Asianet Suvarna News Asianet Suvarna News

ಹಾನಗಲ್‌ ಸೋಲಿಂದ ಸಿಎಂ ವರ್ಚಸ್ಸಿಗೆ ಧಕ್ಕೆ..!

*  ಸಾಮೂಹಿಕ ನಾಯಕತ್ವದಲ್ಲೇ ನಾವು ಚುನಾವಣೆ ಎದುರಿಸಿದ್ದೆವು
*  ಹಾನಗಲ್‌ ಸೋಲಿನ ಆತ್ಮ ವಿಮರ್ಶೆ ಮಾಡಿಕೊಳ್ಳುತ್ತಿದ್ದೇವೆ
*  ಲೋಪ ಸರಿಪಡಿಸಿಕೊಂಡು ಕೆಲಸ ಮಾಡುವೆವು: ವಿಜಯೇಂದ್ರ
 

CM Basavaraj Bommai React on BJP Defeat in Hanagal Byelection grg
Author
Bengaluru, First Published Nov 4, 2021, 11:04 AM IST

ಹುಬ್ಬಳ್ಳಿ/ಬೆಂಗಳೂರು(ನ.04):  ಉಪಚುನಾವಣೆಯನ್ನು(Byelection) ಸಾಮೂಹಿಕ ನಾಯಕತ್ವದಲ್ಲೇ ಎದುರಿಸಿದ್ದೇವೆ. ಸೋಲಿನ ಹೊಣೆಯನ್ನೂ ಎಲ್ಲರೂ ಹೊರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.

ಬುಧವಾರ ಹುಬ್ಬಳ್ಳಿ(Hubballi) ಹಾಗೂ ಬೆಂಗಳೂರಿನಲ್ಲಿ(Bengaluru) ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ನಾಯಕ ಅಮಿತ್‌ ಶಾ(Amit Shah) ಈ ಹಿಂದೆ ನನ್ನ ಹೆಸರು ಹೇಳಿದಾಗಲೂ ಹೇಳಿದ್ದೆ. ನಾನು ಒಬ್ಬ ತಂಡದ ಮುಖ್ಯಸ್ಥ ಇರಬಹುದು. ಆದರೂ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ(Election) ಮಾಡುತ್ತೇವೆ ಎಂದು ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ಚುನಾವಣೆ ಎದುರಿಸುವುದು ಸಾಮೂಹಿಕ ನಾಯಕತ್ವದಲ್ಲೇ ಎಂದು ಸ್ಪಷ್ಟಪಡಿಸಿದರು.

Hangal By Poll Result: ಬಿಎಸ್‌ವೈ, ವಿಜಯೇಂದ್ರಗೆ ಮನ್ನಣೆ ಸಿಗದೆ ಬಿಜೆಪಿ ಸೋತಿತೇ?

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹಾನಗಲ್‌(Hanagal) ಸೋಲಿನ ಕುರಿತು ನಾವು ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದೇವೆ. ಈ ಅಂತರವನ್ನು ನಾವು ಸಾಧಿಸಬಹುದಾಗಿತ್ತು. ಕಾರಣಗಳನ್ನು ವಿಶ್ಲೇಷಿಸಿ, ಅವುಗಳನ್ನು ಸರಿಪಡಿಸಿ ಮುಂದೆ ಹೋಗುವ ಕೆಲಸವನ್ನು ಮಾಡುತ್ತೇವೆ ಎಂದರು.

ಹಾನಗಲ್‌ನಲ್ಲಿ ಉದಾಸಿ(CM Udasi) ಅವರಿದ್ದಾಗಲೂ ಒಮ್ಮೆ ಬಿಜೆಪಿ(BJP), ಮತ್ತೊಮ್ಮೆ ಕಾಂಗ್ರೆಸ್‌(Congress) ಗೆದ್ದು ಬರುತ್ತಿತ್ತು. ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ(Shrinivas Mane) ಅವರು ಕೋವಿಡ್‌(Covid19) ಸಂದರ್ಭದಲ್ಲಿ ಮಾಡಿದ ಜನಪರ ಕೆಲಸಗಳು ಅವರ ಕೈ ಹಿಡಿದಿವೆ. ಜನರು ಅವರ ಕಾಳಜಿಗೆ ಮೆಚ್ಚಿ ಬೆಂಬಲಿಸಿದ್ದಾರೆ ಎಂದು ಹೇಳಿದರು.

