Asianet Suvarna News Asianet Suvarna News

ಸಿದ್ದರಾಮಯ್ಯ ಕಾಂಗ್ರೆಸ್‌ ಸೇರಿದ್ದೇಕೆ : ಸಿಡಿದ ಮುಖಂಡರು

  • ಜೆಡಿಎಸ್‌ ಪಕ್ಷದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಏತಕ್ಕಾಗಿ ಕಾಂಗ್ರೆಸ್‌ ಹೋದರು ಎಂಬುದು ಇಡೀ ರಾಜ್ಯದ ಜತೆಗೆ ಗೊತ್ತಿದೆ
  • ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಲ್ಪ ಮತಗಳಿಂದ ಗೆಲ್ಲಲು ಕಾಂಗ್ರೆಸ್‌ನಲ್ಲಿದ್ದ ದಲಿತ ನಾಯಕರು ಕಾರಣ 
BJP SC morcha protest against Siddaramaiah snr
Author
Bengaluru, First Published Nov 4, 2021, 1:25 PM IST
  • Facebook
  • Twitter
  • Whatsapp

ಚಿಕ್ಕಬಳ್ಳಾಪುರ (ನ.04):  ಜೆಡಿಎಸ್‌ (JDS) ಪಕ್ಷದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಏತಕ್ಕಾಗಿ ಕಾಂಗ್ರೆಸ್‌ ಹೋದರು ಎಂಬುದು ಇಡೀ ರಾಜ್ಯದ ಜತೆಗೆ ಗೊತ್ತಿದೆ. ಈ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಲ್ಪ ಮತಗಳಿಂದ ಗೆಲ್ಲಲು ಕಾಂಗ್ರೆಸ್‌ನಲ್ಲಿದ್ದ ದಲಿತ ನಾಯಕರು ಕಾರಣ ಎಂಬುದನ್ನು ಮರೆಯಬಾರದು ಎಂದು ಬಿಜೆಪಿ (BJP) ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಆರ್‌.ವೆಂಕಟೇಶ್‌ ಕಿಡಿಕಾರಿದರು.

ಮಾಜಿ ಸಿಎಂ ಸಿದ್ದರಾಮಯ್ಯ , ಇತ್ತೀಚೆಗೆ ಹೊಟ್ಟೆಪಾಡಿಗಾಗಿ ದಲಿತರು ಬಿಜೆಪಿಗೆ ಹೋಗುತ್ತಿದ್ದಾರೆಂದು ನೀಡಿರುವ ಹೇಳಿಕೆಯನ್ನು ಖಂಡಿಸಿ ನಗರದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಬಿಜೆಪಿ ಕಚೇರಿಯಿಂದ ಅಂಬೇಡ್ಕರ್‌ ವೃತ್ತದವರೆಗೆ ಪ್ರತಿಭಟನಾ ಹಮ್ಮಿಕೊಂಡಿದ್ದ ಮೆರವಣಿಯನ್ನು ಉದ್ದೇಶಿಸಿ ಮಾತನಾಡಿದರು.

ಸುಮಾರು 65 ವರ್ಷದಿಂದ ದಲಿತರನ್ನು ಮತಕ್ಕಾಗಿ ಬಳಸಿಕೊಂಡ ಕಾಂಗ್ರೆಸ್‌ನವರು (Congress), ಸಮುದಾಯವನ್ನು ಕಡೆಗಣಿಸುತ್ತಲೇ ಬಂದಿದ್ದಾರೆ. ಬಿಜೆಪಿಯಿಂದ (BJP) ಈ ಸಮುದಾಯಕ್ಕೆ ಸೌಲಭ್ಯ ದೊರಕುತ್ತಿರುವುದನ್ನು ಸಹಿಸದೆ, ದಲಿತರು ಹೊಟ್ಟೆ ಪಾಡಿಗಾಗಿ ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಅವಹೇಳನ ಮಾಡಿರುವುದು ಸರಿಯಲ್ಲ ಎಂದರು.

