Asianet Suvarna News Asianet Suvarna News

Bengaluru: ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ SC Morcha ಪ್ರತಿಭಟನೆ!

*ದಲಿತರು ಬಿಜೆಪಿಗೆ ಹೊಟ್ಟೆ ಪಾಡಿಗಾಗಿ ಹೋಗಿದ್ದಾರೆ ಎಂದಿದ್ದ ಸಿದ್ದರಾಮಯ್ಯ
*ಮಾಜಿ ಸಿಎಂ ಹೇಳಿಕೆ ವಿರೋಧಿಸಿ ಬಿಜೆಪಿ ಎಸ್.ಸಿ. ಮೋರ್ಚಾ ಪ್ರತಿಭಟನೆ
*ಸಿದ್ದರಾಮಯ್ಯ ಹೊಟ್ಟೆ ಪಾಡಿಗಾಗಿ ಕಾಂಗ್ರೆಸ್‌ಗೆ ಬಂದಿದ್ದಾರೆ : ಪಿ ರಾಜೀವ್‌

BJP SC Morcha holds protest in Bengaluru over Siddaramaiah  comments on Dalits
Author
Bengaluru, First Published Nov 3, 2021, 2:54 PM IST
  • Facebook
  • Twitter
  • Whatsapp


ಬೆಂಗಳೂರು(ನ. 3): ಸಿಂದಗಿ-ಹಾನಗಲ್ ಉಪಚುನಾವಣೆ ಫಲಿತಾಂಶದ ((By Election Result) ಬೆನ್ನಲ್ಲೆ, ದಲಿತರು ಬಿಜೆಪಿಗೆ ಹೊಟ್ಟೆ ಪಾಡಿಗಾಗಿ ಹೋಗಿದ್ದಾರೆ ಎಂದು  ಸಿದ್ದರಾಮಯ್ಯ ಹೇಳಿದ್ದರು. ಈ ಹೇಳಿಕೆ ವಿರೋಧಿಸಿ. ಬಿಜೆಪಿ ಎಸ್.ಸಿ. ಮೋರ್ಚಾ (BJP SC Morcha) ರಾಜ್ಯ ಘಟಕ ಬುಧವಾರ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದೆ. ಸಿದ್ದರಾಮಯ್ಯ (Siddaramaiah) ಪ್ರತಿಕೃತಿ ಧಹಿಸಿದ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಛಲವಾದಿ ನಾರಾಯಣಸ್ವಾಮಿ, ಶಾಸಕ ಪಿ ರಾಜೀವ್, ಮಾಜಿ ಎಂಎಲ್ ಸಿ ಅಶ್ವಥ್ ನಾರಾಯಣ್ ಕೂಡ ಭಾಗಿಯಾಗಿದ್ದರು.

'ಹಾನಗಲ್‌ ಉಪ ಚುನಾವಣೆ ಜಯ ಕಾಂಗ್ರೆಸ್‌ದಲ್ಲ, ಮಾನೆಯದು'

ಪ್ರತಿಭಟನೆಯಲ್ಲಿ ಮಾತನಾಡಿದ  ಕುಡಚಿ ಬಿಜೆಪಿ ಶಾಸಕ ಪಿ ರಾಜೀವ್ (P Rajiv) "ಸಿದ್ದರಾಮಯ್ಯ ಹೇಳಿಕೆ ಅಂಬೇಡ್ಕರ್ (Dr. B R Ambedkar) ಕೊಟ್ಟ ಹಕ್ಕನ್ನು ಕಿತ್ತುಕೊಳ್ಳುವ ಹೇಳಿಕೆ. ದಲಿತರು  ಸ್ವಾಭಿಮಾನಕ್ಕಾಗಿ ರಾಜಕೀಯ ಆಂದೋಲನ ನಡೆಸುತ್ತಿದ್ದಾರೆ‌, ಬದಲಾಗಿ ಹೊಟ್ಟೆಪಾಡಿಗಾಗಿ ಅಲ್ಲ. ಆದರೆ ಸಿದ್ದರಾಮಯ್ಯ ಹೊಟ್ಟೆ ಪಾಡಿಗಾಗಿ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಬಂದಿದ್ದಾರೆ. ಸಿದ್ದರಾಮಯ್ಯ ಹೇಳಿಕೆಯಿಂದ ದಲಿತ ಸಮುದಾಯಕ್ಕೆ ನೋವಾಗಿದೆ" ಎಂದು  ಹೇಳಿದ್ದಾರೆ.  ಜತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಬೇಕು" ಎಂದು ಶಾಸಕ‌ ಪಿ ರಾಜೀವ್  ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಕಾಂಗ್ರೇಸ್‌ಗೆ ರೊಟ್ಟಿ ತಟ್ಟಲು ಬಂದಿದ್ದಾ?

ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ "ಹಿಂದೆ ಕಾಂಗ್ರೆಸ್‌ (Congress) ಅಂದರೆ ದಲಿತರು, ದಲಿತರೆಂದರೆ ಕಾಂಗ್ರೆಸ್‌ ಎಂಬ ರೀತಿ ಇತ್ತು, ಆದರೆ ಇತ್ತೀಚೆಗೆ ದಲಿತರು (Dalits) ಕಾಂಗ್ರೆಸ್‌ ತೊರೆಯುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ನವರಿಗೆ ತವಕ ಶುರುವಾಗಿದೆ. ದೇಶದಲ್ಲಿನ ಸ್ವಾಭಿಮಾನಿ ಸಮುದಾಯವೆಂದರೆ ಅದು ದಲಿತ ಸಮುದಾಯ. ಇಂತಹ ದಲಿತ ಸಮುದಾಯದ ವಿರುದ್ಧ ಮಾತನಾಡುವ ಮೂಲಕ ಸಿದ್ದರಾಮಯ್ಯನವರು ಜೇನುಗೂಡಿಗೆ ಕೈ ಹಾಕಿದ್ದಾರೆ" ಎಂದು ಹೇಳಿದ್ದಾರೆ. ಜತೆಗೆ ಸಿದ್ದರಾಮಯ್ಯ ಕೂಡ ವಲಸೆ ಗಿರಾಕಿ, ಅವರು ಕಾಂಗ್ರೇಸ್‌ಗೆ ರೊಟ್ಟಿ ತಟ್ಟಲು ಬಂದಿದ್ದಾ? ಎಂದು ಕೇಳುವ ಮೂಲಕ ವಿರೋಧ ಪಕ್ಷದ ನಾಯಕರನ್ನು ನಾರಾಯಣ ಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ

ಸಿದ್ದರಾಮಯ್ಯ ದಲಿತರ ಉದ್ಧಾರ ಮಾಡಿದ್ದಾರಾ?

"ಅಹಿಂದಾ ಸಮುದಾಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ, ಅವರನ್ನು ಉದ್ಧಾರ ಮಾಡಿದ್ದಾರಾ? ಸಿದ್ದರಾಮ್ಯ ಪರಮೇಶ್ವರ್, ಖರ್ಗೆ, ಮಹದೇವಪ್ಪ, ಶ್ರೀನಿವಾಸ ಪ್ರಸಾದ್ ಅವರನ್ನು ಮೂಲೆ ಗುಂಪು ಮಾಡಿ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೇಸ್‌ನಲ್ಲಿದ್ದು 30-40 ವರ್ಷದಿಂದ ದಲಿತರನ್ನು ಅವರು ಮೂಲೆ ಗುಂಪು ಮಾಡಿದ್ದಾರೆ" ಎಂದು ಛಲವಾದಿ ನಾರಾಯಣ ಸ್ವಾಮಿ ಕೀಡಿಕಾರಿದ್ದಾರೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಸ್ಪಷ್ಟ ಸುಳಿವು : ಕೈ ನಾಯಕರಲ್ಲಿ ಹೆಚ್ಚಿದ ವಿಶ್ವಾಸ

