Asianet Suvarna News Asianet Suvarna News

Rape on Minor Girl : ಪತ್ನಿ ಹೆರಿಗೆಗೆ ಕಳಿಸಿ ಅಪ್ರಾಪ್ತೆ ಗರ್ಭಿಣಿಯಾಗಿಸಿದ : ಹೆದರಿ ಆತ್ಮಹತ್ಯೆಗೆ ಯತ್ನಿಸಿದ

  • ಪತ್ನಿಯ ಅಕ್ಕನ ಅಪ್ರಾಪ್ತೆ ಮಗಳ ಮೇಲೆ ಅತ್ಯಾಚಾರ ಮಾಡಿ ಗರ್ಭಿಣಿಯಾಗಿಸಿದ 
  • ಪೊಲೀಸರಿಗೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ 
Minor girl becomes pregnant after being raped by  Relative in Nanjanagudu  snr
Author
Bengaluru, First Published Dec 8, 2021, 11:53 AM IST

 ನಂಜನಗೂಡು (ಡಿ.08):  ಪತ್ನಿಯನ್ನ ಹೆರಿಗೆಗೆ (Delivery) ಕಳುಹಿಸಿ ಅತ್ತಿಗೆಯ ಅಪ್ರಾಪ್ತ ಮಗಳನ್ನ (Minor Girl) ಅತ್ಯಾಚಾರ ಮಾಡಿ ಸಿಕ್ಕಿಬಿದ್ದ ಕಾಮುಕ ಪೊಲೀಸರಿಗೆ (Police) ಹೆದರಿ ವಿಷ ಸೇವಿಸಿ ಆತ್ಮಹತ್ಯೆಗೆ(Suicide)   ಯತ್ನಿಸಿದ ಘಟನೆ ತಾಲೂಕಿನ ಹಾರೋಪುರ ಗ್ರಾಮದಲ್ಲಿ ನಡೆದಿದೆ. ಪ್ರದೀಪ್‌ (26) ಅತ್ಯಾಚಾರ ಆರೋಪಿಯಾಗಿದ್ದು, ಮೈಸೂರಿನ (Mysuru) ಕೆ.ಆರ್‌. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಹಾರೋಪುರದಲ್ಲಿ ಪುಟ್ಟ ಅಂಗಡಿ ನಡೆಸುತ್ತಿರುವ ಪ್ರದೀಪ್‌ ತನ್ನ ಪತ್ನಿಯನ್ನ ತವರು ಮನೆಗೆ ಹೆರಿಗೆಗಾಗಿ ಕಳಿಸಿದ್ದಾನೆ. ಇತ್ತ ಪತ್ನಿಯ ಅಕ್ಕನ ಮಗಳು 14 ವರ್ಷದ ಅಪ್ರಾಪ್ತ ಮಗಳ ಜೊತೆ ತಬ್ಬಿಕೊಂಡ ಫೋಟೋ ಒಂದನ್ನ ತೋರಿಸಿ ಅಪ್ರಾಪ್ತೆಯನ್ನ ಬೆದರಿಸಿ ಬ್ಲಾಕ್‌ ಮೇಲ್ (Black Mail) ಮಾಡಿ ಅತ್ಯಾಚಾರವೆಸಗಿದ್ದಾನೆ.

ನಿರಂತರವಾಗಿ ನಡೆಸಿದ ಅತ್ಯಾಚಾರ ಪರಿಣಾಮ ಅಪ್ರಾಪ್ತೆ ಗರ್ಭಿಣಿಯಾಗಿದ್ದಾಳೆ.  ಪ್ರದೀಪ್‌ ನಡೆಸಿದ ಕೃತ್ಯವನ್ನ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ, ಖಾಸಗಿ ಲ್ಯಾಬ್ (Private Lab) ವೊಂದರಲ್ಲಿ ಅಬಾರ್ಷನ್‌ ಮಾಡಿಸುವ ಯತ್ನ ನಡೆದಿದೆ. ಈ ವೇಳೆ ಲ್ಯಾಬ್ನ ಸಿಬ್ಬಂದಿ ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ.

