ಪೊಲೀಸರನ್ನು ಜೀವಂತ ಸುಡುವುದೇ ಅವರ ಪ್ಲಾನ್ ಆಗಿತ್ತು. ಇದಕ್ಕಾಗಿ ಮೊದಲೇ ತಯಾರಿ ನಡೆಸಿದ್ದರು. ಇದು ಅಕ್ರಮ ಮದರಸಾ ತೆರವು ಕಾರ್ಯಾಚರಣೆ ಬಳಿಕ ನಡೆದ ಹಿಂಸಾಚಾರದಲ್ಲಿ ಗಾಯಗೊಂಡ ಮಹಿಳಾ ಪೊಲೀಸ್ ಪೇದೆಯ ನೋವಿನ ಮಾತಗಳು.
ಹಲ್ದ್ವಾನಿ(ಫೆ.09) ಹೈಕೋರ್ಟ್ ನಿರ್ದೇಶನದಂತೆ ಅಕ್ರಮ ಮದರಸಾ ತೆರವು ಕಾರ್ಯಾಚರಣೆಯನ್ನು ಉತ್ತರಖಂಡದ ನೈನಿತಾಲ್ ಮುನ್ಸಿಪಲ್ ಕಾರ್ಪೋರೇಶನ್ ಆರಂಭಿಸಿತ್ತು. ಆದರೆ ಈ ಕಾರ್ಯಾಚರಣೆಯಿಂದ ಭುಗಿಲೆದ್ದ ಹಿಂಸಾಚಾರದಲ್ಲಿ 50ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸ್ ವಾಹನಗಳು ಬೆಂಕಿಗೆ ಆಹುತಿಯಾಗಿದೆ. ಪೊಲೀಸ್ ಠಾಣೆ ಪುಡಿ ಪುಡಿಯಾಗಿದೆ. ಈ ಹಿಂಸಾಚಾರದಲ್ಲಿ ಬದುಕುಳಿದ ಮಹಿಳಾ ಪೊಲೀಸ್ ಪೇದೆ ಭೀಕರ ಘಟನೆಯನ್ನು ವಿವರಿಸಿದ್ದಾರೆ. ಪೊಲೀಸರನ್ನು ಜೀವಂತ ಸುಡಲು ಮದರಸಾ ಸಿಬ್ಬಂದಿಗಳು, ಮುಸ್ಲಿಮರು ಪೂರ್ವನಿಯೋಜಿತ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ನಾವು ಬದುಕಿ ಉಳಿದಿದ್ದೇ ಪವಾಡ ಎಂದು ಮಹಿಳಾ ಪೊಲೀಸ್ ಪೇದೆ ಹೇಳಿದ್ದಾರೆ.
ಅಕ್ರಮ ಮದರಸಾ ತೆರವು ಕಾರ್ಯಾಚರಣೆಗೆ ಹಲವು ದಿನಗಳ ಮೊದಲೆ ನೋಟಿಸ್ ನೀಡಲಾಗಿತ್ತು. ಹೀಗಾಗಿ ತೆರವು ಮಾಡಲು ಅಧಿಕಾರಿಗಳು, ಪೊಲೀಸರು ಆಗಮಿಸುತ್ತಾರೆ ಅನ್ನೋ ಮಾಹಿತಿ ಮುಸ್ಲಿಮ್ ಗಲಭೆಕೋರರಿಗೆ ಸ್ಪಷ್ಟವಾಗಿತ್ತು. ಹೀಗಾಗಿ ಕಾರ್ಯಾಚರಣೆಗೆ ಬಂದ ಪೊಲೀಸರು, ಅಧಿಕಾರಿಗಳನ್ನು ಜೀವಂತ ಸುಡಲು ಪೆಟ್ರೋಲ್ ಬಾಂಬ್ ಹಾಗೂ ಕಲ್ಲುಗಳನ್ನು ಶೇಖರಿಸಿಡಲಾಗಿತ್ತು ಎಂದು ಮಹಿಳಾ ಪೊಲೀಸ್ ಪೇದೆ ಹೇಳಿದ್ದಾರೆ.
ಅಕ್ರಮ ಮದರಸ ಧ್ವಂಸದಿಂದ ಉತ್ತರಖಂಡದಲ್ಲಿ ಭಾರಿ ಹಿಂಸಾಚಾರ, ಕಂಡಲ್ಲಿ ಗುಂಡು ಆದೇಶ, ನಾಲ್ವರು ಸಾವು!
