ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕರೂ ಕೂಡ, ನಾನು ಬೆಂಗಳೂರು ಆಯ್ಕೆ ಮಾಡಿಕೊಂಡಿದ್ದಕ್ಕೆ ಪಶ್ಚಾತ್ತಾಪವಿದೆ” ಎಂದು ಉದ್ಯೋಗಿಯೋರ್ವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಉದ್ಯೋಗಕ್ಕೆ ಬೆಂಗಳೂರು ಆಯ್ಕೆ ಮಾಡಿಕೊಂಡಿದ್ದಕ್ಕೆ ಐಟಿ ಉದ್ಯೋಗಿಯೋರ್ವರು ಬೇಸರ ಹೊರಹಾಕಿದ್ದರು. X ಖಾತೆಯಲ್ಲಿ ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಉದ್ಯೋಗ ಮಾಡಬೇಕು ಅಂತ ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದ್ದಾರೆ.

ಆಫೀಸ್‌ಗೆ ಹೋಗೋಕೆ ತುಂಬ ಟೈಮ್‌ ಬೇಕು!

ವಿದೇಶಗಳಲ್ಲಿ ಉದ್ಯೋಗ ಇತ್ತು. ಆದರೂ ಕೂಡ ನಾನು ಬೆಂಗಳೂರನ್ನು ಆಯ್ಕೆ ಮಾಡಿಕೊಂಡೆ, ಸಿಕ್ಕಾಪಟ್ಟೆ ಟ್ರಾಫಿಕ್‌ ಇದೆ. ವರ್ಕ್‌ ಲೈಫ್‌ ಕ್ವಾಲಿಟಿ ಕೂಡ ಕಡಿಮೆ ಆಗಿದೆ ಎಂದು ಅವರು ಹೇಳಿದ್ದಾರೆ. “ಬೆಂಗಳೂರಿನ ಟ್ರಾಫಿಕ್ ಪರಿಸ್ಥಿತಿಯು ಸಿಕ್ಕಾಪಟ್ಟೆ ಕೆಟ್ಟದಾಗಿದೆ. ನಾನು ಬೆಳಿಗ್ಗೆ 9 ಅಥವಾ 9:30ಕ್ಕೆ ಆಫೀಸ್‌ಗೆ ಹೋಗ್ತೀನಿ. ಆಫೀಸ್‌ಗೆ ಮಧ್ಯಾಹ್ನ 12 ಗಂಟೆಗೆ ತಲುಪುತ್ತೇನೆ! ಆರು ಕಿಮೀ ದೂರ ಇರುವ ಆಫೀಸ್‌ಗೆ ನಾನು ಯಾವಾಗ ಹೊರಟರೂ ಒಂದೇ ರೀತಿ ಆಗುತ್ತದೆ” ಎಂದು ಅವರು ಹೇಳಿದ್ದಾರೆ.

ಎಷ್ಟು ಹಣ ಬೇಕು?

“ಈ ರೀತಿ ಇದ್ದಾಗ ನನ್ನ ಕಾರ್‌ ತಗೊಂಡು ಆಫೀಸ್‌ಗೆ ಹೋಗೋಕೆ ಆಗಲ್ಲ.‌ ಅಷ್ಟು ಒತ್ತಡ ಇರುತ್ತದೆ. ಹೀಗಾಗಿ ಉಬರ್‌, ಓಲಾ ಕ್ಯಾಬ್ ಬುಕ್‌ ಮಾಡಿ ಹೋಗಬೇಕು. ಟ್ರಾಫಿಕ್‌ ಜಾಸ್ತಿ ಇದ್ದಷ್ಟು ಜಾಸ್ತಿ ಹಣ ಕೊಡಬೇಕು. ಆಗ ಪ್ರತಿ ರೈಡ್‌ಗೆ ₹500–₹600 ಖರ್ಚಾಗುತ್ತದೆ” ಎಂದಿದ್ದಾರೆ.

