ಬಿ.ಟೆಕ್ ವಿದ್ಯಾರ್ಥಿ ವಿಪುಲ್ ಜೈನ್ ಅವರು ₹1.45 ಕೋಟಿ ವಾರ್ಷಿಕ ಸಂಬಳದೊಂದಿಗೆ ಅಮೆರಿಕದ ಕಂಪನಿಯೊಂದರಲ್ಲಿ ನೌಕರಿ ಪಡೆದಿದ್ದಾರೆ. ಕ್ಯಾಂಪಸ್ ಸಂದರ್ಶನದಲ್ಲಿ ಈ ಸಾಧನೆ ಮಾಡಿದ ಅವರು, ತಮ್ಮ ತಾಂತ್ರಿಕ ಕೌಶಲ್ಯಗಳಿಂದ ಉದ್ಯೋಗದಾತರನ್ನು ಮೆಚ್ಚಿಸಿದ್ದಾರೆ.

ನವದೆಹಲಿ: ಅಂತಿಮ ವರ್ಷದ ಬಿ.ಟೆಕ್ ವಿದ್ಯಾರ್ಥಿ ವಿಪುಲ್ ಜೈನ್, ಬರೋಬ್ಬರಿ 1.45 ಕೋಟಿ ರೂಪಾಯಿ ಸಂಬಳದ ನೌಕರಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಪುಲ್ ಜೈನ್, ಪ್ರಯಾಗ್‌ರಾಜ್‌ನಲ್ಲಿರುವ ಐಐಐಟಿಯ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಬಿಟೆಕ್ ಓದುತ್ತಿದ್ದಾರೆ. ಐಐಐಟಿ ಬಿಟೆಕ್‌ ಕ್ಯಾಂಪಸ್‌ ಪ್ಲೇಸ್‌ಮೆಂಟ್‌ನಲ್ಲಿ ವಿಪುಲ್ ಜೈನ್ ಅತಿ ಹೆಚ್ಚು ಸಂಬಳದ ಕೆಲಸಕ್ಕೆ ಆಯ್ಕೆಯಾಗಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿರುವ ಐಐಐಟಿಯ ಕ್ಯಾಂಪಸ್‌ನಲ್ಲಿ ಅತಿ ಹೆಚ್ಚು ಸಂಬಳದ ಉದ್ಯೋಗ ಪಡೆದ ವಿದ್ಯಾರ್ಥಿ ಎಂಬ ಹೆಮ್ಮೆಗೆ ವಿಪುಲ್ ಜೈನ್ ಪಾತ್ರವಾಗಿದ್ದಾರೆ. ಅಮೆರಿಕದ ಅಂತರಾಷ್ಟ್ರೀಯ ಕಂಪನಿಯೊಂದು ವಿಪುಲ್ ಜೈನ್ ಅವಿರಗತೆ ವಾರ್ಷಿಕ 1.45 ಕೋಟಿ ರೂ. ಪ್ಯಾಕೇಜ್ ಆಫರ್ ಮಾಡಿದೆ ಎಂದು ವರದಿಯಾಗಿದೆ.

ಲಕ್ಷ ಲಕ್ಷ ಪ್ಯಾಕೇಜ್ ಪಡೆದುಕೊಂಡ ವಿದ್ಯಾರ್ಥಿಗಳು

ಇತ್ತೀಚೆಗೆ ನಡೆದ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಬಿಟೆಕ್ ವಿದ್ಯಾರ್ಥಿಗಳು ಸರಾಸರಿ 34 ಲಕ್ಷ ರೂ.ಯ ಪ್ಯಾಕೇಜ್ ಪಡೆದುಕೊಂಡಿದ್ದಾರೆ. ಇನ್ನು ಎಂಟೆಕ್ ವಿದ್ಯಾರ್ಥಿಗಳು ಸರಾಸರಿ ವಾರ್ಷಿಕ 17 ಲಕ್ಷದ ಪ್ಯಾಕೇಜ್ ಪಡೆದಿದ್ದಾರೆ. 33 ಬಿ.ಟೆಕ್ ವಿದ್ಯಾರ್ಥಿಗಳು 60 ಲಕ್ಷ ರೂ.ಗಳಿಗಿಂತ ಪ್ಯಾಕೇಜ್ ಪಡೆದುಕೊಳ್ಳಲು ಅರ್ಹರಾಗಿದ್ದಾರೆ. 60 ವಿದ್ಯಾರ್ಥಿಗಳಿಗೆ 50 ಲಕ್ಷ ರೂ.ಗಳಿಗಿಂತೆ ಹೆಚ್ಚಿನ ಪ್ಯಾಕೇಜ್ ಸಿಕ್ಕಿದೆ.

