- Home
- Karnataka Districts
- ಕೇವಲ 100 ರೂ.ನಿಂದ ₹100 ಕೋಟಿ ತನಕ ಸಂಭಾವನೆ: 20 ವರ್ಷದಲ್ಲಿ ₹3,100 ಕೋಟಿ ಆಸ್ತಿಯ ಒಡೆಯನಾದ ನಟ!
ಕೇವಲ 100 ರೂ.ನಿಂದ ₹100 ಕೋಟಿ ತನಕ ಸಂಭಾವನೆ: 20 ವರ್ಷದಲ್ಲಿ ₹3,100 ಕೋಟಿ ಆಸ್ತಿಯ ಒಡೆಯನಾದ ನಟ!
ಕೇವಲ 100 ರೂ.ನಿಂದ ಸಿನಿಮಾ ಸಂಭಾವನೆಯಿಂದ ಈ ನಟ ಇದೀಗ 100 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಇದೀಗ ನಟನ ನಿವ್ವಳ ಆಸ್ತಿ ₹3,100 ಕೋಟಿ ತಲುಪಿದೆ. ಕೇವಲ 20 ವರ್ಷಗಳಲ್ಲಿ ಅವರ ಆಸ್ತಿ 310 ಪಟ್ಟು ಹೆಚ್ಚಾಗಿದ್ದು, ಇದು ಅವರ ಯಶಸ್ವಿ ಬಿಸಿನೆಸ್ ತಂತ್ರವನ್ನು ತೋರಿಸುತ್ತದೆ.

ಬಾಲಿವುಡ್‌ನ (Bollywood) 'ಗ್ರೀಕ್ ಗಾಡ್' (Greek God) ಎಂದೇ ಖ್ಯಾತರಾಗಿರುವ ಹೃತಿಕ್ ರೋಷನ್ (Hrithik Roshan) ಅವರು ಅಭಿನಯ (Acting) ಮಾತ್ರವಲ್ಲ, ಬಿಸಿನೆಸ್ (Business) ಮತ್ತು ಹೂಡಿಕೆ (Investment) ಕ್ಷೇತ್ರದಲ್ಲೂ ಯಶಸ್ಸಿನ ಹೊಸ ಎತ್ತರ ತಲುಪಿದ್ದಾರೆ. ವಿವಿಧ ವರದಿಗಳ ಪ್ರಕಾರ, 2026ರಲ್ಲಿ ಹೃತಿಕ್ ರೋಷನ್ ಅವರ ಅಂದಾಜು ನೆಟ್‌ವರ್ಥ್ (Net Worth) ₹3,100 ಕೋಟಿ ತಲುಪಿದೆ. ವಿಶೇಷವೆಂದರೆ, 2006ರಲ್ಲಿ ಅವರ ಆಸ್ತಿ ಕೇವಲ ₹10 ಕೋಟಿ ಇತ್ತು. ಅಂದರೆ 20 ವರ್ಷಗಳಲ್ಲಿ 310 ಪಟ್ಟು ಆಸ್ತಿ ಹೆಚ್ಚಳ ಕಂಡಿದ್ದಾರೆ.
ವರದಿಗಳ ಪ್ರಕಾರ, ಹೃತಿಕ್ ರೋಷನ್ ಅವರು ಪ್ರಸ್ತುತ ಅಭಿನಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಎರಡನೇ ಅತಿ ಶ್ರೀಮಂತ ಸ್ಟಾರ್ ಕಿಡ್ (Star Kid). ಮೊದಲ ಸ್ಥಾನದಲ್ಲಿ ಸಲ್ಮಾನ್ ಖಾನ್ (Salman Khan) ಇದ್ದು, ಅವರ ಅಂದಾಜು ಆಸ್ತಿ ಸುಮಾರು ₹3,225 ಕೋಟಿ ಎಂದು ಹೇಳಲಾಗುತ್ತಿದೆ.
