ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಹಲವು ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಮತ್ತು ಉತ್ತರ ಕನ್ನಡ ಜಿಲ್ಲೆಗಳ ಆಯ್ದ ತಾಲೂಕುಗಳ ಶಾಲೆ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ನೀಡಿದೆ.

ಕರ್ನಾಟಕದ (Karnataka) ಕರಾವಳಿ (Coastal Karnataka) ಮತ್ತು ಮಲೆನಾಡು ಭಾಗಗಳಲ್ಲಿ ಭಾರೀ ಮಳೆ (Heavy Rain) ಮುಂದುವರಿದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಕನ್ನಡ (Dakshina Kannada) ಮತ್ತು ಚಿಕ್ಕಮಗಳೂರು (Chikkamagaluru) ಶಿವಮೊಗ್ಗ, ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಕೆಲವು ಪ್ರದೇಶಗಳಲ್ಲಿ ಪಿಯುಸಿ (PUC) ಕಾಲೇಜುಗಳಿಗೆ ರಜೆ (School Holiday) ಘೋಷಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ರಜೆ

ಭಾರತೀಯ ಹವಾಮಾನ ಇಲಾಖೆ (IMD) ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ (Deputy Commissioner) ದರ್ಶನ್ ಎಚ್.ವಿ. (Darshan H.V.) ಅವರು ಆದೇಶ ಹೊರಡಿಸಿದ್ದಾರೆ. ಮಂಗಳೂರು (Mangaluru) ಉಪವಿಭಾಗದ ಮಂಗಳೂರು, ಉಳ್ಳಾಲ (Ullal), ಮೂಡಬಿದಿರೆ (Moodbidri), ಬಂಟ್ವಾಳ (Bantwal) ಹಾಗೂ ಮುಲ್ಕಿ (Mulki) ತಾಲೂಕುಗಳಲ್ಲಿ ಅಂಗನವಾಡಿಯಿಂದ ಹೈಸ್ಕೂಲ್ (High School) ವರೆಗೆ ರಜೆ ಘೋಷಿಸಲಾಗಿದೆ.

ಇನ್ನೊಂದೆಡೆ ಪುತ್ತೂರು (Puttur) ಉಪವಿಭಾಗದ ಪುತ್ತೂರು, ಬೆಳ್ತಂಗಡಿ (Belthangady), ಕಡಬ (Kadaba) ಹಾಗೂ ಸುಳ್ಯ (Sulya) ತಾಲೂಕುಗಳಲ್ಲಿ ಅಂಗನವಾಡಿಯಿಂದ ಪದವಿ ಪೂರ್ವ ಕಾಲೇಜು (PUC) ವರೆಗೆ ರಜೆ ಅನ್ವಯವಾಗಲಿದೆ.

ಚಿಕ್ಕಮಗಳೂರಿನ ಕೊಪ್ಪ, ಶೃಂಗೇರಿಯಲ್ಲೂ ರಜೆ

ಕಾಫಿನಾಡು (Coffee Land) ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪ (Koppa) ಹಾಗೂ ಶೃಂಗೇರಿ (Sringeri) ತಾಲೂಕುಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಪ್ರಾಥಮಿಕ (Primary School) ಮತ್ತು ಪ್ರೌಢಶಾಲೆಗಳಿಗೆ (High School) ರಜೆ ಘೋಷಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ (Deputy Commissioner) ಭನ್ವರ್ ಸಿಂಗ್ ಮೀನಾ (Bhanwar Singh Meena) ಆದೇಶ ಹೊರಡಿಸಿದ್ದಾರೆ.

ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿವು

ನಿರಂತರ ಮಳೆಯ ಪರಿಣಾಮ ತುಂಗಾ ನದಿ (Tunga River) ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು (Public) ಹಾಗೂ ಪ್ರವಾಸಿಗರು (Tourists) ನದಿ ತೀರಗಳಿಗೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪೋಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜಿಲ್ಲಾಡಳಿತ ಮತ್ತು ಹವಾಮಾನ ಇಲಾಖೆಯ (Weather Department) ಅಧಿಕೃತ ಸೂಚನೆಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸಾಗರ ತಾಲೂಕಿನ ಶಾಲೆ-ಕಾಲೇಜುಗಳಿಗೆ ರಜೆ

ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ (Sagar) ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ, ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ತಾಲೂಕು ಆಡಳಿತವು ರಜೆ ಘೋಷಿಸಿದೆ.

ಸಾಗರ ತಹಶೀಲ್ದಾರ್ (Tahsildar) ಡಾ. ಪ್ರತಿಭಾ (Dr. Prathibha) ಅವರು ಹೊರಡಿಸಿರುವ ಆದೇಶದಂತೆ ಎಲ್ಲಾ ಅಂಗನವಾಡಿ ಕೇಂದ್ರಗಳು (Anganwadi Centres), ಪ್ರಾಥಮಿಕ ಶಾಲೆಗಳು (Primary Schools), ಪ್ರೌಢಶಾಲೆಗಳು (High Schools), ಪದವಿ ಪೂರ್ವ ಕಾಲೇಜುಗಳು (PU Colleges), ಡಿಪ್ಲೊಮಾ ಕಾಲೇಜುಗಳು (Diploma Colleges) ಹಾಗೂ ಐಟಿಐ (ITI) ಕಾಲೇಜುಗಳಿಗೆ ಆಗಸ್ಟ್ 3ರಂದು ರಜೆ ಅನ್ವಯವಾಗಲಿದೆ.

ಉತ್ತರ ಕನ್ನಡ ಜಿಲ್ಲೆಯ ಎರಡು ತಾಲೂಕುಗಳಿಗೂ ರಜೆ

ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲೂ ಸುರಿಯುತ್ತಿರುವ ಭಾರೀ ಮಳೆ (Heavy Rain) ಹಿನ್ನೆಲೆ ಜಿಲ್ಲಾಡಳಿತ (District Administration) ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಜಿಲ್ಲಾಧಿಕಾರಿ (Deputy Commissioner) ಲಕ್ಷ್ಮೀ ಪ್ರಿಯಾ (Lakshmi Priya) ಅವರು ಹೊರಡಿಸಿರುವ ಆದೇಶದಂತೆ ದಾಂಡೇಲಿ (Dandeli) ಹಾಗೂ ಜೋಯಿಡಾ (Joida) ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು (Anganwadi Centres), ಪ್ರಾಥಮಿಕ ಶಾಲೆಗಳು (Primary Schools) ಮತ್ತು ಪ್ರೌಢಶಾಲೆಗಳಿಗೆ (High Schools) ಆಗಸ್ಟ್ 3ರಂದು ರಜೆ ಘೋಷಿಸಲಾಗಿದೆ.