ಬಿಳಿಗೆರೆ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ (POCSO) ಪ್ರಕರಣ ದಾಖಲಾಗುತ್ತಿದ್ದಂತೆಯೇ ಪ್ರದೀಪ್‌ ವಿಷ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೀಗ ಅಪ್ರಾಪ್ತ ಬಾಲಕಿ ಮೈಸೂರಿನ (Mysuru) ಪುನರ್ವಸತಿ ಕೇಂದ್ರದ ಆಶ್ರಯದಲ್ಲಿದ್ದಾಳೆ. ಅಪ್ರಾಪ್ತ ಬಾಲಕಿ 7 ತಿಂಗಳ ಗರ್ಭಿಣಿಯಾಗಿದ್ದರೂ (Pregnant) ಸಹ ಶಿಶು ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಬಿಳಿಗೆರೆ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ನಶೆ ಪದಾರ್ಥ ನೀಡಿ ಅತ್ಯಾಚಾರ :  ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಎರಡು (Muzaffarnagar District, Uttar Pradesh) ಖಾಸಗಿ ಶಾಲೆಗಳ ಮ್ಯಾನೇಜರ್‌ಗಳ ವಿರುದ್ಧ 17 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual Harassment) ಎಸಗಿದ್ದಾರೆ ಮತ್ತು ಮಾದಕ ದ್ರವ್ಯ ನೀಡಿ ಅತ್ಯಾಚಾರಕ್ಕೆ (Rape) ಯತ್ನಿಸಿದ್ದಾರೆ ಎಂಬ ಆರೋಪ ಕೆಳಿ ಬಂದಿದೆ. ಈ ಸಂಬಂಧ ಪೊಲೀಸರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರೊಂದಿಗೆ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕೆ ಪೊಲೀಸ್ ಅಧಿಕಾರಿಯೊಬ್ಬರನ್ನು (Police Officer) ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತೀಯ ಜನತಾ ಪಕ್ಷದ (BJP Leader) ಮುಖಂಡ ಮತ್ತು ಸ್ಥಳೀಯ ಶಾಸಕ ಪ್ರಮೋದ್ ಉತ್ವಾಲ್ ಅವರ ಮಧ್ಯಸ್ಥಿಕೆಯ ನಂತರ, ಕುಟುಂಬದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಮುಜಾಫರ್‌ನಗರ ಜಿಲ್ಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಯಾದವ್ ಸೋಮವಾರ ಹೇಳಿದ್ದಾರೆ. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಪುರ್ಕಾಜಿ ಪೊಲೀಸ್ ಠಾಣೆಯ ಉಸ್ತುವಾರಿ ವಿನೋದ್ ಕುಮಾರ್ ಸಿಂಗ್ ಅವರನ್ನು ತನಿಖೆಗೊಳಪಡಿಸಲಾಗಿದೆ ಎಂದು ಅವರು ಹೇಳಿದರು. ಅದೇ ಸಮಯದಲ್ಲಿ, ಭೋಪಾ ಪೊಲೀಸ್ ಠಾಣೆಯಲ್ಲಿರುವ ಸೂರ್ಯ ದೇವ್ ಪಬ್ಲಿಕ್ ಸ್ಕೂಲ್ನ ನಿರ್ವಾಹಕ ಯೋಗೇಶ್ ಕುಮಾರ್ ಚೌಹಾಣ್ ಮತ್ತು ಪುರ್ಕಾಜಿ ಪ್ರದೇಶದ ಜಿಜಿಎಸ್ ಇಂಟರ್ನ್ಯಾಷನಲ್ ಸ್ಕೂಲ್‌ನ ನಿರ್ವಾಹಕ ಅರ್ಜುನ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಮಾದಕ ದ್ರವ್ಯಗಳನ್ನು ನೀಡಿದ ಸೆಕ್ಷನ್‌ ಹಾಗೂ  POCSO ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಪ್ರ್ಯಾಕ್ಟಿಕಲ್ ಎಕ್ಸಾಂ ಎಂದು ಹೆಣ್ಮಕ್ಕಳನ್ನು ಬೇರೆ ಶಾಲೆಗೆ ಕರೆದೊಯ್ದಿದ್ದ ಮ್ಯಾನೇಜರ್

ಯೋಗೇಶ್ ಅವರು ಸೂರ್ಯ ದೇವ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿರುವ 17 ಹುಡುಗಿಯರನ್ನು ಪ್ರಾಯೋಗಿಕ ಪರೀಕ್ಷೆಗಾಗಿ ಜಿಜಿಎಸ್ ಶಾಲೆಗೆ ಕರೆದೊಯ್ದ ಸಂದರ್ಭ ಈ ಘಟನೆ ನಡೆದಿದೆ ಎಂದು ಯಾದವ್ ಹೇಳಿದರು. ಅಲ್ಲದೇ ಅವರು ರಾತ್ರಿಯಿಡೀ ಅಲ್ಲಿಯೇ ಇರಬೇಕಾಯಿತು. ಸಂತ್ರಸ್ತರ ಸಂಬಂಧಿಕರ ದೂರಿನ ಪ್ರಕಾರ, ಆರೋಪಿಗಳಿಬ್ಬರೂ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಮಾದಕ ದ್ರವ್ಯ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಆರೋಪಿಗಳು ಹುಡುಗಿಯರಿಗೆ ಬೆದರಿಕೆ ಹಾಕಿದ್ದಾರೆ ಎಂದು ಕುಟುಂಬದ ಸದಸ್ಯರು ದೂರಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಯಾದವ್ ಹೇಳಿದ್ದಾರೆ. ಕುಟುಂಬದವರ ಪ್ರಕಾರ, ಅವರು ಸ್ಥಳೀಯ ಪೊಲೀಸರಿಗೆ ತಿಳಿಸಿದಾಗ ಅವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ, ನಂತರ ಅವರು ಶಾಸಕರನ್ನು ಸಂಪರ್ಕಿಸಿದರು.

ಶಾಲಾ ಆಡಳಿತದ ಇಬ್ಬರು ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 328 (ಅಪರಾಧ ಮಾಡುವ ಉದ್ದೇಶದಿಂದ ವಿಷದ ಮೂಲಕ ಹಾನಿಯನ್ನುಂಟುಮಾಡುವುದು), 354 (ಮಹಿಳೆಯರ ಘನತೆಗೆ ಚ್ಯುತಿ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಶಕ್ತಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ. ಲೈಂಗಿಕ ದೌರ್ಜನ್ಯ, ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Follow Us:
Download App:
  • android
  • ios