ಪ್ರಧಾನಿ ಮೋದಿ ತಿರುವನಂತಪುರಂನಲ್ಲಿ ವಿಝಿಂಜಮ್ ಅಂತಾರಾಷ್ಟ್ರೀಯ ಬಂದರನ್ನು ಲೋಕಾರ್ಪಣೆಗೊಳಿಸಿದರು. ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್ ಒಂದೇ ವೇದಿಕೆ ಹಂಚಿಕೊಂಡರು. ಇದು ಹಲವರ ನಿದ್ದೆಗೆಡಿಸಬಹುದು ಎಂದು ಮೋದಿ ವ್ಯಂಗ್ಯವಾಡಿದರು. ಅದಾನಿ ಯೋಜನೆಯನ್ನು ಕಮ್ಯುನಿಸ್ಟ್ ಮಂತ್ರಿ ಸ್ವಾಗತಿಸಿದ್ದಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ತರೂರ್ ಮೋದಿಯನ್ನು ಸ್ವಾಗತಿಸಿ ಟ್ವೀಟ್ ಮಾಡಿದ್ದರು.
ತಿರುವನಂತಪುರಂ(ಮೇ.02) ಪ್ರಧಾನಿ ನರೇಂದ್ರ ಮೋದಿ ಕೇರಳದ ತಿರುವನಂತಪುರಂನಲ್ಲಿ ವಿಝಿಂಜಮ್ ಅಂತಾರಾಷ್ಟ್ರೀಯ ಬಂದರನ್ನು ಲೋಕಾರ್ಪಣೆ ಗೊಳಿಸಿದ್ದಾರೆ. ತಿರುವನಂತಪುರಂ ಕಾರಣ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಕಾಂಗ್ರೆಸ್ ಸಂಸದ ಶಶಿ ತರೂರ್ ಹಾಜರಿದ್ದರೆ, ಇನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಂಡಿಯಾ ಒಕ್ಕೂಟದಲ್ಲಿ ಸಿಪಿಐ ಹಾಗೂ ಕಾಂಗ್ರೆಸ್ ಭಾಗವಾಗಿದ್ದರೂ ಕೇರಳದಲ್ಲಿ ಬದ್ಧವೈರಿಗಳು. ಆದರೆ ಮೋದಿ ಬಂದರು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಿಣರಾಯಿ ವಿಜಯನ್ ಹಾಗೂ ಶಶಿ ತರೂರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಇಬ್ಬರನ್ನು ಒಂದೇ ವೇದಿಕೆಯಲ್ಲಿ ನೋಡಿದ ಹಲವರಿಗೆ ಇಂದು ನಿದ್ದೆ ಬರುವುದಿಲ್ಲ ಎಂದು ಕಾಂಗ್ರೆಸ್ ಕಾಲೆಳೆದಿದ್ದಾರೆ.
ಹಲವರ ನಿದ್ದೆ ಕಸಿಯಲಿದೆ ಈ ಕಾರ್ಯಕ್ರಮ
ಪ್ರದಾನಿ ಮೋದಿ ತಮ್ಮ ಭಾಷಣದಲ್ಲಿ ಈ ಮಾತು ಹೇಳಿದ್ದಾರೆ. ನಮ್ಮ ಕೇರಳ ಮುಖ್ಯಮಂತ್ರಿಗೆ ಒಂದು ಮಾತು ಹೇಳಬಯಸುತ್ತೇನೆ, ನೀವು ಇಂಡಿಯಾ ಒಕ್ಕೂಟಗ ಪ್ರಮುಖ ಸ್ಥಂಭವಾಗಿದ್ದೀರಿ. ಶಶಿ ತರೂರ್ ಕೂಡ ಇದೇ ವೇದಿಕೆಯಲ್ಲಿದ್ದಾರೆ. ಈ ಕಾರ್ಯಕ್ರಮ ಹಲವರ ನಿದ್ದೆ ಕಸಿಯಲಿದೆ ಎಂದು ಮೋದಿ ಹೇಳಿದ್ದಾರೆ. ಇಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಆದರೆ ಶಶಿ ತರೂರ್ ವಿರುದ್ದ ಕೇರಳ ಕಾಂಗ್ರೆಸ್ ಗರಂ ಆಗಿದೆ.ಶಶಿ ತರೂರ್ ಮಾತುಗಳು, ಪ್ರತಿಕ್ರಿಯೆ ಕೇರಳ ಕಾಂಗ್ರೆಸ್‌ಗೆ ಮುಖಭಂಗ ತಂದಿತ್ತು. ಇದರ ನಡುವೆ ತರೂರ್, ಸಿಪಿಎಂ ನಾಯಕ, ಕೇರಳ ಮುಖ್ಯಮಂತ್ರಿ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಹಲವರ ನಿದ್ದೆ ಕಸಿಯಲಿದ ಎಂದ ಕಾಲೆಳೆದಿದ್ದಾರೆ.
