ಕೆಪಿಸಿಸಿ ಅಧ್ಯಕ್ಷ ಸಿದ್ದರಾಮಯ್ಯ, ಪರಮೇಶ್ವರ್ ಡಿಸಿಎಂ?

karnataka-assembly-election-2018 | Tuesday, May 15th, 2018
Nirupama K S
Highlights

ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ನಿರೀಕ್ಷಿಸಿದಂತೆ ಯಾವ ಪಕ್ಷವೂ ಮ್ಯಾಜಿಕ್ ನಂಬರ್ ರೀಚ್ ಆಗಿಲ್ಲ. ಈ ಮಧ್ಯೆ ಕಾಂಗ್ರೆಸ್‌ನೊಂದಿಗೆ, ಜಿಡೆಎಸ್‌ ಕೈ ಜೋಡಿಸಿದ್ದು, ಸರಕಾರ ರಚಿಸುವ ಕಸರತ್ತು ನಡೆಸಿದೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ಸಿದ್ದರಾಮಯ್ಯ ಅವರನ್ನು ನೇಮಿಸಲು ಕಾಂಗ್ರೆಸ್ ಹೈ ಕಮಾಂಡ್ ಮುಂದಾಗಿದೆ. ಡಿಸಿಎಂ ಆಗಿ ಜಿ.ಪರಮೇಶ್ವರ್ ಆಯ್ಕೆಯಾಗುತ್ತಿದ್ದಾರೆ.

ಬೆಂಗಳೂರು: ಕಾಲ ಬದಲಾಗುತ್ತೆ. ಸೋತ ಕಾರಣ ಸಿಎಂ ಪಟ್ಟ ಕಳೆದುಕೊಂಡಿದ್ದರು ಜಿ.ಪರಮೇಶ್ವರ್. ಅವರು ಸೋತಿದ್ದಕ್ಕೆ ಸಿದ್ದರಾಮಯ್ಯ ಅಧಿಕಾರದ ಗದ್ದುಗೆ ಏರಿದ್ದರು. ಆದರೂ, ಇವರಿಬ್ಬರ ನಡುವೆ ನಡೆಯುತ್ತಿದ್ದ ಹಗ್ಗ ಜಗ್ಗಾಟದ ಬಗ್ಗೆ ಎಲ್ಲರಿಗೂ ಗೊತ್ತಿದೆ.

ಕಾಲ ಚಕ್ರ ಉರುಳಿದೆ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತಿದ್ದಾರೆ. ಬಾದಾಮಿಯಲ್ಲಿ ಗೆದ್ದರೂ, ಕೇವಲ ಒಂದೂವರೆ ಸಾವಿರ ಮತಗಳಿಂದ ಗೆದ್ದು, ಸೋತಿದ್ದಾರೆ. ಅಲ್ಲದೇ ಮತ್ತೊಮ್ಮೆ ಸರಕಾರ ರಚಿಸುವ ಹುಮ್ಮಸ್ಸಿನಲ್ಲಿದ್ದ ಸಿದ್ದರಾಮಯ್ಯ ಅವರ ಕನಸು ನುಚ್ಚು ನೂರಾಗಿದೆ.

Troll Troll

ಇದೀಗ ಸರಕಾರ ರಚಿಸಲು ಜೆಡಿಎಸ್‌ನೊಂದಿಗೆ ಕಾಂಗ್ರೆಸ್ ಕೈ ಜೋಡಿಸಿದೆ. ಇದಕ್ಕೆ ಕಾಂಗ್ರೆಸ್ ಹೈ ಕಮಾಂಡ್ ಸೂತ್ರವೊಂದನ್ನು ಸೂಚಿಸಿದ್ದು, ಕರ್ನಾಟಕ ಪ್ರಾದೇಶಿಕ ಸಮಿತಿ ಅಧ್ಯಕ್ಷರನ್ನಾಗಿ ಸಿದ್ದರಾಮಯ್ಯ ಅವರನ್ನು ನೇಮಿಸಲು ಮುಂದಾಗಿದೆ. ಜೆಡಿಎಸ್ ಮೈತ್ರಿ ಸರಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಿದ್ದು, ಉಪಮುಖ್ಯಮಂತ್ರಿಯಾಗಿ ಕೊರಟಗೆರೆಯಿಂದ ಗೆದ್ದಿರುವ ಜಿ.ಪರಮೇಶ್ವರ್ ಅವರನ್ನು ನೇಮಿಸಲು ಚಿಂತಿಸಿದೆ.

ಜೆಡಿಎಸ್‌‌ಗೆ ಕಾಂಗ್ರೆಸ್ ಭೇಷರತ್ ಬೆಂಬಲ

ಹೊಸ ಕರ್ನಾಟಕ ಸರಕಾರದ ರಚನೆ ಸಲುವಾಗಿ ರಾಜ್ಯದಲ್ಲಿ ನಾಟಕೀಯ ಬೆಳವಣಿಗೆ ನಡೆಯುತ್ತಿದ್ದು, ಮುಖ್ಯಮಂತ್ರಿ ಯಾರಾಗುತ್ತಾರೆಂಬ ಕುತೂಹಲವಿನ್ನೂ ತಣಿದಿಲ್ಲ.

ಜೆಡಿಎಸ್ ಬಂಡಾಯ ಶಾಸಕರಲ್ಲಿ ಸೋತಿದ್ದು ಯಾರು? ಗೆದ್ದಿದ್ದು ಯಾರು?
 

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Nirupama K S