ಟ್ರಾಫಿಕ್‌ ವ್ಯವಸ್ಥೆ ಕೆಲಸದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

“ಹೈಬ್ರಿಡ್ ಕೆಲಸದ ವ್ಯವಸ್ಥೆಯಿದೆ ( ವಾರದಲ್ಲಿ ಎರಡು ದಿನ ಮಾತ್ರ ಆಫೀಸ್‌ಗೆ ಬರಬೇಕು). ಐಟಿ ಉದ್ಯೋಗಿಗಳು ಈ ಟ್ರಾಫಿಕ್‌ ಜಾಮ್‌ನಲ್ಲೇ ಸಿಲುಕಿಕೊಳ್ತಾರೆ. ಇದು ಪ್ರೊಡಕ್ಷನ್‌, ಸ್ಪೂರ್ತಿ ಮೇಲೆ ಪರಿಣಾಮ ಬೀರುತ್ತದೆ. ಕಷ್ಟಪಟ್ಟು ಕೆಲಸ ಮಾಡಬೇಕು, ಖುಷಿಯಿಂದ ಕೆಲಸ ಮಾಡಬೇಕು ಎನ್ನುವ ಮನೋಭಾವವೇ ಇರೋದಿಲ್ಲ” ಎಂದಿದ್ದಾರೆ.

ಪಶ್ಚಾತ್ತಾಪ ಆಗಿದೆ!

“ಆಫೀಸ್‌ನಿಂದ 500 ಮೀಟರ್ ಒಳಗೆ ವಾಸಿಸುವ ಸಹೋದ್ಯೋಗಿಗಳು ಕೂಡ ಕ್ಯಾಬ್ ಬದಲು ಟ್ರಾಫಿಕ್‌ನಲ್ಲಿ ವಾಕ್‌ ಮಾಡೋದು ಉತ್ತಮ. ಬೆಂಗಳೂರಿನಲ್ಲಿ ಇದನ್ನು ಒಪ್ಪಿಕೊಳ್ಳೋದು ಕಷ್ಟ. ಹತ್ತು ವರ್ಷಗಳ ಹಿಂದೆ ವಿದೇಶಿ ಉದ್ಯೋಗ ಸಿಕ್ಕರೂ ಇಲ್ಲಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಪಶ್ಚಾತ್ತಾಪ ಪಡ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.

ಅನೇಕರು ಈ ಪೋಸ್ಟ್‌ ನೋಡಿ ಸೋಶಿಯಲ್‌ ಮೀಡಿಯಾದಲ್ಲಿ ಏನು ಹೇಳಿದ್ರು?

“ನಾನು ಬೆಂಗಳೂರಿನಲ್ಲಿ ವಾಸ ಮಾಡೋದಿಲ್ಲ, ಆದರೆ ವರ್ಷದಲ್ಲಿ ಕೆಲವು ತಿಂಗಳು ಇಲ್ಲಿಗೆ ಬರ್ತೀನಿ. ನಾನು ಅಲ್ಲಿದ್ದಾಗ ಟ್ರಾಫಿಕ್‌ ಸಮಸ್ಯೆಯಿಂದ ತಪ್ಪಿಸಿಕೊಳ್ಳಬೇಕು ಅಂತ ಬೆಳಗ್ಗೆ ಬೇಗ ಹೊರಡ್ತೀನಿ” ಎಂದು ಇನ್ನೋರ್ವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಆಟೋಗಳು ನಡೆದುಕೊಳ್ಳುವ ರೀತಿ ಬಗ್ಗೆಯೂ ಕೆಲವರು ಕಿಡಿಕಾರಿದ್ದಾರೆ. “ದೆಹಲಿ, ಮುಂಬೈ, ಕೋಲ್ಕತ್ತಾದಲ್ಲಿರುವ ಆಟೋಗಳಿಗೆ ಹೋಲಿಕೆ ಮಾಡಿ ನೋಡಿದರೆ ಬೆಂಗಳೂರಿನಲ್ಲಿನ ಆಟೋ ರಿಕ್ಷಾದವರ ವರ್ತನೆ ಖಂಡನೀಯ. ಇಲ್ಲಿ ದೊಡ್ಡ ಟಿಪ್ ಕೊಡುತ್ತೀರಿ, ಬಹುಶಃ ಪ್ರಾರ್ಥನೆಯೂ ಮಾಡಬೇಕಾಗಬಹುದು. ನೀವೇ ಬೆಂಗಳೂರಲ್ಲಿ ರೈಡ್ ಬುಕ್ ಮಾಡುತ್ತಿಲ್ಲ. ನೀವು ಬೇಡುತ್ತೀರಿ” ಎಂದು ಇನ್ನೋರ್ವರು ಕಾಮೆಂಟ್‌ ಮಾಡಿದ್ದಾರೆ.