"ಮೈತ್ರಿ ಸರ್ಕಾರದಲ್ಲಿ ಪರಮೇಶ್ವರ್  ಡಿಸಿಎಂ ಆಗಿದ್ದು ನಿನಗೆ ಸಹಿಸಲು ಆಗಿಲ್ಲ, ಅವರ ವಿರುದ್ಧ ಏನೆಲ್ಲ ಮಸಲತ್ತು ಮಾಡಿದೆ.
ಕೋಲಾರದ ಮುನಿಯಪ್ಪ ಅವರನ್ನ ಸೋಲಿಸಲು ಏನೆಲ್ಲಾ ತಂತ್ರಗಾರಿಕೆ ಮಾಡಿದೆ, ರಮೇಶ್ ಕುಮಾರ್ ಇಟ್ಟುಕೊಂಡು ಮುನಿಯಪ್ಪನ ಸೋಲಿಸಿದ್ಯಲ್ಲ ಸಿದ್ದರಾಮಯ್ಯ" ಎಂದು ಏಕವಚನದಲ್ಲೇ  ಛಲವಾದಿ ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಅವರ ಬೇಜವಾಬ್ದಾರಿತನದಿಂದ ಚಾಮುಂಡೇಶ್ವರಿಯಲ್ಲಿ ಸೋಲು!

ಮಾಜಿ ಎಂಎಲ್ ಸಿ ಅಶ್ವಥ್ ನಾರಾಯಣ ಮಾತನಾಡಿ "ಸಿದ್ದರಾಮಯ್ಯನವರೆ ನಿಮ್ಮ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದ ಹೇಳಿಕೆ. ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಯಾರು ಯಾವ ಪಕ್ಷಕ್ಕೆ ಬೇಕಾದರೂ ಹೊಗಬಹುದು" ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಕೂಡ ಜೆಡಿಎಸ್ ನಿಂದ ಕಾಂಗ್ರೆಸ್‌ ಗೆ ಹೋಗಿದ್ದಾರೆ. ಅವರ ಬೇಜವಾಬ್ದಾರಿತನದಿಂದ ಚಾಮುಂಡೇಶ್ವರಿಯಲ್ಲಿ ಜನ ಅವರನ್ನು ಸೋಲಿಸಿದ್ದರು. ಪರಮೇಶ್ವರ್ ಅವರು ಸಿಎಂ ಆಗ್ತಾರೆ ಎಂದು ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯನವರು. ಮಲ್ಲಿಕಾರ್ಜುನ ಖರ್ಗೆ ಏನಾದ್ರು, ಮಹದೇವಪ್ಪ ನವರನ್ನ ಏನು ಮಾಡಿದ್ರಿ, ಪುಲಿಕೇಶಿ ನಗರದ ಅಖಂಡ ಶ್ರೀನಿವಾಸ ಮೂರ್ತಿಗೆ ಏನು ಮಾಡಿದ್ರಿ ನಿಮ್ಮ ಜೊತೆ ಇದ್ದ ದಲಿತರನ್ನ, ಅಲ್ಪಸಂಖ್ಯಾತರನ್ನ ತುಳಿದು ನೀವು ಮೇಲೆ ಬಂದ್ರಿ ಎಂದು ಅಶ್ವಥ್‌ ನಾರಾಯಣ್‌ ಟಾಂಗ್‌ ನೀಡಿದ್ದಾರೆ.

ಸಿಂದಗಿ, ಹಾನಗಲ್ ಬೈ ಎಲೆಕ್ಷನ್ ರಿಸಲ್ಟ್: ಬೊಮ್ಮಾಯಿ ಹನಿಮೂನ್ ಅವಧಿ ಕೊನೆಗೊಂಡಿದೆ ಎಂದ ಸಿದ್ದು

ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು. ಸಿಂದಗಿಯಲ್ಲಿ ಬಿಜೆಪಿ ಅಭೂತ ಪೂರ್ವ ವಿಜಯದಾಖಲಿಸಿದ್ರೆ, ಹಾನಗಲ್‌ನಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಇನ್ನು ಜೆಡಿಎಸ್‌ಗೆ ಎರಡೂ ಕಡೆ ಹೀನಾಯ ಸೋಲಾಗಿದೆ. ಇನ್ನು ಫಲಿತಾಂಶದ ಬಗ್ಗೆ ಬಿಜೆಪಿ (BJP), ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (JDS) ನಾಯಕರು ವಿವಿಧ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. 

Follow Us:
Download App:
  • android
  • ios