ಹಾನಗಲ್‌ ಸೋಲು ಬಿಜೆಪಿ ದುರಾಡಳಿತಕ್ಕೆ ನೀಡಿದ ತೀರ್ಪು ಎಂಬ ಕಾಂಗ್ರೆಸ್‌ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಬಿಜೆಪಿ ದುರಾಡಳಿತದ ಪ್ರಶ್ನೆಯೇ ಇಲ್ಲ, ಹಾಗಿದ್ದಲ್ಲಿ ಸಿಂದಗಿ(Sindagi) ಜನರು ಯಾಕೆ ಹೆಚ್ಚಿನ ಮತ ನೀಡಿದರು? ಸಿಂದಗಿಯಲ್ಲಿ ಜನರು ನಮ್ಮ ಆಡಳಿತಕ್ಕೆ ನೀಡಿದ್ದು ದೊಡ್ಡ ಮೆಚ್ಚುಗೆ. ಸಿಂದಗಿ ಫಲಿತಾಂಶ(Result) ನೋಡಿದರೆ ಕಾಂಗ್ರೆಸ್‌ ಪಕ್ಷವನ್ನು ಜನರು ಸಂಪೂರ್ಣ ತಿರಸ್ಕರಿಸಿದ್ದಾರೆ. ಒಂದು ಉಪಚುನಾವಣೆ ಫಲಿತಾಂಶ ಸಾರ್ವತ್ರಿಕ ಚುನಾವಣೆಯ(General election) ದಿಕ್ಸೂಚಿಯಾಗಲ್ಲ. ಸಿದ್ದರಾಮಯ್ಯ(Siddaramaiah) ಮುಖ್ಯಮಂತ್ರಿಯಾಗಿದ್ದಾಗಲೂ ಉಪಚುನಾವಣೆ ನಡೆದಿದೆ. ಆಗಲೂ ಆಡಳಿತ ಪಕ್ಷ ಸೋಲು ಅನುಭವಿಸಿತ್ತು ಎಂದರು.

ಹಾನಗಲ್‌ ಸೋಲನ್ನು ಒಬ್ಬರ ಮೇಲೆ ಹೊರಿಸಲ್ಲ: ವಿಜಯೇಂದ್ರ

ಹಾನಗಲ್‌ ಉಪ ಚುನಾವಣೆ ಸೋಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರ್ಚಸ್ಸಿನ ಮೇಲೆ ಯಾವುದೇ ಪರಿಣಾಮ ಬೀರದು. ಈ ಉಪ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯೂ ಅಲ್ಲ, ಈ ಸೋಲನ್ನು ಯಾರೊಬ್ಬರ ಮೇಲೂ ಹೊರಿಸುವುದಿಲ್ಲ ಎಂದು ಬಿಜೆಪಿ ರಾಜ್ಯಉಪಾಧ್ಯಕ್ಷ ವಿಜಯೇಂದ್ರ(BY Vijayendra) ಹೇಳಿದರು.

ಹಾನಗಲ್ ಸೋಲು, ಸಿಎಂಗೆ ಮುಖಭಂಗ: ಬಿಜೆಪಿ ಆಂತರಿಕ ವಲಯದಲ್ಲಿ ಗಂಭೀರ ಚರ್ಚೆ

ಹಾಸನಾಂಬೆ ದೇವಾಲಯಕ್ಕೆ(Hasanambe Temple) ಬುಧವಾರ ತೆರಳಿ ದೇವಿ ದರ್ಶನದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಮುಂದಿನ ದಿನಗಳಲ್ಲಿ ಜಿಪಂ, ತಾಪಂ ಚುನಾವಣೆಗಳು ನಡೆಯಲಿವೆ. ಈಗಿನ ಫಲಿತಾಂಶ ಅವುಗಳ ಕನ್ನಡಿ ಎಂದು ಹೇಳಲಾಗದು. ಹಾನಗಲ್‌ನಲ್ಲಿ ಯಾವ ಕಾರಣಕ್ಕೆ ಸೋತಿದ್ದೇವೆ ಎನ್ನುವ ಚಿಂಥನ-ಮಂಥನ ಮಾಡಿ, ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಮುನ್ನುಗ್ಗಲು ಎಲ್ಲರೂ ಸೇರಿ ಪರಾಮರ್ಶೆ ಮಾಡುತ್ತೇವೆ ಎಂದರು.

ಮೂರು ಕಾಪೋರೇಷನ್‌ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಳಿನ್‌ ಕುಮಾರ್‌ ಕಟೀಲ್‌(Nalin Kumar Kateel) ನೇತೃತ್ವದಲ್ಲಿ ಗೆಲುವು ಪಡೆದಿದ್ದೇವೆ. ಆದರೆ, ಹಾನಗಲ್‌ನಲ್ಲಿ ಹಿನ್ನಡೆಯಾಗಿದ್ದು, ಮುಂದೆ ನಡೆಯುವ ಚುನಾವಣೆಯನ್ನು ಎಲ್ಲರೂ ಒಟ್ಟಿಗೆ ಸೇರಿ ಎದುರಿಸಲಿದ್ದೇವೆ. ಹಾನಗಲ್‌ ಉಪ ಚುನಾವಣೆಯ ಜವಾಬ್ದಾರಿಯನ್ನು ಸಾಮೂಹಿಕವಾಗಿ ತೆಗೆದುಕೊಂಡಿದ್ದೇವೆ. ನಳಿನ್‌ಕುಮಾರ್‌ ಕಟೀಲ್‌ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಬಿ.ಎಸ್‌.ಯಡಿಯೂರಪ್ಪ(BS Yediyurappa) ಮುಖ್ಯಮಂತ್ರಿಯಾಗಿದ್ದಾಗ 15 ಉಪ ಚುನಾವಣೆಯಲ್ಲಿ 12 ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಒಂದು ಚುನಾವಣೆಯಲ್ಲಿ ಹಿನ್ನಡೆ ಆದ ತಕ್ಷಣ ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತದೆ ಎಂಬ ಮಾತುಗಳೆಲ್ಲ ಸರಿಯಲ್ಲ ಎಂದರು.
 

Follow Us:
Download App:
  • android
  • ios