Asianet Suvarna News Asianet Suvarna News

Dakshina Kannada|ಶಾಲೆಗೆ ಹೋಗುತ್ತಿದ್ದ ಬಾಲಕಿ ಅಪಹರಿಸಿ ಸಾಮೂಹಿಕ ರೇಪ್‌

*   ಮತ್ತು ಬರಿಸುವ ಚಾಕೋಲೇಟ್‌ ನೀಡಿ ಹೇಯಕೃತ್ಯ
*   ಬಂಟ್ವಾಳ ಬಳಿ ಘಟನೆ: ನಾಲ್ವರು ಕಾಮಾಂಧರ ಅರೆಸ್ಟ್‌
*   ಅಸ್ವಸ್ಥಳಾದ ಬಾಲಕಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ 
 

Gang Rape on 16 Year Old Girl at Bantwal in Dakshina Kannada grg
Author
Bengaluru, First Published Oct 10, 2021, 7:38 AM IST

ಬಂಟ್ವಾಳ(ಅ.10):  ಶಾಲೆಗೆ ತೆರಳುತ್ತಿದ್ದ 16 ವರ್ಷದ ಬಾಲಕಿಯನ್ನು ಕಾರಿನಲ್ಲಿ ಅಪಹರಿಸಿದ ತಂಡವೊಂದು, ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬಂಟ್ವಾಳ(Bantwal) ಸಮೀಪದ ಅಮ್ಟಾಡಿ ಎಂಬಲ್ಲಿ ನಡೆದಿದೆ. 16 ವರ್ಷದ ಬಾಲಕಿ ನೀಡಿದ ದೂರಿನ ಮೇರೆಗೆ ಪೊಲೀಸರು ಪೋಕ್ಸೋ ಕಾಯ್ದೆಯಡಿ(Pocso Act) ಪ್ರಕರಣ ದಾಖಲಿಸಿ ನಾಲ್ವರು ದುರುಳರನ್ನು ಬಂಧಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 7 ಗಂಟೆಯ ವೇಳೆಗೆ ಬಾಲಕಿ ಶಾಲೆಗೆ(School) ಹೋಗುತ್ತಿದ್ದಳು. ಈ ವೇಳೆ ಬಿಳಿ ಕಾರಿನಲ್ಲಿ ಬಂದ ಪರಿಚಿತನೊಬ್ಬ, ತನ್ನನ್ನು ಕಾರಿನಲ್ಲಿ ಹತ್ತಿಸಿಕೊಂಡು ಬಳಿಕ ಅಮ್ಟಾಡಿಯ ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದ. ಜೊತೆಗಿದ್ದವರೊಂದಿಗೆ ಸೇರಿ ಅತ್ಯಾಚಾರ ಎಸಗಿದ ಎಂದು ಬಾಲಕಿ ದೂರು ನೀಡಿದ್ದಾಳೆ. ಅಸ್ವಸ್ಥಳಾದ ಬಾಲಕಿ ಸದ್ಯ ಮಂಗಳೂರಿನ(Mangaluru) ಆಸ್ಪತ್ರೆಯಲ್ಲಿ(Hospital) ಚಿಕಿತ್ಸೆ ಪಡೆಯುತ್ತಿದ್ದಾಳೆ.

ಪಾಪಿ ಅಪ್ಪ: 6 ವರ್ಷದ ಮಗಳ ರೇಪ್ ಮಾಡಲಾಗಲಿಲ್ಲ ಎಂದು ಗುಪ್ತಾಂಗಕ್ಕೆ ಕೋಲು ಹಾಕಿದ!

ಈಕೆಯ ಹೇಳಿಕೆ ಆಧರಿಸಿ ಪ್ರಮುಖ ಆರೋಪಿಸಹಿತ ನಾಲ್ವರನ್ನು ಬಂಟ್ವಾಳ ನಗರ ಪೊಲೀಸರ(Police) ವಿಶೇಷ ತಂಡ ಶನಿವಾರ ವಶಕ್ಕೆ(Arrest) ಪಡೆದು ತೀವ್ರ ವಿಚಾರಣೆಗೆ ಗುರಿಪಡಿಸಿದೆ. ಆರೋಪಿಗಳು(Accused) ಬಾಲಕಿಗೆ ಮತ್ತು ಬರುವ ಚಾಕೊಲೇಟ್‌ ನೀಡಿದೆ. ಕೃತ್ಯದ ಬಳಿಕ ಆಕೆಯನ್ನು ಬ್ರಹ್ಮರಕೂಟ್ಲುವಿನ ಟೋಲ್‌ ಗೇಟ್‌ ಬಳಿ ಬಿಟ್ಟು ಹೋಗಿರುವುದು ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ(CCTV) ದಾಖಲಾಗಿದೆ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪೋಕ್ಸೋ ಕಾಯ್ದೆಯಡಿ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋುಷಿಕೇಶ್‌ ಸೋನಾವಣೆ ತಿಳಿಸಿದ್ದಾರೆ.
 

Follow Us:
Download App:
  • android
  • ios