ಸಾಮೂಹಿಕ ಅತ್ಯಾ*ಚಾರ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಅಮೃತಹಳ್ಳಿ ಪೊಲೀಸರು, ಆರೋಪಿ ನಿಖಿಲ್ ಗ್ಯಾಂಗ್ ಈ ಹಿಂದೆ ನಗರದ ಹೊರವಲಯದ ವಿಲ್ಲಾಗಳಲ್ಲಿ ಆಯೋಜಿಸಿದ್ದ ಹಲವು ಪಾರ್ಟಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. 

ಬೆಂಗಳೂರು: ಸಾಮೂಹಿಕ ಅತ್ಯಾ*ಚಾರ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಅಮೃತಹಳ್ಳಿ ಠಾಣೆ ಪೊಲೀಸರು, ಈಗ 'ವಿಲ್ಲಾ ಪಾರ್ಟಿ’ ರೀತಿಯಲ್ಲೇ ಬೇರೆ ಸ್ಥಳಗಳಲ್ಲಿ ಆರೋಪಿಗಳು ನಡೆಸಿದ್ದಾರೆ ಎನ್ನಲಾದ ಪಾರ್ಟಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಜಕ್ಕೂರು ಸಮೀಪ ವಿಲ್ಲಾ ಬಾಡಿಗೆ ನಿಖಿಲ್ ಹಾಗೂ ಆತನ ಸ್ನೇಹಿತರು ಪಾರ್ಟಿ ಮಾಡಿದ್ದರು. ಆದರೆ ಈ ಹಿಂದೆ ಕೂಡ ನಿಖಿಲ್ ಪಾರ್ಟಿಗಳನ್ನು ಆಯೋಜಿಸಿರುವ ಬಗ್ಗೆ ತನಿಖೆಯಲ್ಲಿ ಪತ್ತೆಯಾಗಿದೆ. ಹೀಗಾಗಿ ಹಳೇ ಅಡ್ಡೆಗಳ ಬಗ್ಗೆ ಪತ್ತೆ ಮಾಡಲಾಗುತ್ತಿದೆ. ಇದುವರೆಗೆ ಈ ಹಿಂದೆ ಅಕ್ರಮ ಚಟುವಟಿಕೆ ಬಗ್ಗೆ ದೂರುಗಳು ಬಂದಿಲ್ಲ ಎಂದು ಮೂಲಗಳು ಹೇಳಿವೆ.

ನಿಖಿಲ್ ಪಾರ್ಟಿ ಆಯೋಜಕ

ಈ ಪಾರ್ಟಿಗಳು ಸಂಪೂರ್ಣವಾಗಿ ಪರಸ್ಪರ ಸಮ್ಮತಿ ಮೇರೆಗೆ ನಡೆದಿವೆ. ಶ್ರೀಮಂತ ಮಕ್ಕಳು ಮೋಜು ಮಸ್ತಿ ಮಾಡಿದ್ದಾರೆ. ಪಾರ್ಟಿ ಸಲುವಾಗಿ ಕೆಲವರ ಸ್ನೇಹವಾಗಿದೆ. ಪಾರ್ಟಿ ಮುಗಿದ ಬಳಿಕ ಕೆಲವರಲ್ಲಿ ಆ ಗೆಳೆತನ ಮುಂದುವರಿದಿಲ್ಲ. ಪಾರ್ಟಿ ಆಯೋಜಿಸಿ ನಿಖಿಲ್ ಆಹ್ವಾನಿಸುತ್ತಿದ್ದ ಆ ವಿಲ್ಲಾ ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ಉಳಿದವರು ಹೋಗುತ್ತಿದ್ದಾರೆ. ಎಕ್ಸ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಹಾಗೂ ವಾಟ್ಸಪ್ ಮೂಲಕ ಅಪರಿಚಿತರು ಪರಿಚಿತರಾಗಿದ್ದಾರೆ ಎಂದು ತಿಳಿದು ಬಂದಿದೆ.

ಹೊರವಲಯಗಳಲ್ಲೇ ಪಾರ್ಟಿ?

ನಗರ ಹೊರವಲಯಗಳಲ್ಲಿ ನಿಖಿಲ್ ಗ್ಯಾಂಗ್ ಹೆಚ್ಚು ಪಾರ್ಟಿ ನಡೆಸಿರುವುದು ಗೊತ್ತಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ವಿಲ್ಲಾ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲ್ಯಾಟ್‌ ಆನ್‌ಲೈನ್‌ ಮೂಲಕ ಬಾಡಿಗೆ ಪಡೆಯುತ್ತಿದ್ದರು. ತಾವು ಪಾರ್ಟಿ ನಡೆಸಿದರೂ ಹೊರಗೆ ಗೊತ್ತಾಗದಂತೆ ಎಚ್ಚರಿಕೆ ವಹಿಸಿದ್ದರು. ಜನರ ಸಂಚಾರ ವಿರಳವಾಗಿದ್ದರೆ ಪಾರ್ಟಿಗೆ ಕಿರಿಕಿರಿ ಇರುವುದಿಲ್ಲ. 

ಇದನ್ನೂ ಓದಿ: ಬೆಂಗಳೂರು ವಿಲ್ಲಾದಲ್ಲಿ ವಿದ್ಯಾರ್ಥಿನಿ ರೇ*ಪ್‌ ಕೇಸ್: ರಾಜಕಾರಣಿ ಪುತ್ರ ಸೇರಿ ಐವರು ಅರೆಸ್ಟ್! ಸಭ್ಯರಂತೆ ವರ್ತಿಸಿ ಮೋಸ

ಪೊಲೀಸರು ತೊಂದರೆ ಕೊಡುವುದಿಲ್ಲ. ಇಡೀ ರಾತ್ರಿ ಪಾರ್ಟಿ ನಡೆಸಿ ಮೋಜು ಮಾಡಿದರು ಆಕ್ಷೇಪಣೆ ಬರುವುದಿಲ್ಲ. ಈ ಕಾರಣಗಳಿಗೆ ನಗರದ ಹೊರವಲಯದಲ್ಲೇ ನಿಖಿಲ್ ಗ್ಯಾಂಗ್‌ನ ನೆಚ್ಚಿನ ಪ್ರದೇಶಗಳಾಗಿದ್ದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಜಕ್ಕೂರು ವಿಲ್ಲಾ ಪಾರ್ಟಿಯಲ್ಲಿದ್ದ ಸಂತ್ರಸ್ತೆಯೂ ಸೇರಿದಂತೆ 10 ಮಂದಿಗೆ ಡ್ರಗ್ಸ್ ಪರೀಕ್ಷೆ