ಬೆಂಗಳೂರಿನಲ್ಲಿ ಉದ್ಯೋಗಾಕಾಂಕ್ಷಿಯೊಬ್ಬರು ನೇಮಕಾತಿ ವ್ಯವಸ್ಥಾಪಕರ ಅಸಭ್ಯ ವರ್ತನೆಯಿಂದ ಎರಡು ಬಾರಿ 'ದೆವ್ವ' ಆದ ಅನುಭವ ಹಂಚಿಕೊಂಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ನೇಮಕಾತಿ ಪ್ರಕ್ರಿಯೆಯಲ್ಲಿನ ಶಿಷ್ಟಾಚಾರದ ಕೊರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬೆಂಗಳೂರಿನಲ್ಲಿ ನಾನೊಂದು ಕಂಪೆನಿ ಸೇರಿ ಎರಡು ಬಾರಿ ದೆವ್ವ ಆಗಿದ್ದೇನೆ. ನೇಮಕಾತಿ ಮ್ಯಾನೇಜರ್‌ನಿಂದ ಕೆಟ್ಟ ವ್ಯವಹಾರ ಆಯ್ತು ಎಂದು ಉದ್ಯೋಗಿಯೋರ್ವರು ಆರೋಪ ಮಾಡಿದ್ದಾರೆ. ಕೆಲಸದ ಸ್ಥಳದಲ್ಲಿ ಎಷ್ಟು ವಿಷಕಾರುತ್ತಾರೆ ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಇದು ಸಂದರ್ಶನಗಳಲ್ಲಿ ಉದ್ಯೋಗ ಕೊಡುವವರು, ನೇಮಕಾತಿ ಮ್ಯಾನೇಜರ್ ಶಿಷ್ಟಾಚಾರದ ಬಗ್ಗೆ ತೀವ್ರ ಚರ್ಚೆಗಳನ್ನು ಹುಟ್ಟುಹಾಕಿದೆ.
ಮೊದಲ ಬಾರಿ ಏನಾಯ್ತು?
ಉದ್ಯೋಗ ನೇಮಕ ಮಾಡುವ ಮ್ಯಾನೇಜರ್ ಜೊತೆ ಸಂದರ್ಶನವನ್ನು ನಿಗದಿಪಡಿಸಲಾಗಿತ್ತು. ಆದರೆ ಅವರೇ ಬರಲಿಲ್ಲ. ಯಾವುದೇ ಮಾಹಿತಿಯಿಲ್ಲ, ಯಾವುದೇ ವಿವರಣೆಯಿಲ್ಲ. ಅಲ್ಲಿದ್ದವರ ಜೊತೆ ಫಾಲೋ ಅಪ್ ಮಾಡಿದೆ, ಮತ್ತೆ ಇಂಟರ್‌ವ್ಯೂ ಫಿಕ್ಸ್ ಮಾಡಲಾಯ್ತು” ಎಂದು ಅಭ್ಯರ್ಥಿಯು ಹೇಳಿದ್ದಾರೆ.
ಎರಡನೇ ಬಾರಿ ಏನಾಯ್ತು?
