ಟಿವಿಯಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್, ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ. ವಿವಾಹಿತ ಮಹಿಳೆ ಸುಚಿತ್ರಾ ಜೊತೆಗಿನ ಅನೈತಿಕ ಸಂಬಂಧವೇ ಈ ಘೋರ ಕೃತ್ಯಕ್ಕೆ ಕಾರಣವಾಗಿದ್ದು, ಈ ಕೊಲೆಯ ಹಿಂದಿನ ಸಂಪೂರ್ಣ ಕಥೆ ಇಲ್ಲಿದೆ.

ಆತ ಖ್ಯಾತ ಜ್ಯೋತಿಷಿ. ಬೆಳಗಾದ್ರೆ ಟಿವಿಯಲ್ಲಿ ಕೂತು ಗಂಟೆಗಟ್ಟಲೆ ಉಪದೇಶ ಕೊಡ್ತಿದ್ದ. ಹಾಗೆ ಮಾಡಿ ಹೀಗ್​ ಮಾಡಿ ಅಂತ ಫೋನ್​ ಮಾಡೋರಿಗೆ ಪುಕ್ಕಟೆ ಸಲಹೆ ಕೊಡ್ತಿದ್ದ. ಆದ್ರೆ ಇವತ್ತು ಅದೇ ಸ್ವಾಮಿ ಒಂದು ಕೊ*ಲೆ ಮಾಡಿ ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದಾನೆ. ಈತ ಮತ್ತು ಈತನ ಪಟಾಲಂ ಒಬ್ಬ ಅಮಾಯಕನ ಹೆಣ ಹಾಕಿ ಎಸ್ಕೇಪ್​​ ಆಗಿಬಿಟ್ಟಿತ್ತು. ಇವತ್ತು ಆ ಕಿಲ್ಲರ್​​ ಜ್ಯೋತಿಷಿಯನ್ನ ಹಿಡಿದು ಒಳಗೆ ಹಾಕಿದ್ದಾರೆ. ಆದ್ರೆ ಈ ಜ್ಯೋತಿಷಿ ಮ*ರ್ಡರ್​ ಮಾಡೋದಕ್ಕೆ ಕಾರಣವೇನು ಗೊತ್ತಾ? ಒಬ್ಬ ಮಹಿಳೆ. ಆಂಟಿಯ ಸಹವಾಸ ಮಾಡಿ ಆ ಸ್ವಾಮಿ ದಾರಿ ತಪ್ಪಿದ್ದ. ಕೊನೆಗೆ ಅವಳಿಂದ ತನ್ನ ಕೈಯನ್ನೂ ರಕ್ತ ಮಾಡಿಕೊಂಡ. ಅಷ್ಟಕ್ಕೂ ಕೊ*ಲೆ ಕೇಸ್​​ನಲ್ಲಿ ಅಂದರ್​ ಆದ ಆ ಜ್ಯೋತಿಷಿ ಯಾರು? ಆತ ಕೊಲೆ ಮಾಡಿದ್ದೇಕೆ? ಒಂದು ಮ*ರ್ಡರ್​ ಹಿಂದಿನ ಅಸಲಿ ಕಥೆ ಏನು ಗೊತ್ತಾ?

ಬೆಳಗೆದ್ದು ಟಿವಿ ಆನ್​ ಮಾಡಿದ್ರೆ 12 ರಾಶಿಗಳ ಫೋಟೋ ಹಾಕೊಂಡು. ವಿಭೂತಿ ಇಟ್ಟುಕೊಂಡು ಕೆಲವರು ಜ್ಯೋತಿಷ್ಯ ಹೇಳೋದಕ್ಕೆ ಕೂತುಬಿಡ್ತಾರೆ. ನಮ್ಮ ಹೆಣ್ಣುಮಕ್ಕಳಂತೂ ಮಾಡೋ ಕೆಲಸ ಬಿಟ್ಟು ಇಂಥವರು ಹೇಳೋದನ್ನ ಚಾಚು ತಪ್ಪದೆ ಮಾಡ್ತಾರೆ. ಅವರುಗಳು ಹೇಳೋ ದೇವಸ್ತಾನಗಳಿಗೆ ಸುತ್ತಿ ಬರ್ತಾರೆ. ಆದ್ರೆ ಹೀಗೆ ಟಿವಿಯಲ್ಲಿ ಜ್ಯೋತಿಷ್ಯ ಹೇಳುವವರಲ್ಲಿ ಈತ ಕೂಡ ಒಬ್ಬ.

ಈತನ ಹೆಸರು ಕಮಲಾಕರ್​ ಭಟ್​​ ಅಂತ. ಇವನ ಉಪದೇಶ. ಜ್ಯೋತಿಷಿಯಗಳನ್ನ ನೀವು ತುಂಬಾನೇ ನೋಡಿರ್ತಿರಿ. ಕೆಲವರಂತು ಈತ ಹೆಳೋದೆಲ್ಲಾ ನಿಜ ಅಂತ ತಿಳಿದು. ಈತ ಹೇಳಿದ ಪರಿಹಾರಗಳನ್ನೆಲ್ಲಾ ಮಾಡಿರ್ತಿರಿ. ಆದ್ರೆ ನಿಮ್ಮ ನೆಚ್ಚಿನ ಈ ಜ್ಯೋತಿಷಿ ಇವತ್ತು ಎಲ್ಲಿದ್ದಾನೆ ಗೊತ್ತಾ? ಪೊಲೀಸ್​​ ಠಾಣೆಯಲ್ಲಿ. ಯಾಕಪ್ಪ ಈತ ಠಾಣೆಗೆ ಹೋದ. ಸ್ಟೇಷನ್​ ವಾಸ್ತು ಏನಾದ್ರೂ ಪರಿಶೀಲಿಸೋದಕ್ಕೆ ಹೋದ್ನಾ ಆಂತ ಯೋಚಿಸಬೇಡಿ. ಈತ ಠಾಣೆಗೆ ಹೋಗಿರೋದು ಕೊಲೆ ಕೇಸ್​​ನಲ್ಲಿ. ಒಬ್ಬ ಅಮಾಯಕನನ್ನ ಮ*ರ್ಡರ್​ ಮಾಡಿ ಇವತ್ತು ಪೊಲೀಸರ ವಶದಲ್ಲಿದ್ದಾನೆ.

ಆಂಟಿಯ ಹಿಂದೆ ಬಿದ್ದು ಕೊ*ಲೆಗಾರನಾದ ಜ್ಯೋತಿಷಿ!

ಇವತ್ತು ಈ ಕಮಲಾಕರ ಭಟ್​​ ಜೈಲಿಗೆ ಹೋಗಲು ಕಾರಣ ಒಬ್ಬಳು ಅಂಟಿ. ಅಂದಹಾಗೆ ಆ ಆಂಟಿ ಯಾರು ಗೊತ್ತಾ? ಅಬ್ಬಬ್ಬಾ ಏನ್ರೀ ಈಕೆ. ಸಿನಿಮಾ ಹೀರೋಯಿನ್​​​​ ರೀತಿ ರೀಲ್ಸ್​​ ಮಾಡ್ತಿದ್ದಾಳೆ. ಈಕೆ ಏನು ಆ್ಯಕ್ಟರಾ ಅಂತ ಕೇಳಬಹುದು. ಇಲ್ಲಾ ವೀಕ್ಷಕರೇ, ಈಕೆ ಯಾವುದೇ ನಟಿ ಅಲ್ಲ ಬದಲಿಗೆ ಎರಡು ಮಕ್ಕಳ ತಾಯಿ. ಇನ್​ಫ್ಯಾಕ್ಟ್​​ ಆಂಟಿ. ಈ ಆಂಟಿಯಿಂದ ಇವತ್ತು ಆ ಕಮಲಾಕರ ಭಟ್​​ ಜೈಲು ಸೇರಿದ್ದಾನೆ. ಈಕೆ ಹೆಸರು ಸುಚಿತ್ರಾ ಅಂತ. ಈವತ್ತು ಈಕೆ ಆ ಜ್ಯೋತಿಷಿಯ ಜೀವನ ಹಾಳು ಮಾಡೋದಲ್ಲದೇ ತನ್ನ ಜೀವನವನ್ನೂ ನರಕ ಮಾಡಿಕೊಂಡಿದ್ದಾಳೆ. ಒಬ್ಬ ಅಮಾಯಕನ ಪ್ರಾಣ ತಗೆದು ಇವತ್ತು ಆ ಕಮಲಾಕರನ ಜೊತೆ ಜೈಲು ಸೇರಿದ್ದಾಳೆ.

