ಕಾಂಗ್ರೆಸ್ ನಾಯಕ ಶಸಿ ತರೂರ್ ಇದೀಗ ಮತ್ತೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರ ನಡೆಯನ್ನು ಶ್ಲಾಘಿಸಿದ್ದಾರೆ. ಲಸಿಕೆ ಮೂಲಕ ಸಾಧಿಸಿದ ರಾಜತಾಂತ್ರಿಕ ನಡೆ ಭಾರತವನ್ನು ವಿಶ್ವ ನಾಯಕನಾಗಿ ಗಟ್ಟಿಗೊಳಿಸಿತು ಎಂದಿದ್ದಾರೆ. ಆದರೆ ಶಶಿ ತರೂರ್ ನಿಲುವು ಕಾಂಗ್ರೆಸ್‌ಗೆ ತೀವ್ರ ಇರಿಸು ಮುರಿಸು ತಂದಿದೆ.
ನವದೆಹಲಿ(ಮಾ.31) ಕಾಂಗ್ರೆಸ್ ನಾಯಕ ಶಶಿ ತರೂರ್ ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಹೊಗಳಿ ಸ್ವಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಮತ್ತೆ ಪ್ರಧಾನಿ ನರೇಂದ್ರ ಮೋದಿಯನ್ನು ಕೊಂಡಾಡಿದ್ದಾರೆ. ಇಷ್ಟೇ ಅಲ್ಲ ಕೋವಿಡ್ ವ್ಯಾಕ್ಸಿನ್ ಮೂಲಕ ಪ್ರಧಾನಿ ಮೋದಿ ಭಾರತವನ್ನು ವಿಶ್ವದ ಪ್ರಬಲ ನಾಯಕನಾಗಿ ಮಾತ್ರವಲ್ಲ, ಆರೋಗ್ಯ ಕಾಳಜಿ ಹಾಗೂ ರಾಜತಾಂತ್ರಿಕತೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶಶಿ ತರೂರ್ ಹೇಳಿದ್ದಾರೆ. ಶಶಿ ತರೂರ್ ಈ ನಿಲುವು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ತರಿಸಿದೆ. ಮೋದಿಯ ಪ್ರತಿ ಹೆಜ್ಜೆ ಅದರಲ್ಲೂ ಕೋವಿಡ್ ಲಸಿಕೆಯನ್ನು ಅತೀ ಹೆಚ್ಚು ವಿರೋಧಿಸಿದ ಏಕೈಕ ಪಕ್ಷ ಕಾಂಗ್ರೆಸ್. ಇದೀಗ ಕಾಂಗ್ರೆಸ್ ನಿಲುವಿಗೆ ವಿರುದ್ದವಾಗಿ ಹಿರಿಯ ನಾಯಕ ಶಶಿ ತರೂರ್ ನಿಲುವ ವ್ಯಕ್ತಪಡಿಸಿರುವುದೇ ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಶಸಿ ತೂರರ್ ಲಸಿಕೆ ಮೈತ್ರಿ ಕುರಿತು ಬರೆದ ಲೇಖನದಲ್ಲಿ ಭಾರತ, ಮೋದಿ ಸರ್ಕಾರದ ನಡೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಕೋವಿಡ್ ಸಿಲ್ವರ್ ಲೈನಿಂಗ್ ಫಾರ್ ಇಂಡಿಯಾ ಅನ್ನೋ ಶೀರ್ಷಿಕೆಯ ಈ ಲೇಖನದಲ್ಲಿ ಶಶಿ ತರೂರ್, ಕೋವಿಡ್ ಸಂಕಷ್ಟ ಕಾಲದಲ್ಲಿ ಭಾರತ ಲಸಿಕೆಯನ್ನು ಅಗತ್ಯ ರಾಷ್ಟ್ರಗಳಿಗೆ ರವಾನಿಸುವ ಮೂಲಕ ಆರೋಗ್ಯ ರಾಜತಾಂತ್ರಿಕತೆ ಸಾಧಿಸಿದ್ದಾರೆ. ಈ ಲಸಿಕೆ ಮೈತ್ರಿಯಿಂದ ಭಾರತ ಪ್ರಬಲ ವಿಶ್ವ ನಾಯಕನಾಗಿ ಛಾಪು ಮಾಡಿಸಿದೆ ಎಂದಿದ್ದಾರೆ. ಇದು ಜವಾಬ್ದಾರಿಯುತ ಜಾಗತಿಕ ನಾಯಕ, ಒಗ್ಗಟ್ಟಿನ ಸಂದೇಶದ ಜೊತೆ ಭ್ರಾತೃತ್ವ ಬಾಹು ಚಾಚಿದ ವಿಶೇಷ ಸಂದರ್ಭ ಎಂದು ಶಶಿ ತರೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಶಿ ತರೂರ್‌ಗೆ ಟಾಂಗ್ ಕೊಟ್ಟು ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಕೋವಿಡ್ ಅತ್ಯಂತ ಕ್ಲಿಷ್ಟ ಸಂದರ್ಭವಾಗಿತ್ತು. ಈ ಸಮಯದಲ್ಲಿ ಭಾರತ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು 100ಕ್ಕೂ ಹೆಚ್ಚು ದೇಶಗಳಿಗೆ ರವಾನಿಸಿತ್ತು. ಈ ಮೂಲಕ ಪ್ರಧಾನಿ ಮೋದಿ ಜಾಗತಿಕ ಸಾವಲುಗಳ ನಡುವೆ ಆರೋಗ್ಯ ರಾಜತಾಂತ್ರಿಕತೆ ಸಾಧಿಸಿದ್ದರು ಎಂದು ಶಶಿ ತರೂರ್ ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ವೈದ್ಯಕೀಯವಾಗಿ ಹಾಗೂ ಸಂಶೋಧನೆಯಲ್ಲಿ ಭಾರಿ ಮುಂದಿದ್ದ ದೇಶಗಳು ಲಸಿಕೆ ಉತ್ಪಾದಿಸಿ ಆಯಾ ದೇಶಕ್ಕೆ ಹಾಗೂ ಇತರ ದೇಶಗಳಿಗೆ ನೀಡಲು ಸಾಧ್ಯವಾಗಲಿಲ್ಲ. ಆದರೆ ಭಾರತ ಈ ಸಂದರ್ಭದಲ್ಲಿ ತನ್ನ ದೇಶದ ಜನತೆಗೆ ಉಚಿತವಾಗಿ ನೀಡಿ ಬಳಿಕ 100ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ವಿತರಣೆ ಮಾಡಿತ್ತು. ಭಾರತದ ಈ ನಿರ್ಧಾರವನ್ನು ಎಲ್ಲಾ ದೇಶಗಳು ಕೊಂಡಾಡಿತ್ತು. ಜೀವ ರಕ್ಷಕ ಎಂದು ಭಾರತವನ್ನು ಕರೆದಿತ್ತು. ಇದು ಭಾರತದವನ್ನು ಜವಾಬ್ದಾರಿಯುತ ಜಾಗತಿಕ ನಾಯಕನಾಗಿ ಗುರುತಿಸಿತು ಎಂದು ಶಶಿ ತರೂರ್ ಹೇಳಿದ್ದಾರೆ.
ಶಶಿ ತರೂರ್ ನೇರವಾಗಿ ಪ್ರಧಾನಿ ಮೋದಿ ಹೆಸರನ್ನು ಲೇಖನದಲ್ಲಿ ಉಲ್ಲೇಖಿಸಿಲ್ಲ. ಆದರೆ ಭಾರತದ ನಾಯಕತ್ವವನ್ನು ಪದೇ ಪದೇ ಹೊಗಳಿದ್ದಾರೆ.ಭಾರತದ ನಾಯಕತ್ವ, ನಡೆ, ಜಾಗತಿಕವಾಗಿ ನಾಯಕತ್ವವನ್ನು ಬಳಸಿಕೊಂಡ ರೀತಿ, ಆರೋಗ್ಯ ಕ್ಷೇತ್ರದ ಮೂಲಕ ಭಾರತ ತೆಗೆದುಕೊಂಡ ನಿರ್ಧಾರಗಳು ಜಾಗತಿಕವಾಗಿ ಬೀರಿದ ಪರಿಣಾಮದ ಕುರಿತು ಶಶಿ ತರೂರ್ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ಶಇದರ ಹೊರತಾಗಿ, ವ್ಯಾಕ್ಸಿನ್ ಮೈತ್ರಿ ಕಾರ್ಯಕ್ರಮವು ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಭಾವವನ್ನು ಸರಿದೂಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು. ಲಸಿಕೆ ರಾಜತಾಂತ್ರಿಕತೆಯು ಮೃದು ಶಕ್ತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಅವರು ಹೇಳಿದರು. ಆದಾಗ್ಯೂ, ಕೋವಿಡ್ -19 ರ ಎರಡನೇ ಅಲೆಯಲ್ಲಿ ಭಾರತವು ತನ್ನ ದೇಶೀಯ ಅಗತ್ಯಗಳಿಗೆ ಆದ್ಯತೆ ನೀಡಬೇಕಾಯಿತು, ಆದರೂ ಜಾಗತಿಕ ಮಟ್ಟದಲ್ಲಿ ಭಾರತದ ಲಸಿಕೆ ರಾಜತಾಂತ್ರಿಕತೆಯು ಪರಿಣಾಮಕಾರಿ ಮತ್ತು ಪ್ರಭಾವಶಾಲಿಯಾಗಿ ಉಳಿಯಿತು.
ಇತ್ತೀಚೆಗೆ ರಷ್ಯಾ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರ ತೆಗೆದುಕೊಂಡ ನಿಲುವಿಗೆ ಶಶಿ ತರೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶಶಿ ತರೂರ್ ಪದೇ ಪದೇ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಹೊಗಳುತ್ತಿದ್ದಾರೆ. ಇದು ಕಾಂಗ್ರೆಸ್‌ಗೆ ಇರಿಸು ಮುರಿಸು ತರುತ್ತಿದೆ. ಕೇರಳ ಕಾಂಗ್ರೆಸ್ ಶಶಿ ತೂರರ್ ವಿರುದ್ಧ ಅಸಮಾಧಾನಗೊಂಡಿದೆ.
'ದೆಹಲಿಯಲ್ಲಿ ಕಾಂಗ್ರೆಸ್ ಮೂರು ಸಲ ಸೋಲು; ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ: ಸಂಸದ ಶಶಿ ತರೂರ್