ಕೋವಿಡ್ ಲಸಿಕೆ ಮೂಲಕ ಮೋದಿ ರಾಜತಾಂತ್ರಿಕತೆ ಹೊಗಳಿದ ಶಶಿ ತರೂರ್, ಕಾಂಗ್ರೆಸ್‌ಗೆ ಇರಿಸು ಮುರಿಸು
ಇದೇ ವೇಳೆ ಪ್ರಧಾನಿ ಮೋದಿ ಗುಜರಾತ್ ಜನರ ಕುರಿತು ತಮಾಷೆಯಾಗಿ ಮಾತನಾಡಿದ್ದಾರೆ. ಇಷ್ಟು ದೊಡ್ಡ ಬಂದರನ್ನು ಗೌತಮ್ ಅದಾನಿ ಕೇರಳದಲ್ಲಿ ಕಟ್ಟಿದ್ದಕ್ಕೆ ಗುಜರಾತ್ ಜನ ಅದಾನಿ ಜೊತೆ ಮುನಿಸಿಕೊಳ್ಳುತ್ತಾರೆ ಎಂದಿದ್ದಾರೆ. ರಾಹುಲ್ ಗಾಂಧಿಯನ್ನ ಟೀಕಿಸಿ ಅದಾನಿಯನ್ನ ಹೊಗಳಿದ ಮೋದಿ, ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರಾದ ಪಿಣರಾಯಿ ವಿಜಯನ್ ಹಾಗೂ ಶಶಿ ತರೂರ್ ಇಲ್ಲಿದ್ದಾರೆ. ಒಬ್ಬ ಕಮ್ಯುನಿಸ್ಟ್ ಮಂತ್ರಿ ಅದಾನಿ ನಮ್ಮ ಪಾಲುದಾರ ಅಂತ ಹೇಳ್ತಾರೆ. ಇದೇ ಬದಲಾವಣೆ ಅಂತ ಸ್ವಾಗತ ಭಾಷಣ ಮಾಡಿದ ವಿ.ಎನ್. ವಾಸವನ್ ಅವರ ಮಾತನ್ನ ಉಲ್ಲೇಖಿಸಿ ಮೋದಿ ವ್ಯಂಗ್ಯವಾಡಿದ್ರು. ಖಾಸಗಿ ಹೂಡಿಕೆಯನ್ನ ಕಮ್ಯುನಿಸ್ಟ್ ಮಂತ್ರಿ ಸ್ವಾಗತಿಸೋದು ಒಳ್ಳೆಯದು ಅಂತ ಮೋದಿ ಹೇಳಿದ್ರು.
ಬಂದರು ಲೋಕಾರ್ಪಣೆ ಕಾರ್ಯಕ್ರಮಕ್ಕೂ ಮೊದಲು ಶಶಿ ತರೂರ್ ಪ್ರಧಾನಿ ನರೇಂದ್ರ ಮೋದಿಯನ್ನು ಸ್ವಾಗತಿಸಿ ಟ್ವೀಟ್ ಮಾಡಿದ್ದರು. ದೆಹಲಿಯಲ್ಲಿ ಭಾರಿ ಮಳೆಯಿಂದ ವಿಮಾನ ಹಾರಾಟಗಳು ವಿಳಂಬವಾಗಿತ್ತು. ಹೀಗಾಗಿ ವಿಳಂಬ, ಅಡೆ ತಡೆ ನಡೆಯೂವ ಪ್ರಧಾನಿ ಮೋದಿ ಸ್ವಾಗತಿಸಲು ದೆಹಲಿಯಿಂದ ತಿರುವನಂತಪುರಂಕ್ಕೆ ಆಗಮಿಸಿದ ಶಶಿ ತರೂರ್, ಪ್ರಧಾನಿ ಮೋದಿಯನ್ನು ಸ್ವಾಗತಿಸಿದ್ದರು. ಈ ಕುರಿತು ಟ್ವವೀಟ್ ಮಾಡಿದ್ದರು. ದೆಹಲಿ ವಿಮಾನ ನಿಲ್ದಾಣದ ಎದುರಾದ ಸಮಸ್ಯೆಯಿಂದ ಕೊನೆಗೂ ಪ್ರದಾನಿ ಮೋದಿ ಸ್ವಾಗತಿಸಲು ತಿರುವನಂತಪುರನಲ್ಲಿ ಯಶಸ್ವಿಯಾಗಿ ಬಂದಿಳಿದೆ. ನನ್ನ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಯೋಜನೆ ಲೋಕಾರ್ಪಣೆಗೆ ಆಗಮಿಸಿದ ಮೋದಿಯನ್ನು ಸ್ವಾಗತಿಸಿದ್ದೇನೆ. ಈ ಯೋಜನೆಯಲ್ಲಿ ಪಾಲುದಾರನಾಗಿರುವುದು ಹೆಮ್ಮೆ ಇದೆ ಎಂದು ಶಶಿ ತರೂರ್ ಹೇಳಿದ್ದರು.
ಇತ್ತೀಚೆಗೆ ಶಶಿ ತರೂರ್ ಕೇರಳ ಸಿಎಂ ಪಿಣರಾಯಿ ವಿಜಯನ್ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದು ಕೇರಳ ಕಾಂಗ್ರೆಸ್‌ಗೆ ಇರಿಸು ಮುರಿಸು ತಂದಿತ್ತು. ಕೇರಳ ಸ್ಟಾರ್ಟ್ಅಪ್ ವಿಚಾರದಲ್ಲಿ ಶಶಿ ತರೂರ್ ಈ ಮಾತು ಹೇಳಿದ್ದರು. ಬಳಿಕ ಸಮರ್ಥನೆ ನೀಡಿದರೂ, ಕೇರಳ ಕಾಂಗ್ರೆಸ್ ಗರಂ ಆಗಿತ್ತು. ಮುಂದಿನ ವರ್ಷ ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಶಶಿ ತರೂರ್ ಒಂದೊಂದು ಮಾತುಗಳು ಪ್ರಮುಖವಾಗುತ್ತಿದೆ.