ಅಂದಹಾಗೆ ಈ ಸುಚಿತ್ರ ಇದ್ದಾಳಲ್ಲ. ಈಕೆ ಮೂಲತಃ ಶಿವಮೊಗ್ಗದವಳು. 20 ವರ್ಷದ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪಾ ಅನ್ನೋ ಗ್ರಾಮದ ಮಹೇಶ ಅನ್ನೋನ ಮದುವೆಯಾಗಿ ಆತನ ಮನೆ ಸೇರುತ್ತಾಳೆ. ಇಬ್ಬರಿಗೂ ಎರಡು ಮುದ್ದಾದ ಹೆಣ್ಣುಮಕ್ಕಳಾಗುತ್ತವೇ. ಮಹೇಶ ಒಳ್ಳೆ ಹುಡುಗ ವ್ಯವಸಾಯ ಮಾಡಿ ಹೆಂಡತಿ ಮಕ್ಕಳನ್ನ ಸಾಕುತ್ತಿದ್ದ. ಆದ್ರೆ ಕೆಲ ವರ್ಷಗಳ ಹಿಂದೆ ದುಡಿಯೋದಕ್ಕೆ ಅಂತ ಬೆಂಗಳೂರಿಗೆ ಹೋದ. ಹೋಟೆಲ್​ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಇತ್ತ ಹೆಂಡತಿ ಸುಚಿತ್ರ ಮಕ್ಕಳನ್ನ ನೋಡಿಕೊಳ್ತಿದ್ರೆ ಅತ್ತ ಗಂಡ ಕಷ್ಟಪಟ್ಟು ದುಡಿದು ಹಣ ಕಳಿಸುತ್ತಿದ್ದ. ಎಲ್ಲವೂ ಚೆನ್ನಾಗಿರುತ್ತೆ. ಆದರೆ 6 ತಿಂಗಳ ಹಿಂದೆ ಸುಚಿತ್ರ ತನ್ನಿಬ್ಬರು ಮಕ್ಕಳನ್ನ ಕರೆದುಕೊಂಡು ಎಸ್ಕೇಪ್​ ಆಗಿಬಿಡ್ತಾಳೆ.

ಮಕ್ಕಳೊಂದಿಗೆ ದಿಢೀರ್ ನಾಪತ್ತೆಯಾದ ಸುಚಿತ್ರ

ಸುಚಿತ್ರ ಆವತ್ತೊಂದು ದಿನ ಮಕ್ಕಳೊಂದಿಗೆ ನಾಪತ್ತೆಯಾಗಿಬಿಡ್ತಾಳೆ. ಗಂಡ ಹೆಂಡತಿ ಮಕ್ಕಳನ್ನ ಹುಡುಕೋದಕ್ಕೆ ಶುರು ಮಾಡ್ತಾನೆ. ಆಗಲೇ ನೋಡಿ ಗೊತ್ತಾಗೋದು. ಸುಚಿತ್ರ ಅಷ್ಟರಲ್ಲಾಗಲೇ ಈ ಜ್ಯೋತಿಷಿ ಕಮಲಾಕರ ಭಟ್ಟನ ಮನೆ ಸೇರಿದ್ದಾಳೆ ಅಂತ. ಅವನ ಜೊತೆ ಸಂಸಾರ ಶುರು ಮಾಡಿದ್ದಾಳೆ ಅಂತ. ಸುಚಿತ್ರಾ ಅಂಟಿ ಈ ಜ್ಯೋತಿಷಿ ಅಂಕಲ್‌ನ ಜೊತೆ ಅನೈತಿಕ ಸಂಬಂದ ಬೆಳಸಿಬಿಟ್ಟಿದ್ದಳು. ಆದ್ರೆ ಆ ಅಂಕಲ್​ ಅಂಟಿ ಲವ್​ ಸ್ಟೋರಿನೇ ಇಂಟರೆಸ್ಟಿಂಗ್​​.

ಗಂಡ ಯಾವಾಗ ಬೆಂಗಳೂರು ಸೇರಿದ್ನೋ ಇತ್ತ ಹೆಂಡತಿ ಆಗಾಗ್ಗೆ ತವರು ಮನೆಗೆ ಹೋಗೋದಕ್ಕೆ ಶುರು ಮಾಡ್ತಾಳೆ. ಅಷ್ಟೇ ಅಲ್ಲ ಅದೇ ಶಿವಮೊಗ್ಗದಲ್ಲಿ ಕೆಲಸಕ್ಕೆ ಸೇರೋ ಯೋಚನೆ ಮಾಡ್ತಾಳೆ. ಆಗ ಈಕೆಗೆ ಕೆಲಸ ಸಿಗೋದು ಇದೆ ಕಮಲಾಕರ ಭಟ್ಟನ ಕಚೇರಿಯಲ್ಲಿ. ಕಮಲಾಕರ ಭಟ್​​ ಆಫೀಸ್‌ನಲ್ಲಿ ಕೆಲಸಕ್ಕೆ ಸೇರೋ ಸುಚಿತ್ರ ಕಾಲ ಕ್ರಮೇಣ ಆತನಿಗೆ ಕ್ಲೋಸ್​ ಆಗ್ತಾಳೆ. ಇತ್ತ ಕಮಲಾಕರ ಭಟ್ಟನ ಹೆಂಡತಿ ಕೂಡ ಸಾವನ್ನಪ್ಪಿರುತ್ತಾರೆ. ಆದ್ರೆ ಡಿಗ್ರಿ ಓದೋ ಮಗಳಿರುತ್ತಾಳೆ. ಒಂಟಿ ಜೀವನ ನಡೆಸುತ್ತಿದ್ದ ಈ ಕಮಲಾಕರ ಭಟ್ಟ ಈ ಆಂಟಿಯ ಮೋಹಕ್ಕೆ ಬಿದ್ದುಬಿಡ್ತಾನೆ. ಇಬ್ಬರೂ ಲವ್ವಿಡವ್ವಿ ಶುರು ಮಾಡ್ತಾರೆ..