ಕೇವಲ 100 ರೂ.ನಿಂದ ₹100 ಕೋಟಿ ಸಂಭಾವನೆ ತನಕ
1974ರ ಜನವರಿ 10ರಂದು ಮುಂಬೈ (Mumbai)ಯಲ್ಲಿ ಜನಿಸಿದ ಹೃತಿಕ್ ರೋಷನ್, ನಿರ್ದೇಶಕ ರಾಕೇಶ್ ರೋಷನ್ (Rakesh Roshan) ಅವರ ಪುತ್ರ. 2000ರಲ್ಲಿ ಬಿಡುಗಡೆಯಾದ 'ಕಹೋ ನಾ... ಪ್ಯಾರ್ ಹೈ' (Kaho Naa... Pyaar Hai) ಚಿತ್ರದ ಮೂಲಕ ನಾಯಕನಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಈ ಸಿನಿಮಾ ಅವರನ್ನು ರಾತ್ರೋರಾತ್ರಿ ಸೂಪರ್‌ಸ್ಟಾರ್ (Superstar) ಆಗಿ ರೂಪಿಸಿತು. ಬಾಲ ಕಲಾವಿದನಾಗಿ (Child Artist) ನಟಿಸಿದ್ದ ವೇಳೆ ಅವರಿಗೆ ಕೇವಲ ₹100 ಸಂಭಾವನೆ ಸಿಗುತ್ತಿತ್ತು. ಆದರೆ ಇಂದು ಅವರು ಒಂದು ಸಿನಿಮಾಗೆ ₹85 ಕೋಟಿ ರಿಂದ ₹100 ಕೋಟಿ ವರೆಗೆ ಸಂಭಾವನೆ (Fees) ಪಡೆಯುತ್ತಾರೆ. ಕೆಲವು ಸಿನಿಮಾಗಳಲ್ಲಿ ನಿಗದಿತ ಸಂಭಾವನೆಯ ಜೊತೆಗೆ ಪ್ರಾಫಿಟ್ ಶೇರಿಂಗ್ (Profit Sharing) ಕೂಡ ಪಡೆಯುತ್ತಾರೆ.
ಹೃತಿಕ್ ರೋಷನ್ ಇತ್ತೀಚೆಗೆ ಬಿಡುಗಡೆಯಾದ ಫೈಟರ್ (Fighter-2024) ಸಿನಿಮಾಕ್ಕೆ ಸುಮಾರು ₹50 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ವಾರ್ 2 (War 2- 2025) ಸಿನಿಮಾಕ್ಕೆ ₹100 ಕೋಟಿಗೂ ಅಧಿಕ ಸಂಭಾವನೆ ಜೊತೆಗೆ ಪ್ರಾಫಿಟ್ ಶೇರಿಂಗ್ ಡೀಲ್ (Profit Sharing Deal) ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
HRX ಮೂಲಕ ಸಾವಿರಾರು ಕೋಟಿ ಮೌಲ್ಯದ ಬಿಸಿನೆಸ್
2013ರಲ್ಲಿ ಹೃತಿಕ್ ರೋಷನ್ ತಮ್ಮ ಫಿಟ್ನೆಸ್ (Fitness) ಮತ್ತು ಸ್ಪೋರ್ಟ್ಸ್‌ವೇರ್ (Sportswear) ಬ್ರಾಂಡ್ HRX ಅನ್ನು ಆರಂಭಿಸಿದರು. ಈ ಬ್ರಾಂಡ್ Myntra ಜೊತೆಗೆ ಕಾರ್ಯನಿರ್ವಹಿಸುತ್ತಿದೆ.
ವರದಿಗಳ ಪ್ರಕಾರ,
HRX ಬ್ರಾಂಡ್ ಮೌಲ್ಯ ಸುಮಾರು ₹7,300 ಕೋಟಿ
ವಾರ್ಷಿಕ ವ್ಯವಹಾರ ₹1,000 ಕೋಟಿಗೂ ಹೆಚ್ಚು
HRX ಅವರ ಆಸ್ತಿ ಹೆಚ್ಚಳಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಬ್ರಾಂಡ್ ಎಂಡೋರ್ಸ್‌ಮೆಂಟ್‌ನಿಂದ ಕೋಟಿ ಕೋಟಿ ಆದಾಯ
ಹೃತಿಕ್ ರೋಷನ್ ಅನೇಕ ರಾಷ್ಟ್ರೀಯ (National) ಮತ್ತು ಅಂತರರಾಷ್ಟ್ರೀಯ (International) ಬ್ರಾಂಡ್‌ಗಳ ರಾಯಭಾರಿಯಾಗಿದ್ದಾರೆ.
