ಮಂಗಳೂರಿನ ಖ್ಯಾತ ಎಂಜಿನಿಯರಿಂಗ್ ಶಿಕ್ಷಣ ತಜ್ಞ ಪ್ರೊ.ಡಾ. ಗೋಪಾಲ್ ಮುಗೇರಾಯ ಅವರು ಜಪಾನ್‌ನ ಪ್ರತಿಷ್ಠಿತ ಟಕಾವೊ ಕೋಗ್ಯೋ ಎಂಜಿನಿಯರಿಂಗ್ ಕಂಪನಿಯ ವಿಶೇಷ ತಾಂತ್ರಿಕ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. ಈ ನೇಮಕಾತಿಯು ಭಾರತ-ಜಪಾನ್ ನಡುವಿನ ತಾಂತ್ರಿಕ ಮತ್ತು ಶೈಕ್ಷಣಿಕ ಸಹಕಾರವನ್ನು ಬಲಪಡಿಸುವ ನಿರೀಕ್ಷೆಯಿದೆ.
ಮಂಗಳೂರು: ಭಾರತದ ಖ್ಯಾತ ಎಂಜಿನಿಯರಿಂಗ್ ಶಿಕ್ಷಣ ತಜ್ಞ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದ ಹಿರಿಯ ಆಡಳಿತಗಾರ ಪ್ರೊ.ಡಾ. ಗೋಪಾಲ್ ಮುಗೇರಾಯ ಅವರನ್ನು ಜಪಾನ್‌ನ ಪ್ರತಿಷ್ಠಿತ ಎಂಜಿನಿಯರಿಂಗ್ ವಿನ್ಯಾಸ ಮತ್ತು ಕೈಗಾರಿಕಾ ತಂತ್ರಜ್ಞಾನ ಸಂಸ್ಥೆಯಾದ ಟಕಾವೊ ಕೋಗ್ಯೋ ಎಂಜಿನಿಯರಿಂಗ್ ಕಂಪನಿ ಲಿಮಿಟೆಡ್‌ನ ವಿಶೇಷ ತಾಂತ್ರಿಕ ಸಲಹೆಗಾರರಾಗಿ ನೇಮಕ ಮಾಡಲಾಗಿದೆ.
ಡಾ.ಮುಗೇರಾಯ ಅನುಭವ
ಪ್ರಸ್ತುತ ಡಾ.ಮುಗೇರಾಯ ಅವರು ಗೋವಾ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು ಎನ್‌ಐಟಿ ಗೋವಾ, ಎನ್‌ಐಟಿ ಅಗರ್ತಲಾ ಹಾಗೂ ಎನ್‌ಐಟಿ ಮಿಜೋರಾಂ ಸಂಸ್ಥೆಗಳ ನಿರ್ದೇಶಕರಾಗಿ, ಎನ್‌ಐಟಿಕೆ ಸುರತ್ಕಲ್‌ನ ಡೀನ್ ಆಗಿ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಜಪಾನ್‌ನ ಪ್ರಮುಖ ಎಂಜಿನಿಯರಿಂಗ್ ಸಂಸ್ಥೆಯಿಂದ ದೊರೆತಿರುವ ಈ ನೇಮಕಾತಿ, ಭಾರತೀಯ ಎಂಜಿನಿಯರಿಂಗ್ ಶಿಕ್ಷಣ ಮತ್ತು ತಾಂತ್ರಿಕ ಪರಿಣತಿಗೆ ಜಾಗತಿಕ ಮಟ್ಟದಲ್ಲಿ ದೊರೆತಿರುವ ಮನ್ನಣೆಯ ಪ್ರತೀಕವಾಗಿದೆ. ಇದು ಭಾರತ–ಜಪಾನ್ ನಡುವಿನ ಎಂಜಿನಿಯರಿಂಗ್, ಸುಧಾರಿತ ಉತ್ಪಾದನಾ ತಂತ್ರಜ್ಞಾನ, ನವೋದ್ಯಮ, ಕೌಶಲ್ಯಾಭಿವೃದ್ಧಿ ಹಾಗೂ ಜ್ಞಾನ ವಿನಿಮಯ ಕ್ಷೇತ್ರಗಳ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಆಸ್ಪತ್ರೆ, ಶಾಲಾ ಆವರಣ ಕ್ಯಾಂಟೀನ್‌ಗಳಲ್ಲಿ ಜಂಕ್ ಫುಡ್ ನಿಷೇಧ: ಆರೋಗ್ಯ ಸಚಿವ ಯುಟಿ ಖಾದರ್ ಮತ್ತೊಂದು ಖಡಕ್ ನಿರ್ಧಾರ
ಇದನ್ನೂ ಓದಿ: ಮೂಡುಬಿದಿರೆಯ ಅನುಷಾ ಆಚಾರ್ ಸ್ಟಾರ್ಟಪ್‌ಗೆ ರಾಷ್ಟ್ರಪತಿ ಭವನದಿಂದ ಅಹ್ವಾನ! ರಾಷ್ಟ್ರೀಯ ಮನ್ನಣೆ


