ರಾವಣನ 35ಕ್ಕೂ ಹೆಚ್ಚು ಮೂರ್ತಿಗಳು ಉತ್ಖನನದ ವೇಳೆ ಪತ್ತೆಯಾಗಿವೆ. ಭಾರತೀಯ ಸರ್ವೇಕ್ಷಣಾ ಇಲಾಖೆಗೂ 15-20 ವಿಗ್ರಹ ದೊರಕಿದರೆ, ರಂಗರಾಜು ಅವರಿಗೂ ಅಷ್ಟೇ ಪ್ರಮಾಣದ ವಿಗ್ರಹಗಳು ದೊರಕಿದೆ.

ಮೈಸೂರು: ಮುತ್ತತ್ತಿಯಿಂದ ರಾಮಯಾಣಕ್ಕೂ, ಪಾಂಡವಪುರ, ಕುಂತಿ ಬೆಟ್ಟದ ಕಾರಣಕ್ಕೆ ಮಹಾಭಾರತಕ್ಕೂ ಸಂಬಂಧವಿದೆ ಎಂದು ಹೇಳಲಾಗುವ ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ರಾವಣನ 35ಕ್ಕೂ ಹೆಚ್ಚು ಮೂರ್ತಿಗಳು ಉತ್ಖನನದ ವೇಳೆ ಪತ್ತೆಯಾಗಿರುವುದು ಇತಿಹಾಸ ತಜ್ಞರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. 

ಎಲ್ಲೆಲ್ಲಿ ವಿಗ್ರಹಗಳು ಪತ್ತೆ?

ಭಾರತೀಯ ಪುರಾತತ್ತ್ವ ಮತ್ತು ಸರ್ವೇಕ್ಷಣಾ ಸಂಸ್ಥೆ ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ ಹಾಗೂ ಮಂಡ್ಯ ತಾಲೂಕು ವ್ಯಾಪ್ತಿಯಲ್ಲಿ ಉತ್ಕನನ ನಡೆಸಿದರೆ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ತಜ್ಞ ಪ್ರೊ.ಎನ್‌.ಎಸ್‌.ರಂಗರಾಜು ಅವರು ಮಳವಳ್ಳಿ, ಬನ್ನೂರು, ಟಿ.ನರಸೀಪುರ ವ್ಯಾಪ್ತಿಯಲ್ಲಿ ನಡೆಸಿದ ಸಂಶೋಧನೆ ವೇಳೆಯೂ ರಾವಣನ ವಿಗ್ರಹಗಳು ಪತ್ತೆಯಾಗಿವೆ. 

ಭಾರತೀಯ ಸರ್ವೇಕ್ಷಣಾ ಇಲಾಖೆಗೂ 15-20 ವಿಗ್ರಹ ದೊರಕಿದರೆ, ರಂಗರಾಜು ಅವರಿಗೂ ಅಷ್ಟೇ ಪ್ರಮಾಣದ ವಿಗ್ರಹಗಳು ದೊರಕಿದೆ.

ಇದನ್ನೂ ಓದಿ: ಬಳ್ಳಾರಿಯ ಹೊಲದಲ್ಲಿ 14ನೇ ಶತಮಾನದ ವಿಜಯನಗರ ಕಾಲದ ಅಪರೂಪದ ಜೈನ ದಾನ ಶಾಸನ ಪತ್ತೆ! ಹಂಪಿಯ ನಂಟು ಉಲ್ಲೇಖ

ಇದನ್ನೂ ಓದಿ: Karwar: 8 ಶತಮಾನಗಳ ಲಿಪಿಪರಂಪರೆಯ ರೂಪಗಳನ್ನು ಹೊಂದಿರೋ ಕನ್ನಡದ ಒಂದೇ ಶಾಸನ ಪತ್ತೆ