ಮಂಗಳೂರಿನ ಮರಕಡದಲ್ಲಿ, ಟೈರ್ ಸ್ಫೋಟಗೊಂಡು ಕಾರೊಂದು ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಹಾರಿ ಅಂಗಳಕ್ಕೆ ಬಿದ್ದಿದೆ. ಕಾರು ಚಲಾಯಿಸುತ್ತಿದ್ದ ಚರ್ಚ್‌ನ ಧರ್ಮಗುರುಗಳು ಈ ಘಟನೆಯಲ್ಲಿ ಪವಾಡಸದೃಶವಾಗಿ ಪಾರಾಗಿದ್ದಾರೆ.

ಮಂಗಳೂರು: ಟೈರ್‌ ಸ್ಪೋಟಗೊಂಡ ನಂತರ ಕಾರೊಂದು ಅಪಘಾತಕ್ಕೀಡಾಗಿ ಮನೆಯ ಕಾಂಪೌಂಡ್ ಹಾರಿ ಬಂದು ಅಂಗಳಕ್ಕೆ ಬಂದು ಬಿದ್ದಂತಹ ಘಟನೆ ಮಂಗಳೂರಿನ ಮರಕಡದಲ್ಲಿ ನಡೆದಿದೆ. ಘಟನೆಯ ವೇಳೆ ಕಾರಿನಲ್ಲಿದ್ದ ಪಾದ್ರಿಯೊಬ್ಬರು ಪವಾಡದಂತೆ ಪಾರಾಗಿದ್ದಾರೆ. ನಗರದ ಕಾವೂರು-ಮರವೂರು ರಸ್ತೆಯ ಮರಕಡ ಎಂಬಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದೆ. ಘಟನೆಯ ವೀಡಿಯೋ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.

ಈ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದವರನ್ನು ಮಂಗಳೂರಿನ ಬೋಂದೆಲ್‌ನ ಸಂತ ಲಾರೆನ್ಸ್ ಚರ್ಚ್‌ನ ಧರ್ಮಗುರು ಫಾದರ್ ಆಂಡ್ರೂ ಲಿಯೋ ಡಿಸೋಜಾ ಎಂದು ಗುರುತಿಸಲಾಗಿದೆ. ಘಟನೆಯ ವೇಳೆ ಇವರು ಕಾರು ಚಾಲನೆ ಮಾಡುತ್ತಿದ್ದರು. ಫಾದರ್ ಆಂಡ್ರೂ ಅವರು ನೀರುಡೆಯಲ್ಲಿರುವ ತಮ್ಮ ನಿವಾಸದಲ್ಲಿ ಪಾರ್ಟಿ ಮಾಡಿ ವಾಪಸ್ ಬಜ್ಪೆ ಮೂಲಕ ಬೋಂದೆಲ್ ಕಡೆಗೆ ಬರುತ್ತಿದ್ದಾಗ ಈ ಅನಾಹುತ ಸಂಭವಿಸಿದೆ.

ಇದನ್ನೂ ಓದಿ: ಬೆಂಗಳೂರಿನ ಮತ್ತಿಕೆರೆಯಲ್ಲಿ ಅಮಾನುಷ ಘಟನೆ: ಜಗಳ ಮಾಡಿಕೊಂಡು ಮಗುವನ್ನು ಬೀದಿಯಲ್ಲಿ ಎಸೆದು ಹೋದ ಪೋಷಕರು

ಮರಕಡದಲ್ಲಿ ಬರುತ್ತಿದ್ದಾಗ ಏಕಾಏಕಿ ಕಾರಿನ ಟೈರ್ ಬ್ಲಾಸ್ಟ್ ಆಗಿದ್ದು, ಇದರಿಂದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ವೇಗವಾಗಿ ಸಾಗಿ ಪಕ್ಕದ ಕಾಂಪೌಂಡ್ ಏರಿ ಮನೆಯೊಂದರ ಗೋಡೆಗೆ ಗುದ್ದಿ ಅಂಗಳಕ್ಕೆ ಬಿದ್ದಿದೆ. ಕೂಡಲೇ ಅಲ್ಲಿಗೆ ಓಡಿ ಬಂದ ಸ್ಥಳೀಯರು ಮಗುಚಿ ಬಿದ್ದ ಕಾರನ್ನು ನೇರವಾಗಿ ನಿಲ್ಲಿಸಿ ಕಾರಿನೊಳಗಿದ್ದ ಫಾದರ್ ಆಂಡ್ರೂ ಅವರನ್ನು ಅಲ್ಲಿಂದ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ದೇವರೇ ನನ್ನನ್ನು ಬದುಕಿಸಿದ್ದಾನೆ ಎಂದು ಹೇಳಿದರು. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.

ಇದನ್ನೂ ಓದಿ: ಈ ಪಾಕಿಸ್ತಾನಿ ನಾಯಕನ ಹೆಸರಿನಲ್ಲಿ ಮುಂಬೈನಲ್ಲಿ ಇನ್ನೂ ಇದೆ 2.5 ಎಕರೆಯ ಬೃಹತ್ ಬಂಗ್ಲೆ

ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋದಲ್ಲಿ ಕಾರು ಕಾಂಪೌಂಡ್ ಹಾರಿ ಮನೆಯ ಗೋಡೆಗೆ ಡಿಕ್ಕಿಹೊಡೆದು ಕೆಳಗೆ ಬೀಳುವುದನ್ನು ಕಾಣಬಹುದು. ಹಾಗೂ ಸದ್ದು ಕೇಳಿ ಅಲ್ಲಿಗೆ ಓಡಿ ಬಂದ ಜನ ಪಲ್ಟಿ ಆದ ಕಾರನ್ನು ಮೇಲೆತ್ತಿ ನಿಲ್ಲಿಸಿ ಕಾರಿನಲ್ಲಿದ್ದ ಫಾದರ್‌ ಅವರನ್ನು ರಕ್ಷಿಸಿದ್ದಾರೆ.

View post on Instagram