MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಅಮ್ಮನ ನೆನೆದು ಹೆಚ್‌ಡಿಕೆ ಕಣ್ಣೀರು: ಇಂದು ಮಾವಿನಕೆರೆ ಹರದನಹಳ್ಳಿಯಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ, ಸ್ಥಳ, ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ

ಅಮ್ಮನ ನೆನೆದು ಹೆಚ್‌ಡಿಕೆ ಕಣ್ಣೀರು: ಇಂದು ಮಾವಿನಕೆರೆ ಹರದನಹಳ್ಳಿಯಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ, ಸ್ಥಳ, ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ

Channamma final rites ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ ಶಿವೈಕ್ಯರಾಗಿದ್ದಾರೆ .ಅವರ ಅಂತ್ಯಕ್ರಿಯೆ ಇಂದು ಭಾನುವಾರ ಮಾವಿನಕೆರೆ ಹರದನಹಳ್ಳಿಯಲ್ಲಿ ನಡೆಸಲಾಗುವುದು ಎಂದು ಪುತ್ರ ಹೆಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಮುಂದೆ ಓದಿ.

2 Min read
Author : Kannadaprabha News| Kannada Prabha
Published : Jul 19 2026, 05:59 AM IST
Share this Photo Gallery
  • FB
  • TW
  • Linkdin
  • Whatsapp
14
ಇಂದು ಮಾವಿನಕೆರೆ ಹರದನಹಳ್ಳಿಯಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ
Image Credit : Asianet News

ಇಂದು ಮಾವಿನಕೆರೆ ಹರದನಹಳ್ಳಿಯಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ

ನಮ್ಮ ಜನ್ಮದಾತೆ ನಮ್ಮನ್ನು ಅಗಲಿದ್ದಾರೆ. ಭಾನುವಾರ ಬೆಳಗ್ಗೆ 11 ಗಂಟೆಯವರೆಗೂ ಪದ್ಮನಾಭ ನಿವಾಸದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ನಂತರ ಹಾಸನದ ಮಾವಿನಕೆರೆ ಅಥವಾ ಹರದನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು. ಅಂತಿಮ ಸಂಸ್ಕಾರ ಎಲ್ಲಿ ಮಾಡಬೇಕು ಎಂಬುದರ ಬಗ್ಗೆ ಕುಟುಂಬ ಸದಸ್ಯರ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಕೇಂದ್ರ ಸಚಿವ ಹಾಗೂ ಚೆನ್ನಮ್ಮ ಅವರ ಪುತ್ರರಾದ ಎಚ್‌.ಡಿ ಕುಮಾರಸ್ವಾಮಿ ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ನಮ್ಮಮ್ಮನದು ಸರಳ ಜೀವನ.. ದೈವಭಕ್ತೆ
Image Credit : Asianet News

ನಮ್ಮಮ್ಮನದು ಸರಳ ಜೀವನ.. ದೈವಭಕ್ತೆ

ಆಸ್ಪತ್ರೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ತಾಯಿಯವರು ಮೊದಲಿನಿಂದಲೂ ಸರಳ ಜೀವನ ನಡೆಸಿಕೊಂಡು ಬಂದವರು, ದೈವಭಕ್ತೆ ಆಗಿದ್ದರು. ನಮ್ಮ ತಂದೆಯ ಸಂಗಾತಿಯಾಗಿ 70 ವರ್ಷ ಬಾಳಿದ್ದಾರೆ. ನಮ್ಮ ತಂದೆಯವರ ಬದುಕಿಗೆ ಅವರ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾರೆ. ನಮ್ಮ ಬದುಕಿನಲ್ಲಿ ನಮಗೆ ತಾಯಿ ಹೃದಯ ಅಂತ ಬಂದಿದ್ದರೆ ಅದು ಅವರಿಂದ. ಒಂದು ಸಣ್ಣ ಹಳ್ಳಿಯಲ್ಲಿ ಅವರು ಜನಿಸಿದವರು. ಲಕ್ಷಾಂತರ ಕುಟುಂಬಗಳ ಬದುಕಿಗೆ ದಾರಿ ದೀಪವಾಗಿದ್ದವರು ಎಂದು ಹೇಳಿದರು.

