ಮಹಾಲಿಂಗಪುರದ ನಿವಾಸಿ ದಿಶಾ ಶಿರೋಳ ಅವರು 19 ವರ್ಷ ವಯೋಮಿತಿಯ ಕೆಎಸ್ ಸಿಎ ಮಹಿಳಾ ಕ್ರಿಕೆಟ್‌ನ ರಾಯಚೂರು ವಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿ ಆಡುವ ಮೂಲಕ ಇವರು ಬಾಗಲಕೋಟೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಬಾಗಲಕೋಟೆ: 19 ವರ್ಷ ವಯೋಮಿತಿಯ ಕೆಎಸ್ ಸಿಎ ಮಹಿಳಾ ಕ್ರಿಕೆಟ್ ತಂಡಕ್ಕೆ ದಿಶಾ ಶಿರೋಳ ಆಯ್ಕೆಯಾಗಿ ಗಮನ ಸೆಳೆದಿದ್ದಾಳೆ.
8 ಜಿಲ್ಲೆಗಳನ್ನೊಳಗೊಂಡ ರಾಯಚೂರು ವಲಯ ತಂಡಕ್ಕೆ ಆಯ್ಕೆಯಾಗಿರುವ ದಿಶಾ ಮಹಾಲಿಂಗಪುರ ನಿವಾಸಿ ಮನೋಹರ ಶಿರೋಳ ಅವರ ಪುತ್ರಿಯಾಗಿದ್ದಾಳೆ. ಜು.23ರಿಂದ ಬೆಂಗಳೂರಿನಲ್ಲಿ ಜರುಗುವ ಕೆಎಸ್‌ಸಿಎ ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದು, ಮಹಾಲಿಂಗಪುರ ಪಟ್ಟಣ ಮತ್ತು ಬಾಗಲಕೋಟೆ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ.
ಕಠಿಣ ಪರಿಶ್ರಮ
ಸ್ಥಳೀಯ ಜೆಸಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ದಿಶಾ ಗ್ರಾಮೀಣ ಪ್ರದೇಶದಲ್ಲಿ ಬೆಳೆದರೂ ಸಹ ಕಠಿಣ ಪರಿಶ್ರಮದಿಂದ ರಾಯಚೂರು ವಲಯ ತಂಡಕ್ಕೆ ಆಯ್ಕೆಯಾಗಿ ಭರವಸೆ ಮೂಡಿಸಿದ್ದಾಳೆ ಎಂದು ಶಾಲೆ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಜಪಾನ್ ದೈತ್ಯ ಕಂಪನಿಗೆ ತಾಂತ್ರಿಕ ಸಲಹೆಗಾರರಾಗಿ ಮಂಗಳೂರಿನ ಪ್ರೊ.ಡಾ. ಗೋಪಾಲ್ ಮುಗೇರಾಯ ನೇಮಕ
ಇದನ್ನೂ ಓದಿ: 15,500 ಅಡಿ ಎತ್ತರದ ಶಿಖರ ಏರಿದ ಸೃಷ್ಟಿ ಮೇಟಿ; ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ವಿದ್ಯಾರ್ಥಿನಿ