ಹೊಟ್ಟೆಪಾಡಿಗಾಗಿ ದಲಿತರು ಬಿಜೆಪಿಗೆ ಹೋಗಿಲ್ಲ. ಆದರೆ, ಸಿದ್ದರಾಮಯ್ಯ ಹೊಟ್ಟೆಪಾಡಿಗಾಗಿ ಉಂಡ ಮನೆಗೆ ದ್ರೋಹ ಬಗೆದಿದ್ದಾರೆ. ಮಾತೃ ಸಮಾನವಾದ ಪಕ್ಷಕ್ಕೆ ವಂಚನೆ ಮಾಡಿ ಎಲ್ಲಾ ಅಧಿಕಾರವನ್ನು ಪಡೆದಿದ್ದಾರೆ. ಅಧಿಕಾರದ ದುರಾಸೆಯಿಂದ ಕಾಂಗ್ರೆಸ್‌ಗೆ (congress) ಸೇರಿ ಅಲ್ಲಿನ ಎಲ್ಲಾ ದಲಿತ ನಾಯಕರಿಗೆ ನಯವಾದ ಮಾತುಗಳಿಂದ ವಂಚಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಪರಮೇಶ್ವರ್‌ (Parameshwar), ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌.ಮುನಿಯಪ್ಪ, ಎಚ್‌. ಆಂಜನೇಯ ಮತ್ತಿತರ ನಾಯಕರನ್ನು ರಾಜಕೀಯವಾಗಿ (Politically) ತುಳಿದು ಮುಖ್ಯ ಮಂತ್ರಿಯಾಗಿ ಅಧಿಕಾರವನ್ನು ಅನುಭವಿಸಿದ ಸಿದ್ದರಾಮಯ್ಯ, ಬಿಜೆಪಿಯ (BJP) ತತ್ವ ಸಿದ್ಧಾಂತ ಒಪ್ಪಿ ಕಾರ್ಯಕರ್ತರಾಗಿ ಗುರ್ತಿಸಿಕೊಂಡಿರುವ ದಲಿತರನ್ನು ಹೊಟ್ಟೆಪಾಡಿಗಾಗಿ ಹೋಗಿರುವವರು ಎಂದು ನಿಂದಿಸಿರುವುದು ಖಂಡನೀಯ ಎಂದರು.

ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಕೂಡಲೆ ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ (Resignation) ನೀಡಬೇಕು. ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೇ ದಲಿತ ನಾಯಕರ ಪರಿಶ್ರಮದಿಂದ ಗೆದ್ದು, ಅವರನ್ನು ರಾಜಕೀಯವಾಗಿ ತುಳಿದರು. ಕೀಳು ಮಟ್ಟದ ರಾಜಕೀಯಕ್ಕೆ ಇದು ಸಾಕ್ಷಿ ಎಂದು ದೂರಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಚಿಂತಾಮಣಿ ದೇವರಾಜ…, ಮುಖಂಡರಾದ ರಾಮಣ್ಣ, ಅಶೋಕ್‌, ಲಕ್ಷಿಪತಿ, ಪ್ರತಾಪ್, ರಾಮಸಾರ್ಗ, ನಿರ್ಮಲಮ್ಮ ಇದ್ದರು.

ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಆಕ್ರೋಶ

ಪ್ರತಿಭಟನೆ ವೇಳೆ ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಎಚ್ಚರಿಕೆ ನೀಡಿ ಆಗ್ರಹಿಸಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ, ಘೋಷಣೆ ಕೂಗುವ ಮೂಲಕ ಆಕೊ›ೕಶ ವ್ಯಕ್ತಪಡಿಸಲಾಯಿತು.

 ದಲಿತರ ಅವಮಾನಿಸುವ ಹೇಳಿಕೆ ನೀಡಿಲ್ಲ 

ದಲಿತರಿಗೆ ಅವಮಾನವಾಗುವಂತಹ ಹೇಳಿಕೆ ನಾನು ನೀಡಿಲ್ಲ. ರಾಜಕೀಯ ದುರುದ್ದೇಶ ಹಾಗೂ ಬಿಟ್‌ ಕಾಯಿನ್‌ ಹಗರಣದ ಮೇಲಿನ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನನ್ನ ಜೀವನದಲ್ಲೇ ನಾನು ದಲಿತರಿಗೆ ಅವಮಾನ ಮಾಡಿಲ್ಲ.

ನನ್ನ ಹೇಳಿಕೆಗೆ ಬಣ್ಣ ಕಟ್ಟುವ ಕೆಲಸವನ್ನು ಕೆಲ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಇದು ರಾಜಕೀಯ ಪ್ರೇರಿತ ಎಂದು ತಿಳಿಸಿದ್ದಾರೆ. ಗೋವಿಂದ ಕಾರಜೋಳ, ಜಿಗಜಿಣಗಿ, ನಾರಾಯಣಸ್ವಾಮಿ ಸೇರಿದಂತೆ ಹಲವಾರು ದಲಿತ ನಾಯಕರು ಬಿಜೆಪಿಗೆ ಹೋದರು. ಇವರೆಲ್ಲರು ಅಂಬೇಡ್ಕರ್‌ರವರಿಗೆ ಅಗೌರವ ಸೂಚಿಸುವ, ಸಂವಿಧಾನಕ್ಕೆ ಬೆಲೆ ಕೊಡದ ಪಕ್ಷಕ್ಕೆ ಸ್ವಾರ್ಥಕ್ಕಾಗಿ ಹೋಗಿದ್ದಾರೆ ಎಂದು ಸಿಂದಗಿಯ ಮಾದಿಗ ದಂಡೋರ ಸಮುದಾಯದ ಸಮಾವೇಶದಲ್ಲಿ ಹೇಳಿದ್ದೇನೆ ಎಂದು ಸಿದ್ದು ಸ್ಪಷ್ಟನೆ ನೀಡಿದರು.

Follow Us:
Download App:
  • android
  • ios