ಶೇ.100ರಷ್ಟು ಬಿ.ಟೆಕ್ ವಿದ್ಯಾರ್ಥಿಗಳಿಗೆ ಉದ್ಯೋಗ

ಈ ಕುರಿತು ಮಾತನಾಡಿರುವ ಪ್ಲೇಸ್‌ಮೆಂಟ್ ಇನ್‌ಚಾರ್ಜ್ ಡಾ.ಮುನೇಂದ್ರ ಓಜಾ, 1.45 ಕೋಟಿ ರೂ. ಪ್ಯಾಕೇಜ್ ಪಡೆದುಕೊಂಡಿರುವ ವಿಪುಲ್ ಜೈನ್ ತಮ್ಮ ತಂತ್ರಜ್ಞಾನ ಕೌಶಲ್ಯ ಮತ್ತು ಅತ್ಯುತ್ತಮವಾಗಿ ಸಂದರ್ಶನ ಎದುರಿಸಿದ್ದಾರೆ. ಪರಿಣಾಮ ಇಷ್ಟು ದೊಡ್ಡ ಮೊತ್ತದ ಪ್ಯಾಕೇಜ್ ಅವರದ್ದಾಗಿದ್ದು, ಅದಕ್ಕೆ ಅವರು ಅರ್ಹರು ಎಂದು ಹೇಳಿದ್ದಾರೆ. ಮತ್ತೋರ್ವ ಅಧಿಕಾರಿ ಅಜಿತ್ ಕುಮಾರ್ ಸಿಂಗ್ ಮಾತನಾಡಿ, ಈ ವರ್ಷ ಶೇ.100ರಷ್ಟು ಬಿ.ಟೆಕ್ ವಿದ್ಯಾರ್ಥಿಗಳು ಪ್ಲೇಸ್‌ಮೆಂಟ್‌ನಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಇದೇ ಪ್ಲೇಸ್‌ಮೆಂಟ್‌ನಲ್ಲಿ ಶೇ.91ರಷ್ಟು ಎಂ.ಟೆಕ್ ವಿದ್ಯಾರ್ಥಿಗಳಿಗೆ ಕೆಲಸ ಸಿಕ್ಕಿದೆ ಎಂದು ಮಾಹಿತಿ ನೀಡಿದರು.

ಈ ವರ್ಷ ಎಂಟೆಕ್ ವಿದ್ಯಾರ್ಥಿಗಳ ಸಾಧನೆ ವಿಶೇಷವಾಗಿದೆ. ಎಂ.ಟೆಕ್ ಐಟಿ ಮತ್ತು ಇಸಿ ವಿಭಾಗದ 12 ವಿದ್ಯಾರ್ಥಿಗಳು 45 ಲಕ್ಷ ರೂ.ಗಳಿಗೂ ಅಧಿಕ ಪ್ಯಾಕೇಜ್ ಸ್ವೀಕರಿಸಿದ್ದಾರೆ. 122 ಸ್ನಾತಕೋತ್ತರ (ಎಂ.ಟೆಕ್) ವಿದ್ಯಾರ್ಥಿಗಳಲ್ಲಿ 105 ಜನರಿಗೆ ಉದ್ಯೋಗ ಸಿಕ್ಕಿ. ಈ ಬಾರಿ ಭಾರತ ಮತ್ತು ವಿದೇಶದ ಹಲವು ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಭಾಗಿಯಾಗಿದ್ದವು ಎಂದು ಅಜಿತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಉದ್ಯೋಗ ಮೇಳ

ನಿರುದ್ಯೋಗ ಸಮಸ್ಯೆ ಪರಿಹರಿಸಲು ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮಕ್ಕಳು ಸದ್ಬಳಕೆ ಮಾಡಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಹಾಗೂ ಅಭಿಮಾನಿಗಳ ಮತ್ತು ಪ್ರತಿಷ್ಠಿತ ಕಂಪನಿಯಾದ ನರಸಾಪುರ ಕೋಲಾರದ ಪ್ರೊಡ್ಯುಟ್ ಸೂಲ್ಯೂಷನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳದಲ್ಲಿ ವಿದ್ಯಾರ್ಥಿಗಳ ಜೊತೆ ಮಾತನಾಡಿದರು.

ರಾಜ್ಯದ ಪ್ರತಿಷ್ಠಿತ ಕಂಪನಿಯಿಂದ ಉದ್ಯೋಗ ಮೇಳವನ್ನು ಪಟ್ಟಣದಲ್ಲಿ ತಾಲೂಕಿನ ವಿದ್ಯಾರ್ಥಿಗಳಿಗೆ ನಿರುದ್ಯೋಗವನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಸೂಕ್ತ ದಾಖಲಾತಿಗಳನ್ನು ನೀಡಿ ಕಂಪನಿಯವರ ಜೊತೆ ಉದ್ಯೋಗ ಮೇಳದಲ್ಲಿ ಮಾಹಿತಿಯನ್ನು ಪಡೆದುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಉತ್ತಮ ಕಾರ್ಯಕ್ರಮ ಹೀಗಾಗಿದೆ.

ಕಡು ಬಡತನದಿಂದ ತಂದೆ ತಾಯಿಗಳು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿರುವುದರಿಂದ ಅಂತಹ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಳ್ಳಲು ಇದೊಂದು ಸುವರ್ಣ ಅವಕಾಶ ಸದ್ಬಳಕೆ ಮಾಡಿಕೊಂಡು ಮಕ್ಕಳು ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಹೆಚ್ಚಾಗಿ ತಾಲೂಕಿನಿಂದ 18 ವರ್ಷಕ್ಕಿಂತ ಹೆಚ್ಚು ಮೇಲ್ಪಟ್ಟ ಅರ್ಹತೆ ಹೊಂದಿದ್ದ ವಿದ್ಯಾರ್ಥಿಗಳು ಈ ಉದ್ಯೋಗ ಮೇಳದಲ್ಲಿ ತಮ್ಮ ಯುವ ಪ್ರತಿಭೆಯನ್ನು ಗುರುತಿಸಿಕೊಂಡು ತಮ್ಮ ಆರ್ಥಿಕ ಭವಿಷ್ಯಕ್ಕಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.