“ಎರಡನೇ ಬಾರಿಯೂ ಅದೇ ಕಥೆ ಆಯ್ತು. ಈ ಬಾರಿ ಅವರು 15 ನಿಮಿಷ ತಡವಾಗಿ ಬಂದರು, ಯಾವುದೇ ಕ್ಷಮೆ ಕೇಳಲಿಲ್ಲ, ತಾನು ತಡವಾಗಿ ಬಂದದ್ದನ್ನು ಒಪ್ಪಿಕೊಳ್ಳಲಿಲ್ಲ, ಇದೆಲ್ಲ ಈ ರಂಗದಲ್ಲಿ ಸಾಮಾನ್ಯ ಎನ್ನುವಂತೆ ಸೀರಿಯಸ್ ಆಗಿ ಬಂದರು. ನಂತರ ನಾನೇ ಎಲ್ಲವನ್ನೂ ನೋಡಿಕೊಳ್ತೀನಿ ಎಂದು ಭಾಷಣ ಶುರು ಮಾಡಿದರು. ಇಂಜಿನಿಯರಿಂಗ್ ಜಾಬ್ ಅದಾಗಿತ್ತು. ವಾರದಲ್ಲಿ 5–6 ದಿನಗಳ ಕಾಲ ಆಫೀಸ್‌ನಲ್ಲಿ ಕೆಲಸ ಮಾಡಬೇಕಿತ್ತು. ಆ ಮ್ಯಾನೇಜರ್‌ಗೆ ಯಾವುದೇ ಸೌಜನ್ಯವಿರಲಿಲ್ಲ, ಕಟ್ಟುನಿಟ್ಟಾದ ಮನೋಭಾವ, ಹೊಂದಿದ್ದರು. ವಿಚಿತ್ರವಾದ ಅಧಿಕಾರದ ಭಾವನೆ ಹೊಂದಿದ್ದರು” ಎಂದು ಅವರು ಬರೆದುಕೊಂಡಿದ್ದಾರೆ.
ಕೆಟ್ಟ ಮ್ಯಾನೇಜರ್ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್‌ದಲ್ಲಿ ಏನೇನು ಚರ್ಚೆ ನಡೆಯುತ್ತಿದೆ?
“ಇದು ಒಂದು ಚಕ್ರದಂತೆ ಭಾಸವಾಗುತ್ತದೆ. ಆಫೀಸ್‌ಗೆ ಎಂಟ್ರಿ ಕೊಡುವ ಹೊಸಬರಿಗೆ ಕೆಟ್ಟ ಮ್ಯಾನೇಜರ್ ಸಿಗುತ್ತಾನೆ. ಆಮೇಲೆ ಎಂಟ್ರಿ ಪಡೆದವನೇ ಮ್ಯಾನೇಜರ್ ಆಗಿ ಬೆಳೆಯುತ್ತಾನೆ, ಆಮೇಲೆ ಮತ್ತೆ ಈ ಸಂಸ್ಕೃತಿ ಮುಂದುವರೆದುಕೊಂಡು ಹೋಗುತ್ತದೆ. ಜನರು ಕೂಡ ಇದೆಲ್ಲ ನಾರ್ಮಲ್ ಎಂದು ಯೋಚಿಸ್ತಾರೆ. ಇದನ್ನು ನೀವು ಹೇಗೆ ಒಡೆಯುತ್ತೀರಿ” ಎಂದು ಅವರು ಪ್ರಶ್ನೆ ಮಾಡಿದ್ದಾರೆ.
“ನಿಮಗೆ ಉದ್ಯೋಗ ಸಿಕ್ಕಿಲ್ಲ ಅಂದ್ರೆ ಒಂದು ಗುಂಡಿನಿಂದ ತಪ್ಪಿಸಿಕೊಂಡಿದ್ದೀರಿ ಅಂತ ಅಂದುಕೊಳ್ಳಿ, ಒಳ್ಳೆಯದಾಗಲಿ” ಎಂದು ಇನ್ನೋರ್ವರು ಹೇಳಿದ್ದಾರೆ.
“ಮ್ಯಾನೇಜರ್‌ಗಳು ಅಹಂಕಾರಿಗಳಂತೆ ವರ್ತಿಸುತ್ತಾರೆ.
ನನಗೆ ಇದು ಅರ್ಥ ಆಗೋದಿಲ್ಲ. ಇದು ಅರಿ ಅಂತ ಎಲ್ಲಿಂದ ಆಲೋಚನೆ ಬರುತ್ತದೆ? ನನಗೆ, ಇದು ಆಧುನಿಕ ಕಾಲದ ಗುಲಾಮಗಿರಿ ಥರ ಕಾಣಿಸ್ತಿದೆ” ಎಂದು ಹೇಳಿದ್ದಾರೆ.
