ಕಾಂಗ್ರೆಸ್ ಮೈತ್ರಿಗೆ ಕುಮಾರಸ್ವಾಮಿ ಒಪ್ಪಿಗೆ : ಸಿಎಂ ಪಟ್ಟ ಖಚಿತ

HD Kumaraswamy Agree Congress Proposal
Highlights

ಸರ್ಕಾರ  ರಚಿಸಲು ಮ್ಯಾಜಿಕ್ ನಂಬರ್ 112 ಬಾರದ ಕಾರಣ ಜೆಡಿಎಸ್ ಜೊತೆ ಮೈತ್ರಿಯೊಂದಿಗೆ ಸರ್ಕಾರ ರಚಿಸಲು ಕಾಂಗ್ರೆಸ್ ಯೋಜನೆ ರೂಪಿಸಿದ್ದು ಕುಮಾರಸ್ವಾಮಿಗೆ ಮುಖ್ಯಮಂತ್ರಿ  ಸ್ಥಾನದ ಅವಕಾಶ ನೀಡುವುದ್ದಾಗಿ ಫಲಿತಾಂಶ ಅಂತಿಮಗೊಂಡ ಕೆಲವೇ ಗಂಟೆಗಳಲ್ಲಿ ತಿಳಿಸಿದ್ದರು.

ಬೆಂಗಳೂರು(ಮೇ.15): ಕಾಂಗ್ರೆಸ್ ನೀಡಿರುವ ಮೈತ್ರಿ ಪ್ರಸ್ತಾವವನ್ನು ಜೆಡಿಎಸ್ ಕಾರ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದ್ದಾರೆ. 
ಒಪ್ಪಿಗೆ ಸೂಚಿತ ಪತ್ರದೊಂದಿಗೆ ಇಂದು ಸಂಜೆ 5.30 ರಿಂದ 6 ಗಂಟೆಗೆ ರಾಜ್ಯಪಾಲರ ಭೇಟಿಗೆ ಅವಕಾಶವನ್ನು ಕೋರಿದ್ದಾರೆ. ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 104, ಕಾಂಗ್ರೆಸ್ 78 ಹಾಗೂ ಜೆಡಿಎಸ್ 37, ಬಿಎಸ್'ಪಿ 1, ಇತರರರು 2 ಸ್ಥಾನ ಪಡೆದುಕೊಂಡಿದ್ದಾರೆ.
ಸರ್ಕಾರ  ರಚಿಸಲು ಮ್ಯಾಜಿಕ್ ನಂಬರ್ 112 ಬಾರದ ಕಾರಣ ಜೆಡಿಎಸ್ ಜೊತೆ ಮೈತ್ರಿಯೊಂದಿಗೆ ಸರ್ಕಾರ ರಚಿಸಲು ಕಾಂಗ್ರೆಸ್ ಯೋಜನೆ ರೂಪಿಸಿದ್ದು ಕುಮಾರಸ್ವಾಮಿಗೆ ಮುಖ್ಯಮಂತ್ರಿ  ಸ್ಥಾನದ ಅವಕಾಶ ನೀಡುವುದ್ದಾಗಿ ಫಲಿತಾಂಶ ಅಂತಿಮಗೊಂಡ ಕೆಲವೇ ಗಂಟೆಗಳಲ್ಲಿ ತಿಳಿಸಿದ್ದರು.  ಈ ಬಗ್ಗೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಮಾಜಿ ಸಿಎಂ  ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.
ಇಂದು ಸಂಜೆ ಕುಮಾರಸ್ವಾಮಿ ಒಳಗೊಂಡಂತೆ ಪ್ರಮುಖ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ.  ಇತ್ತ ದೇವೇಗೌಡರ ಮನೆಯಲ್ಲಿ ಎರಡೂ ಪಕ್ಷದ ನಾಯಕರು ಸಚಿವ ಸ್ಥಾನದ ಬಗ್ಗೆ ಚರ್ಚೆ ನಡೆಸಲಿದ್ದಾರೆ.  

loader