ದಶಮಿ ತಿಥಿಯಂದೇ ಶಿವಮೊಗ್ಗದ ಹೊರವಲಯದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮದಲ್ಲಿ 17 ವರ್ಷದ ಹೆಣ್ಣು ಹುಲಿ ‘ದಶಮಿ’ (17) ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದೆ. ದಶಮಿ ಸಾವಿನಿಂದ ಪ್ರವಾಸಿಗರಲ್ಲೂ ನೋವುಂಟು ಮಾಡಿದೆ.
ಶಿವಮೊಗ್ಗ (ಸೆ.7): ದಶಮಿ ತಿಥಿಯಂದೇ ಶಿವಮೊಗ್ಗದ ಹೊರವಲಯದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮದಲ್ಲಿ 17 ವರ್ಷದ ಹೆಣ್ಣು ಹುಲಿ ‘ದಶಮಿ’ (17) ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದೆ.
ಶಿವಮೊಗ್ಗದ ದಶಮಿ ಹುಲಿ ಸಾವು
ವೃದ್ಧಾಪ್ಯದ ಕಾರಣಕ್ಕೆ ಆರೋಗ್ಯ ಸಮಸ್ಯೆ ಹೊಂದಿದ್ದ ದಶಮಿ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿತ್ತು. ಇದಕ್ಕೆ ಕಳೆದ 10 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಭಾನುವಾರ ಚಿಕಿತ್ಸೆಗೆ ಸ್ಪಂದಿಸದೇ ದಶಮಿ ಹುಲಿ ಸಾವನ್ನಪ್ಪಿದೆ.
ಶಿವಮೊಗ್ಗ ಮೃಗಾಲಯದಲ್ಲೇ ಜನಿಸಿದ್ದ ದಶಮಿ ಹುಲಿ
ಹೆಣ್ಣು ಹುಲಿ ದಶಮಿ ಶಿವಮೊಗ್ಗ ಮೃಗಾಲಯದಲ್ಲೇ ಜನಿಸಿತ್ತು. ಕಳೆದ 17 ವರ್ಷದಿಂದ ಮೃಗಾಲಯದ ಭಾಗವಾಗಿದ್ದ ದಶಮಿ ಸಾವನ್ನಪ್ಪಿರುವುದು ಪ್ರವಾಸಿಗರಲ್ಲೂ ನೋವುಂಟು ಮಾಡಿದೆ. ಸೋಮವಾರ ಪಶುವೈದ್ಯಕೀಯ ಕಾಲೇಜಿನ ವೈದ್ಯರಿಂದ ದಶಮಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ.


