ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಸಮಾನ ಮನಸ್ಥಿತಿಯ ಮಗು ಹಾಗೂ ಯುವತಿಯ ಭೇಟಿ ಡೌನ್ ಸಿಂಡ್ರೋಮ್ ಹೊಂದಿರುವ ಮಗು ಹಾಗೂ ಯುವತಿ
ಡೌನ್ ಸಿಂಡ್ರೋಮ್ ಹೊಂದಿರುವ ಪುಟ್ಟ ಹುಡುಗಿ ಅದೇ ಸ್ಥಿತಿಯನ್ನು ಹೊಂದಿರುವ ಕಾಫಿ ಶಾಪ್ ಉದ್ಯೋಗಿಯನ್ನು ಭೇಟಿಯಾಗಿ ತಮ್ಮದೇ ಸಂಭಾಷಣೆ ನಡೆಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಟರ್‌ನೆಟ್‌ನಲ್ಲಿ ನಾವು ಮಾನವೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಹಲವು ವಿಡಿಯೋಗಳನ್ನು ನೋಡಿದ್ದೇವೆ. ಅವುಗಳ ನಮ್ಮ ಮನಸ್ಸನ್ನು ಚಿಂತನೆಗೀಡು ಮಾಡುವ ಜೊತೆಗೆ ಹೊಸತನದಿಂದ ಯೋಚಿಸುವಂತೆ ಮಾಡುತ್ತದೆ. ಅಂತಹ ಒಂದು ವೀಡಿಯೊವನ್ನು ಇನ್ಸ್ಟಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಎಲ್ಲಾ ಸರಿಯಾದ ಕಾರಣಗಳಿಗಾಗಿ ಅದೀಗ ವೈರಲ್ ಆಗಿದೆ. ವೀಡಿಯೊವು ಡೌನ್ ಸಿಂಡ್ರೋಮ್ ಹೊಂದಿರುವ ಪುಟ್ಟ ಹುಡುಗಿಯ ಚಟುವಟಿಕೆಯನ್ನು ತೋರಿಸುತ್ತದೆ.
ಅವರಿಬ್ಬರೂ ಒಂದೇ ಮನಸ್ಥಿತಿಯವರು, ಅವರಿಗಿರುವುದು ಡೌನ್ ಸಿಂಡ್ರೋಮ್ ಎಂಬ ದೈಹಿಕ ವೈಕಲ್ಯದ ಸ್ಥಿತಿ. ಕಾಫಿ ಶಾಪ್ ಉದ್ಯೋಗಿಯೊಬ್ಬರನ್ನು ತುಂಬಾ ಆಸಕ್ತಿಯಿಂದ ಈ ಡೌನ್ ಸಿಂಡ್ರೋಮ್ ಹೊಂದಿರುವ ಚಿಕ್ಕ ಹುಡುಗಿ ನೋಡುತ್ತಿದ್ದಾಳೆ. ಈ ವೇಳೆ ಇದೇ ಸ್ಥಿತಿಯನ್ನು ಸ್ವತಃ ಹೊಂದಿರುವ ಕಾಫಿ ಶಾಪ್‌ನಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ನಿಧಾನವಾಗಿ ಮಗುವಿನ ಕಡೆಗೆ ಬಂದು ಅವಳಿಗೆ ಹೂವು ಮತ್ತು ಮುದ್ದಾದ ಸ್ಮರಣಿಕೆಯನ್ನು ನೀಡುತ್ತಾಳೆ.
ಮುಗ್ಧತೆ ಮತ್ತು ಪರಸ್ಪರ ಮೆಚ್ಚುಗೆಯಿಂದ ತುಂಬಿರುವ ಈ ಸೊಗಸಾದ ವೀಡಿಯೊವನ್ನು 'ಕೆಲವರು ಕಾಫಿಗಾಗಿ ಬರುತ್ತಾರೆ ಕೆಲವರು ಭರವಸೆಗಾಗಿ ಬರುತ್ತಾರೆ' ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಕೆಲವರು ಭರವಸೆಗಾಗಿ ಬರುತ್ತಾರೆ. ಬಿಟ್ಟಿ ಮತ್ತು ಬ್ಯೂಸ್ ಕಾಫಿ (Bitty & Beau's Coffee)ಎಂಬ ಹೆಸರಿನ ಕಾಫಿ ಅಂಗಡಿಗಳ ಸರಣಿಯ ಇನ್‌ಸ್ಟಾಗ್ರಾಮ್ ಪುಟದಿಂದ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. 'ಕಾಫಿ (coffee shop)ಶಾಪ್‌ನಂತೆ ವೇಷ ಧರಿಸಿದ ಮಾನವ ಹಕ್ಕುಗಳ ಚಳುವಳಿ' ಎಂದು ಈ ಇನ್‌ಸ್ಟಾಗ್ರಾಮ್ ಪೇಜ್‌ನ ಬಯೋದಲ್ಲಿ ಬರೆಯಲಾಗಿದೆ.