ಕಾರ್ಯಾಚರಣೆ ನಡೆಯುತ್ತಿರುವಾಗಲೇ ನಮ್ಮ ಮೇಲೆ ಕಲ್ಲುಗಳು ತೂರಿಬಂತು. ಅಧಿಕಾರಿಗಳು, ಪೊಲೀಸರು ಸೇರಿ 50 ಮಂದಿ ಇದ್ದೆವು. ಆದರೆ 250ಕ್ಕೂ ಹೆಚ್ಚ ಮಂದಿ ನಮ್ಮ ಮೇಲೆ ಕಲ್ಲು ತೂರಿದ್ದರು. ಬಳಿಕ ಪೆಟ್ರೋಲ್ ಬಾಂಬ್ ಎಸೆದರು. ಜೀವ ರಕ್ಷಣೆಗೆ ನಾವು ಓಡಿದೆವು. 15 ರಿಂದ 10 ಪೊಲೀಸರು ಒಂದು ಮನೆಯೊಳಗೆ ಸೇರಿದೆವು. ಆದರೆ ಮನೆಯ ಮೇಲೆ ಕಲ್ಲುತೂರಾಟ ಆರಂಭಗೊಂಡಿತು. ಪೆಟ್ರೋಲ್ ಬಾಂಬ್ ಎಸೆದರು. ಬಾಗಿಲಿಗೆ ಪೆಟ್ರೋಲ್ ಸುರಿದು ಜೀವಂತ ಸುಡುವ ಪ್ರಯತ್ನ ಮಾಡಿದರು.
ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು. ಲೋಕೇಶನ್ ಕಳುಹಿಸಿದೆವು. ಹೀಗಾಗಿ ಪೊಲೀಸರು ಆಗಮಿಸಿ ನಮ್ಮನ್ನ ರಕ್ಷಿಸಿದರು. ಈ ವೇಳೆ ಮನೆ ಕಟ್ಟಡದ ಮೇಲಿನಿಂದ ಕಲ್ಲು ತೂರಾಟ ನಡೆಸಿದರು. ಹಲವು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ. ಕೆಲವರು ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಮಹಿಳಾ ಪೊಲೀಸ್ ಪೇದೆ ಹೇಳಿದ್ದಾರೆ.
ಮುಸ್ಲಿಮ್ ಉದ್ರಿಕ್ತರ ಗುಂಪಿನ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕಾರಣ ಮನೆ, ಕಟ್ಟಡ, ಗಲ್ಲಿ, ಅಂಗಡಿ ಸೇರಿದಂತೆ ಎಲ್ಲಡೆಯಿಂದ ಏಕಕಾಲಕ್ಕೆ ದಾಳಿ ಆರಂಭಗೊಂಡಿತ್ತು ಎಂದು ಮಹಿಳಾ ಪೊಲೀಸ್ ಪೇದೆ ಹೇಳಿದ್ದಾರೆ.
ಪೊಲೀಸರ ಜೀವಂತ ಸುಡಲು ಪೂರ್ವನಿಯೋಜಿತ ದಾಳಿ, ಮದರಸಾ ತೆರವು ಗಲಭೆ ಕುರಿತು ಡಿಸಿ ಸ್ಫೋಟಕ ಮಾಹಿತಿ!
ಹಲ್ದ್ವಾನಿಯಲ್ಲಿ ಹೆಚ್ಚುವರಿ ಪೊಲೀಸ್ ನಿಯೋಜಿಸಲಾಗಿದೆ. ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಇಷ್ಟೇ ಅಲ್ಲ ಕಂಡಲ್ಲಿ ಗುಂಡು ಆದೇಶ ನೀಡಲಾಗಿದೆ. ದೇವಭೂಮಿಯಾಗಿದ್ದ ಉತ್ತರಖಂಡದಲ್ಲಿ ಸಮುದಾಯಗಳ ನಡುವಿನ ಜನಸಂಖ್ಯೆ ಏರಿಳಿತ ಮಹತ್ತರ ಗಲಭೆಗೆ ಕಾರಣವಾಗುತ್ತಿದೆ ಅನ್ನೋ ಆರೋಪ ಮೇಲಿಂದ ಮೇಲೆ ನೀಜವಾಗುತ್ತಿದೆ.