- ಒಂದು ಜಾಹೀರಾತಿಗೆ ₹10 ರಿಂದ ₹12 ಕೋಟಿ
- ಒಂದು ಸ್ಪಾನ್ಸರ್ಡ್ ಸೋಶಿಯಲ್ ಮೀಡಿಯಾ (Social Media) ಪೋಸ್ಟ್‌ಗೆ ₹1.5 ರಿಂದ ₹2 ಕೋಟಿ
- ವಾರ್ಷಿಕ ಬ್ರಾಂಡ್ ಎಂಡೋರ್ಸ್‌ಮೆಂಟ್ ಆದಾಯ ₹70 ರಿಂದ ₹80 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
- ₹100 ಕೋಟಿಗೂ ಹೆಚ್ಚು ಬೆಲೆಯ ಮನೆ, ₹33 ಕೋಟಿ ವೀಕೆಂಡ್ ಹೋಮ್
ಹೃತಿಕ್ ರೋಷನ್ ಬಳಿ ಮುಂಬೈನ (Mumbai) ಜುಹು (Juhu) ಸಮುದ್ರ ತೀರದಲ್ಲಿರುವ ₹100 ಕೋಟಿಗೂ ಅಧಿಕ ಮೌಲ್ಯದ ಸ್ಕೈ ವಿಲ್ಲಾ (Sky Villa) ಇದೆ. ಜೊತೆಗೆ 'ಲೋಣಾವಳಾ (Lonavala)'ದಲ್ಲಿ ಸುಮಾರು ₹33 ಕೋಟಿ ಮೌಲ್ಯದ ವೀಕೆಂಡ್ ಹೋಮ್ (Weekend Home) ಹೊಂದಿದ್ದಾರೆ. ಅಲ್ಲದೆ ಹಲವು ಐಷಾರಾಮಿ ಕಾರುಗಳು (Luxury Cars) ಅವರ ಕಾರು ಸಂಗ್ರಹದಲ್ಲಿವೆ.
ಯಾವ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ?
ಸಿನಿಮಾ ಮತ್ತು HRX ಮಾತ್ರವಲ್ಲದೆ ಹೃತಿಕ್ ರೋಷನ್ ಹಲವು ಕಂಪನಿಗಳಲ್ಲೂ ಹೂಡಿಕೆ ಮಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ, Cult.fit ಹಾಗೂ Curefoods ಸೆರಿದಂತೆ ವಿವಿಧ ರಿಯಲ್ ಎಸ್ಟೇಟ್ (Real Estate) ಯೋಜನೆಗಳು ಇವರ ಬತ್ತಳಿಕೆಯಲ್ಲಿವೆ. ಇದಲ್ಲದೆ ತಂದೆ ರಾಕೇಶ್ ರೋಷನ್ ಅವರ Filmkraft Productions ನಿರ್ಮಾಣ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದು, ವಿಶೇಷವಾಗಿ 'Krrish' ಫ್ರಾಂಚೈಸಿಯ (Franchise) ಲಾಭದಲ್ಲಿಯೂ ಪಾಲುದಾರಿಕೆ ಹೊಂದಿದ್ದಾರೆ ಎನ್ನಲಾಗಿದೆ.
ಹೀಗೆ ಸಿನಿಮಾ ಸಂಭಾವನೆ (Movie Fees), HRX, ಬ್ರಾಂಡ್ ಎಂಡೋರ್ಸ್‌ಮೆಂಟ್ (Brand Endorsement), ಸೋಶಿಯಲ್ ಮೀಡಿಯಾ (Social Media), ರಿಯಲ್ ಎಸ್ಟೇಟ್ (Real Estate) ಹಾಗೂ ಹೂಡಿಕೆಗಳು (Investments) ಸೇರಿ ಹೃತಿಕ್ ರೋಷನ್ ಅವರ ಸಂಪತ್ತನ್ನು ಸಾವಿರಾರು ಕೋಟಿಗಳಿಗೆ ಏರಿಸಿವೆ.

