸು ದಾಟಿದ ಮೇಲೆ ಕೂದಲು ಬೆಳ್ಳಗಾಗುತ್ತಿತ್ತು. ಅದು ವಯಸ್ಸಾಗಿರುವ ಲಕ್ಷಣವಾಗಿತ್ತು. ಆದರೆ ಇಂದು ಚಿಕ್ಕಮಕ್ಕಳ ಕೂದಲೂ ಬೆಳ್ಳಗಾಗುತ್ತಿವೆ. ಇವತ್ತಿನ ಜೀವನ ಕ್ರಮ, ಆಹಾರ ಪದ್ಧತಿ, ಪ್ರದೂಷಣೆ, ಮೇಲಾಗಿ ಒತ್ತಡ... ಇನ್ನು ಏನೇನೋ ಕಾರಣಗಳು ಇವುಗಳಿಗೆ ಇವೆ. 25-30 ದಾಟುತ್ತಿದ್ದಂತೆಯೇ ಕೂದಲು ಬೆಳ್ಳಗಾಗುವುದು ಮಾಮೂಲಾಗಿಬಿಟ್ಟಿದೆ. ಇದೇ ಕಾರಣಕ್ಕೆ ಹಲವರಿಗೆ ಮದುವೆ ಕೂಡ ಆಗುತ್ತಿಲ್ಲವಾದರೆ, ಮತ್ತೆ ಕೆಲವರು ಖಿನ್ನತೆಗೆ ಜಾರುವುದು ಇದೆ. ಇದೇ ಕಾರಣಕ್ಕೆ ಹೇರ್ಡೈ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಪ್ರತಿ ಮನೆಯಲ್ಲಿ ಒಬ್ಬರಾದರೂ ವ್ಯಕ್ತಿ ಹೇರ್ಡೈ ಬಳಸಿಯೇ ಬಳಸುತ್ತಾರೆ ಎನ್ನುತ್ತದೆ ಅಧ್ಯಯನ. ಆದರೆ ನಿಮಗೆ ಗೊತ್ತೆ? ಹೇರ್ಡೈ ಅತಿಯಾದ ಬಳಕೆಯಿಂದ ಪ್ರಾಣಕ್ಕೂ ಅಪಾಯ ಆಗಬಹುದು ಎಂದು ಇದಾಗಲೇ ಹಲವು ಅಧ್ಯಯನಗಳಿಂದ ಸಾಬೀತಾಗಿವೆ.
ಹೇರ್ ಕಲರ್ನಿಂದ ಕ್ಯಾನ್ಸರ್
ಹೇರ್ ಕಲರ್ನಿಂದ ಕ್ಯಾನ್ಸರ್ ಬರುತ್ತಿವೆ. ಬ್ಲಡ್ ಕ್ಯಾನ್ಸರ್ ಹೆಚ್ಚುತ್ತಿದೆ ಎನ್ನಲಾಗಿದೆ. ಚರ್ಮದ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್, ಸ್ತನ ಕ್ಯಾನ್ಸರ್ಗಳಿಗೂ ಇದು ಕಾರಣವಾಗಬಲ್ಲುದು ಎಂದು ತಜ್ಞರು ಇದಾಗಲೇ ಹೇಳಿದ್ದಾರೆ. ಚರ್ಮದ ಸಮಸ್ಯೆ ಮಾತ್ರವಲ್ಲದೇ ಹೇರ್ ಡೈಯಲ್ಲಿ ಇರುವ ರಾಸಾಯನಿಕಗಳಿಂದ ಮಾನಸಿಕ ರೋಗಗಳೂ ಬರುತ್ತಿವೆ ಎನ್ನಲಾಗಿದೆ. ಇವೆಲ್ಲಾ ಕೆಲವರಿಗೆ ಗೊತ್ತಿದ್ದರೂ ವಯಸ್ಸಾಗದಂತೆ ಕಾಣಬೇಕು ಎನ್ನುವ ಕಾರಣಕ್ಕೆ ಹೇರ್ಡೈ ಮೊರೆ ಹೋಗುವ ಅನಿವಾರ್ಯತೆಯೂ ಇದೆ. ಇದಕ್ಕಾಗಿಯೇ, ಸುಲಭದಲ್ಲಿ ತಲೆಗೂದಲನ್ನು ಕಪ್ಪಗಾಗಿಸಿ ಎಂದು ಹಲವಾರು ಯೂಟ್ಯೂಬರ್ಗಳು ಟಿಪ್ಸ್ ಕೊಡುತ್ತಿರುವುದು ಹೆಚ್ಚುತ್ತಿದೆ. ಅದನ್ನು ನಂಬಿ ಪ್ರಯೋಗ ಮಾಡಿದರೆ ಅದರಲ್ಲಿ ಹೆಚ್ಚಿನವು ಫೇಕ್ ಆಗಿರುತ್ತದೆ. ಒಂದಿಷ್ಟು ಲೈಕ್ಸ್, ವ್ಯೂಸ್ಗೋಸ್ಕರ್ ಇಷ್ಟಬಂದ ರೀತಿಯಲ್ಲಿ ವಿಡಿಯೋ ಮಾಡಲಾಗುತ್ತದೆ. ಅದಕ್ಕೆ ಬರುವ ಕಮೆಂಟ್ಸ್ಗಳನ್ನು ನೋಡಿದರೆ, ಎಷ್ಟು ಮಂದಿ ಮೋಸ ಹೋಗಿದ್ದಾರೆ ಎನ್ನುವುದು ತಿಳಿಯುತ್ತದೆ.