Related Articles

Related image1
ಚೆನ್ನಮ್ಮ ದೇವೇಗೌಡ ನಿಧನಕ್ಕೆ ಸಿಎಂ ಡಿಕೆಶಿ, ಪ್ರಧಾನಿ ನರೇಂದ್ರ ಮೋದಿ ಸಂತಾಪ
Related image2
ಪತ್ನಿ ಚೆನ್ನಮ್ಮ ಸಾವು, ಆಸ್ಪತ್ರೆ ಎದುರಲ್ಲೇ ಕಣ್ಣೀರಿಟ್ಟು ಮೌನವಾದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ
34
ಕಳೆದ ಒಂದೂವರೆ ವರ್ಷದಿಂದ ಅನಾರೋಗ್ಯ
Image Credit : Asianet News

ಕಳೆದ ಒಂದೂವರೆ ವರ್ಷದಿಂದ ಅನಾರೋಗ್ಯ

ಕಳೆದ ಒಂದೂವರೆ ವರ್ಷದಿಂದ ಅವರಿಗೆ ಆರೋಗ್ಯದ ಸಮಸ್ಯೆ ಪ್ರಾರಂಭವಾಗಿತ್ತು. ಅವರು ದಿನಕ್ಕೆ 5 ಗಂಟೆಗೂ ಹೆಚ್ಚು ಕಾಲ ದೇವರ ಕೋಣೆಯಲ್ಲಿಯೇ ಭಗವಂತನ ಸ್ಮರಣೆ ಮಾಡಿಕೊಂಡು ಸಮಯ ಕಳೆಯುತ್ತಿದ್ದರು. ನಮ್ಮ ರಾಜಕೀಯದ ಬದುಕಿನಲ್ಲಿ ಅಲ್ಪ ಸ್ವಲ್ಪ ಒಳ್ಳೆ ಬುದ್ದಿ ಕಲಿತ್ತಿದ್ದರೆ ಅದು ಅವರಿಂದ. ಕಳೆದ ಒಂದು ವರ್ಷದಿಂದ ಅವರು ಪ್ರತಿನಿತ್ಯ ಪಡುತ್ತಿದ್ದ ಯಾತನೆಯನ್ನು ನಾವು ನೋಡುತ್ತಿದ್ದೆವು. ನಾವು ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರೂ ಅವರ ಸ್ಮರಣೆಯಲ್ಲಿಯೇ ಇರುತ್ತಿದ್ದೆವು ಎಂದರು.

ಸಮಯ ಸಿಕ್ಕಾಗ ಅವರನ್ನು ಮಾತನಾಡಿಸಲು ಹೋದಾಗ ಊಟ ಮಾಡಿದ್ದೀಯಾ? ಮೊದಲು ಊಟ ಮಾಡು ಎಂದು ಹೇಳುತ್ತಿದ್ದರು. ಅವರಿಗೆ ಎರಡು ಬಾರಿ ಕೋವಿಡ್‌ ಸೋಂಕು ತಗುಲಿತ್ತು. ಆ ಸಮಯದಲ್ಲಿ ಶ್ವಾಸಕೋಶದ ಸಮಸ್ಯೆ ಉಂಟಾಗಿತ್ತು. ಕಳೆದ 4 ದಿನಗಳಿಂದ ಸಮಸ್ಯೆ ಬಿಗಡಾಯಿಸಿತ್ತು. ವೈದ್ಯರು ಅವರನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಉತ್ತಮ ಪ್ರಯತ್ನ ಪಟ್ಟಿದ್ದಾರೆ.