ಡೌನ್ ಸಿಂಡ್ರೋಮ್ ಮಗು ತೋರಿಸೋ ಪ್ರೀತಿ ಮುಂದೆ ಬೇರೇನೂ ಇಲ್ಲ!
ವೀಡಿಯೊವನ್ನು ಮಾರ್ಚ್ 22 ರಂದು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಅಂದಿನಿಂದಲೂ ಈ ವಿಡಿಯೋವನ್ನು ಇಲ್ಲಿಯವರೆಗೆ 2.5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು, ಅವಳು ತುಂಬಾ ಮೃದುವಾಗಿ ಮತ್ತು ಪ್ರೀತಿಯಿಂದ ಆ ಪುಟ್ಟ ಹುಡುಗಿಯ ಕೈಯಲ್ಲಿ ಬಟನ್ ಅನ್ನು ಇಟ್ಟ ರೀತಿ ಸುಂದರವಾಗಿದೆ. ವಾವ್, ಸಂಪೂರ್ಣವಾಗಿ ಸುಂದರ. ಇಂತಹ ನಡವಳಿಕೆ ನಮಗೆ ಹೆಚ್ಚು ಬೇಕು ಹೀಗೆ ತುಂಬಾ ಜನ ಭಿನ್ನ ವಿಭಿನ್ನವಾಗಿ ಕಾಮೆಂಟ್ ಮಾಡಿ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾವು ಯಾರಿಗೂ ಕಡಿಮೆ ಇಲ್ಲ: ವಿಶೇಷಚೇತನರ ಭರತನಾಟ್ಯಕ್ಕೆ ಬೆರಗಾದ ಜನ
ಡೌನ್ ಸಿಂಡ್ರೋಮ್ ಕಾಯಿಲೆಗೆ ಟ್ರೈಸೊಮಿ 21 ಎಂದೂ ಕೂಡ ಕರೆಯಲಾಗುತ್ತದೆ. ಇದು ವರ್ಣತಂತು 21 ರ ಮೂರನೇ ನಕಲಿನ ಎಲ್ಲಾ ಅಥವಾ ಭಾಗದ ಉಪಸ್ಥಿತಿಯಿಂದ ಉಂಟಾಗುವ ಆನುವಂಶಿಕ ಕಾಯಿಲೆಯಾಗಿದೆ .ಇದು ಸಾಮಾನ್ಯವಾಗಿ ದೈಹಿಕ ಬೆಳವಣಿಗೆಯ ವಿಳಂಬಗಳು, ಸೌಮ್ಯದಿಂದ ಮಧ್ಯಮ ಬೌದ್ಧಿಕ ಅಂಗವೈಕಲ್ಯ ಮತ್ತು ಮುಖದ ವಿಶಿಷ್ಟ ಲಕ್ಷಣಗಳೊಂದಿಗೆ ಸಂಬಂಧ ಹೊಂದಿದೆ . ಡೌನ್ ಸಿಂಡ್ರೋಮ್ ಹೊಂದಿರುವ ಯುವ ವಯಸ್ಕರ ಸರಾಸರಿ ಬುದ್ಧಿಮತ್ತೆಯ ಪ್ರಮಾಣ ಶೇ.50 ಆಗಿದೆ, ಇದು 8 ಅಥವಾ 9 ವರ್ಷದ ಮಗುವಿನ ಮಾನಸಿಕ ಸಾಮರ್ಥ್ಯಕ್ಕೆ ಸಮನಾಗಿರುತ್ತದೆ, ಆದರೆ ಇದು ವ್ಯಾಪಕವಾಗಿ ಬದಲಾಗಬಹುದು. ಡೌನ್ ಸಿಂಡ್ರೋಮ್ ಸಂಭವನೀಯತೆಯು 20 ವರ್ಷದ ತಾಯಂದಿರಲ್ಲಿ 0.1% ರಿಂದ 45 ವರ್ಷ ವಯಸ್ಸಿನವರಲ್ಲಿ 3% ಕ್ಕೆ ಹೆಚ್ಚಾಗುತ್ತದೆ. ಗರ್ಭಾವಸ್ಥೆಯಲ್ಲಿ ಡೌನ್ ಸಿಂಡ್ರೋಮ್ ಅನ್ನು ಪ್ರಸವಪೂರ್ವ ತಪಾಸಣೆಯ ಮೂಲಕ ಗುರುತಿಸಬಹುದು ಮತ್ತು ನಂತರ ರೋಗನಿರ್ಣಯ ಪರೀಕ್ಷೆ ಅಥವಾ ಜನನದ ನಂತರ ನೇರ ವೀಕ್ಷಣೆ ಮತ್ತು ಆನುವಂಶಿಕ ಪರೀಕ್ಷೆಯ ಮೂಲಕ ಗುರುತಿಸಬಹುದು.