ಶಿವಮೊಗ್ಗದಲ್ಲಿ ಇಷ್ಟೆಲ್ಲಾ ಆಗ್ತಿದ್ರೂ ಗಂಡ ಮಹೇಶನಿಗೆ ಇದ್ಯಾವುದೂ ಗೊತ್ತೇ ಇರೋದಿಲ್ಲ. ಆದ್ರೆ 6 ತಿಂಗಳ ಹಿಂದೆ ಸುಚಿತ್ರ ಆಂಟಿ ಗಂಟು ಮೂಟೆ ಕಟ್ಟಿಕೊಂಡು ಮಕ್ಕಳನ್ನೂ ಕರೆದುಕೊಂಡು ಈ ಜ್ಯೋತಿಷಿಯ ಮನೆಗೆ ಹೋಗಿ ಸೆಟಲ್​ ಆಗಿಬಿಡ್ತಾಳೆ. ಯಾವುದೇ ಕಾರಣಕ್ಕೂ ಗಂಡನ ಮನೆಗೆ ಬರೋದಿಲ್ಲ ಅಂತ ನಿರ್ಧರಿಸಿಬಿಟ್ತಾಳೆ.

ಇಷ್ಟೆಲ್ಲಾ ಆದಾಗ ಗಂಡ ಮಹೇಶ ಕೂಡ ಹಾಳಾಗಿ ಹೋಗ್ಲಿ ಅಂತ ಸುಮ್ಮನ್ನಾಗಿರುತ್ತಾನೆ. ಆದ್ರೆ ಇತ್ತೀಚೆಗೆ ಮಗಳೊಬ್ಬಳು ಅಪ್ಪನಿಗೆ ಮೆಸೆಜ್​ ಮಾಡಿ ಕರೆದುಕೊಂಡು ಹೋಗುವಂತೆ ಕೇಳಿಕೊಳ್ತಾಳೆ. ಅಪ್ಪ, ನನಗಿಲ್ಲಿ ಇರಲು ಆಗುತ್ತಿಲ್ಲ. ಅಮ್ಮ ಮತ್ತು ಕಮಲಾಕರ ಭಟ್​ ನನಗೆ ಟಾರ್ಚರ್​ ಕೊಡುತ್ತಿದ್ದಾರೆ. ದಯವಿಟ್ಟು ನನ್ನನ್ನ ಕರೆದುಕೊಂಡು ಹೋಗು ಅಂತ ಮೆಸೆಜ್​ ಮಾಡ್ತಾಳೆ..

ಯಾವಾಗ ಮಗಳೇ ನನ್ನನ್ನು ರಕ್ಷಿಸಿ ಅಪ್ಪ ಅಂತ ಕೇಳ್ತಾಳೋ. ಅಪ್ಪ ಮಹೇಶನಿಗೆ ತಡೆದುಕೊಳ್ಳೋದಕ್ಕೆ ಆಗೋದಿಲ್ಲ. ಹೇಗಾದ್ರೂ ಮಾಡಿ ಬಸ್​​ ಹತ್ತಿ ಸಿದ್ದಾಪುರಕ್ಕೆ ಬಾ ಅಂತ ಹೇಳ್ತಾನೆ. ಆಕೆ ತಂದೆ ಹೇಳಿದಂತೆ ಕೇಳಿ. ಮೊನ್ನೆ ಸೀದಾ ಸಿದ್ದಾಪುರಕ್ಕೆ ಬಂದುಬಿಡ್ತಾಳೆ. ನಂತರ ಏನಾಯ್ತು? ಈ ಕಮಲಾಕರ ಮತ್ತು ಸುಚಿತ್ರ ಕೊ*ಲೆ ಮಾಡಿದ್ದು ಯಾರನ್ನ?. ಈ ವಿಡಿಯೋದಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್..