ನೈಸರ್ಗಿಕವಾಗಿ ಕೂದಲನ್ನು ಕಪ್ಪು ಮಾಡುವ ವಿಧಾನ
ಹಾಗಿದ್ದರೆ ನೈಸರ್ಗಿಕವಾಗಿ ಕೂದಲನ್ನು ಕಪ್ಪು ಮಾಡುವ, ಅದರಲ್ಲಿಯೂ ಮನೆಯಲ್ಲಿಯೇ ಈ ವಿಧಾನ ಮಾಡಿಕೊಳ್ಳುವ ಬಗ್ಗೆ ಇಲ್ಲಿ ಡಿಟೇಲ್ಸ್ ಕೊಡಲಾಗಿದೆ. ಚೆಫ್ಜಸ್ಪ್ರೀತ್ಸಿಂಗ್ ಎನ್ನುವವರು ಶೇರ್ ಮಾಡಿರುವ ಈ ವಿಡಿಯೋದಲ್ಲಿ ನಿಮ್ಮ ಕೂದಲನ್ನು ಹೇಗೆ ನೈಸರ್ಗಿಕವಾಗಿ ಕಪ್ಪಾಗಿಸಬಹುದು ಎನ್ನುವುದನ್ನು ತಿಳಿಯಬಹುದಾಗಿದೆ.
-ಮೊದಲಿಗೆ ಒಂದು ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಕಬ್ಬಿಣದ ಬಾಣಲೆಯಲ್ಲಿ ಕಪ್ಪಾಗುವವರೆಗೆ ಹುರಿಯಬೇಕು.
- ಕಪ್ಪಾದ ಬಳಿಕ ಅದಕ್ಕೆ ಎರಡು ಚಮಚ ಸಾಸಿವೆ ಎಣ್ಣೆ ಹಾಕಬೇಕು
- ಒಂದು ಚಮಚ ಕಪ್ಪು ಜೀರಿಗೆ ಸೇರಿಸಬೇಕು.
- ಇದಕ್ಕೆ 2 ಚಮಚ ನಲ್ಲಿಕಾಯಿಯ ಪೌಡರ್ ಹಾಕಿ.
- ಎಲ್ಲವನ್ನೂ ಸಣ್ಣ ಉರಿಯಲ್ಲಿಯೇ ಮಿಕ್ಸ್ ಮಾಡಿ.
- ಅದನ್ನು ತಣ್ಣಗಾಗಲು ಬಿಡಿ.
- ಅದನ್ನು ಬ್ಲೆಂಡರ್ನಲ್ಲಿ ಹಾಕಿ ನೈಸ್ ಆಗಿ ಬ್ಲೆಂಡ್ ಮಾಡಿಕೊಳ್ಳಿ.
- ಇಷ್ಟು ಮಾಡಿದರೆ ನೈಸರ್ಗಿಕ ಹೇರ್ಡೈ ರೆಡಿ.
-ಇದನ್ನು ಹಚ್ಚುತ್ತಾ ಬಂದರೆ ನಿಮ್ಮ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ.