44
ರಾಜರಾಜೇಶ್ವರಿ ಪರಮಭಕ್ತೆ ಚೆನ್ನಮ್ಮ
Image Credit : Asianet News

ರಾಜರಾಜೇಶ್ವರಿ ಪರಮಭಕ್ತೆ ಚೆನ್ನಮ್ಮ

ನಮ್ಮ ತಾಯಿ ರಾಜರಾಜೇಶ್ವರಿ ಭಕ್ತೆಯಾಗಿದ್ದರು. ಕಳೆದ 30-35 ವರ್ಷಗಳಿಂದ ಪ್ರತಿ ಶುಕ್ರವಾರ ರಾಜರಾಜೇಶ್ವರಿ ದೇವಾಲಯಕ್ಕೆ ತಪ್ಪದೇ ಹೋಗುತ್ತಿದ್ದರು. ಆ ತಾಯಿಯ ಕೃಪೆಯಿಂದ ಈ ಹಿಂದೆ ಆ್ಯಸಿಡ್‌ ದಾಳಿಗೆ ಒಳಗಾಗಿದ್ದ ಸಂದರ್ಭದಲ್ಲಿ ಬದುಕುಳಿದರು. ಆ ದೇವರೇ ಅಂದು ಅವರನ್ನು ಬದುಕಿಸಿದ್ದ. ಆ ದೇವರೇ ಇದೀಗ ಅವರ ಬದುಕು ಸಾಕು ಎಂಬ ತೀರ್ಮಾನಕ್ಕೆ ಬಂದು ಕರೆದುಕೊಂಡು ಹೋಗಿದ್ದಾರೆ ಎಂಬುದು ನನ್ನ ಅಭಿಪ್ರಾಯ ಎಂದು ಭಾವುಕರಾದರು.

ಅವರಿಂದ ಜೀವನ ಕಂಡುಕೊಂಡಿರುವ ಕುಟುಂಬದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಅಂತಿಮ ದರ್ಶನ ಕಲ್ಪಿಸುವುದು ನಮ್ಮ ಕರ್ತವ್ಯ. ಭಾನುವಾರ ಬೆಳಗ್ಗೆ 11 ಗಂಟೆಯವರೆಗೂ ಪದ್ಮನಾಭ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ನಂತರ ಹಾಸನದ ಮಾವಿನಕೆರೆ ಅಥವಾ ಹರದನಹಳ್ಳಿ ಅಂತ್ಯ ಸಂಸ್ಕಾರ ಮಾಡಲಾಗುವುದು. ಅಂತಿಮ ಸಂಸ್ಕಾರ ಎಲ್ಲಿ ಮಾಡಬೇಕು ಎಂಬುದರ ಬಗ್ಗೆ ಕುಟುಂಬ ಸದಸ್ಯರ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮಾಹಿತಿ ನೀಡಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಹೆಚ್.ಡಿ. ಕುಮಾರಸ್ವಾಮಿ
ಎಚ್‌.ಡಿ. ದೇವೇಗೌಡ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಸಂಪುಟ ವಿಸ್ತರಣೆ ವಿಳಂಬಕ್ಕೆ ಕಾರಣ ಬಯಲು! ರಾಜ್ಯ ನಾಯಕರು ಕೊಟ್ಟ ಆ ಹೆಸರುಗಳಿಗೆ ಹೈಕಮಾಂಡ್ ಆಕ್ಷೇಪ ಏಕೆ?
Recommended image2
BLO Death: ಆಸ್ಪತ್ರೆಗೆ ತಲುಪುವಷ್ಟರಲ್ಲೇ ನಿಂತಿತು ಉಸಿರು! ಎಸ್‌ಐಆರ್ ಸಭೆ ಬೆನ್ನಲ್ಲೇ ಬಿಎಲ್‌ಒ ರತ್ನಮ್ಮ ಸಾವು; ಅಸಲಿ ಕಾರಣ ಏನು ಗೊತ್ತಾ?
Recommended image3
ಜ್ಯೋತಿಷಿಗಳು ನುಡಿದಿದ್ದ ಮಾತು ನಿಜವಾಯ್ತು, ಚೆನ್ನಮ್ಮ ಅವರಿಗೆ ಸಿಕ್ಕಿತು ಮುತ್ತೈದೆ ಸಾವು: ವೈಎಸ್‌ವಿ ದತ್ತ
Related Stories
Recommended image1
ಚೆನ್ನಮ್ಮ ದೇವೇಗೌಡ ನಿಧನಕ್ಕೆ ಸಿಎಂ ಡಿಕೆಶಿ, ಪ್ರಧಾನಿ ನರೇಂದ್ರ ಮೋದಿ ಸಂತಾಪ
Recommended image2
ಪತ್ನಿ ಚೆನ್ನಮ್ಮ ಸಾವು, ಆಸ್ಪತ್ರೆ ಎದುರಲ್ಲೇ ಕಣ್ಣೀರಿಟ್ಟು ಮೌನವಾದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved