ಬೆಂಗಳೂರು (ಮೇ.15): ಕಾಂಗ್ರೆಸ್ 77 ಸ್ಥಾನದಲ್ಲಿ ಗೆದ್ದರೆ, ಜೆಡಿಎಸ್ 39ರಲ್ಲಿ ಜಯಗಳಿಸಿದೆ. ಬಿಎಸ್ಪಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದರೆ ಪಕ್ಷೇತರ ಅಭ್ಯರ್ಥಿಯೊಬ್ಬರಿಗೆ ಜಯ ಒಲಿದಿದೆ. ಬಿಜೆಪಿ 104 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸ್ವತಂತ್ರವಾಗಿ ಸರಕಾರ ರಚಿಸಲು ಅಗತ್ಯವಾದ ಮ್ಯಾಜಿಕ್ ನಂಬರ್ ತಲುಪಿಲ್ಲ. ಇದೀಗ ಜೆಡಿಎಸ್‌ಗೆ ಕಾಂಗ್ರೆಸ್ ಬೆಂಬಲ ಸೂಚಿಸುತ್ತಿದ್ದು, ರಾಜ್ಯ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಯಾಗುತ್ತಿದೆ.

ಬಿಜೆಪಿಗೆ ಸರಕಾರ ರಚಿಸುವಷ್ಟು ಬಹುಮತ ಬಾರದ ಕಾರಣ, ಇದೀಗ ಕಾಂಗ್ರೆಸ್‌ನೊಂದಿಗೆ ಜೆಡಿಎಸ್ ಕೈ ಜೋಡಿಸಲು ಮುಂದಾಗಿದೆ. ಜೆಡಿಎಸ್‌ಗೆ ಭೇಷರತ್ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದ್ದು, ಕುಮಾರಸ್ವಾಮಿ ಸಹ ಕಾಂಗ್ರೆಸ್ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ.

ಬಿಜೆಪಿ ಭದ್ರಕೋಟೆ ಕರಾವಳಿಯಲ್ಲಿ ಅರಳಿದ ಕಮಲ

ಜೆಡಿಎಸ್‌ನೊಂದಿಗೆ ಕೈ ಜೋಡಿಸುವ ಬಗ್ಗೆ ಈಗಾಗಲೇ ಕಾಂಗ್ರೆಸ್ ವರಿಷ್ಠರು ಸ್ಪಷ್ಟಪಡಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಸಹ ಈ ಬಗ್ಗೆ ಒಲವು ತೋರುತ್ತಿದ್ದು, ಮುಂದಿನ ರಾಜಕೀಯ ಬೆಳವಣಿಗೆ ತೀವ್ರ ಕುತೂಹಲ ಮೂಡಿಸಿದೆ.

ಚನ್ನಪಟ್ಟಣದಲ್ಲಿ ಸೋಲುಂಡ ಯೋಗೇಶ್ವರ್

ಇಂದು ಸಂಜೆ ಕಾಂಗ್ರೆಸ್ ನಿಯೋಗದೊಂದಿಗೆ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಹಾಗೂ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ. ಎಚ್.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಒಪ್ಪಿಕೊಂಡಿದ್ದು, ದಲಿತ ಕಾಂಗ್ರೆಸ್ ಅಭ್ಯರ್ಥಿಯೊಬ್ಬರನ್ನು ಡಿಸಿಎಂ ಮಾಡುವ ನಿರೀಕ್ಷೆ ಇದೆ.

 ಕರ್ನಾಟಕ ವಿಧಾನಸಭೆಯ ಬಲಾಬಲ: 224

ಮ್ಯಾಜಿಕ್ ನಂಬರ್: 212

ಬಿಜೆಪಿ: 104

ಕಾಂಗ್ರೆಸ್: 78

ಜೆಡಿಎಸ್: 38

ಇತರೆ: 2

ಬೆಂಗಳೂರು ನಗರ, ಗ್ರಾಮಾಂತರದಲ್ಲಿ ಗೆದ್ದವರು, ಸೋತವರು

ಸರಕಾರ ರಚನೆಗೆ ಬಿಜೆಪಿಯಿಂದಲೂ ಕಸರತ್ತು