Asianet Suvarna News Asianet Suvarna News

ಪೊಲೀಸರ ಜೀವಂತ ಸುಡಲು ಪೂರ್ವನಿಯೋಜಿತ ದಾಳಿ, ಮದರಸಾ ತೆರವು ಗಲಭೆ ಕುರಿತು ಡಿಸಿ ಸ್ಫೋಟಕ ಮಾಹಿತಿ!

ಉತ್ತರಖಂಡ ದೇವಭೂಮಿಯ ಸ್ವರೂಪ ಬದಲಾಗುತ್ತಿದೆ ಅನ್ನೋ ಆರೋಪಕ್ಕೆ ಇದೀಗ ನಡದ ಹಿಂಸಾಚಾರಗಳು ಪೂರಕ ದಾಖಲೆ ಒದಗಿಸುತ್ತಿದೆ. ಅಕ್ರಮ ಮದರಸಾ ತೆರವಿನ ಬಳಿಕ ನಡೆದ ಹಿಂಸಾಚಾರದ ಕುರಿತು ನೈನಿತಾಲ್ ಜಿಲ್ಲಾಧಿಕಾರಿ ಸ್ಫೋಟಕ ಮಾಹಿತಿ ನೀಡಿದ್ದರೆ. ಇದು ಮುಸ್ಲಿಮರು ನಡೆಸಿದ ಪೂರ್ವನಿಯೋಜಿತ ದಾಳಿಯಾಗಿದೆ. ಪೊಲೀಸರನ್ನು ಜೀವಂತ ಸುಡಲು ಎಲ್ಲಾ ತಯಾರಿ ನಡೆಸಲಾಗಿತ್ತು ಎಂದಿದ್ದಾರೆ. ಜಿಲ್ಲಾಧಿಕಾರಿ ಸುದ್ದಿಗೋಷ್ಠಿ ಕುರಿತ ಸ್ಫೋಟಕ ಮಾಹಿತಿ ಇಲ್ಲಿದೆ.
 

Uttarakhand Haldwani violence pre Planned Attack says Nainital District Magistrate ckm
Author
First Published Feb 9, 2024, 11:45 AM IST

ಹಲ್ದ್ವಾನಿ(ಫೆ.09) ಉತ್ತರ ಪ್ರದೇಶದ ಹಲ್ದ್ವಾನಿಯಲ್ಲಿನ ಅಕ್ರಮ ಮದರಸಾ ತೆರವು ಕಾರ್ಯಾಚರಣೆಯಿಂದ ಸೃಷ್ಟಿಯಾಗಿರುವ ಹಿಂಸಾಚಾರ ಆತಂಕ ಛಾಯೆ ಮೂಡಿಸಿದೆ. ಕಾರಣ ಹೈಕೋರ್ಟ್ ನಿರ್ದೇಶನದಂತೆ ಅಕ್ರಮ ಮದರಸಾ ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಬಳಿಕ ನಡೆದ ಹಿಂಸಾಚಾರ ಒಂದು ಸಮುದಾಯ ನಡೆಸಿದ ಪೂರ್ವನಿಯೋಜಿತ ದಾಳಿ ಎಂದು ನೈನಿತಾಲ್ ಜಿಲ್ಲಾಧಿಕಾರಿ ವಂದನಾ ಸಿಂಗ್ ಹೇಳಿದ್ದಾರೆ. ಗಲಭೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ವಂದನಾ ಸಿಂಗ್, ಪೊಲೀಸರನ್ನು ಜೀವಂತ ಸುಡಲು ಪ್ಲಾನ್ ಮಾಡಲಾಗಿತ್ತು. ಮುಸ್ಲಿಮರು ತಮ್ಮ ಮನೆಯ ಮೇಲೆ, ಕಟ್ಟಡದ ಮೇಲೆ ಕಲ್ಲು, ಪೆಟ್ರೋಲ್ ಬಾಂಬ್ ಶೇಖರಿಸಿಟ್ಟಿದ್ದರು ಎಂದು ವಂದನಾ ಸಿಂಗ್ ಹೇಳಿದ್ದಾರೆ.

ಹೈಕೋರ್ಟ್ ನಿರ್ದೇಶನದಂತೆ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಪೈಕಿ ಅಕ್ರಮವಾಗಿ ಕಟ್ಟಿರುವ ಮದರಸಾವನ್ನು ತೆರವು ಮಾಡಲು ಅದಿಕಾರಿಗಳು ಪೊಲೀಸರ ಜೊತೆ ಆಗಮಿಸಿದ್ದಾರೆ. ಆದರೆ ಹಲವು ದಿನಗಳ ಮೊದಲೇ ಅಕ್ರಮ ಕಟ್ಟಡಳಿಗೆ ನೋಟಿಸ್ ನೀಡಲಾಗಿದೆ. ಏಕಾಏಕಿ ಕಾರ್ಯಾಚರಣೆ ನಡೆಸಿಲ್ಲ. ನೋಟಿಸ್ ಪಡೆದ ಮದರಸಾ ಹಾಗೂ ಮುಸ್ಲಿಮರು ಕಾರ್ಯಾಚರಣೆ ವಿರುದ್ಧ ದಾಳಿ ನಡೆಸಲು ಸಜ್ಜಾಗಿದ್ದರು ಎಂದು ವಂದನಾ ಸಿಂಗ್ ಹೇಳಿದ್ದಾರೆ.

ಅಕ್ರಮ ಮದರಸ ಧ್ವಂಸದಿಂದ ಉತ್ತರಖಂಡದಲ್ಲಿ ಭಾರಿ ಹಿಂಸಾಚಾರ, ಕಂಡಲ್ಲಿ ಗುಂಡು ಆದೇಶ, ನಾಲ್ವರು ಸಾವು!

ಇದಕ್ಕಾಗಿ ಮುಸ್ಲಿಮರು ಪೆಟ್ರೋಲ್ ಬಾಂಬ್‌ಗಳನ್ನು ತಂದಿಟ್ಟಿದ್ದರು. ಕಲ್ಲುಗಳನ್ನು ಶೇಖರಿಸಿದ್ದರು. ಪೊಲೀಸರ ಕಾರ್ಯಾಚರಣೆ ದಿನಾಂಕ ಮಾತ್ರ ತಿಳಿದಿರಲಿಲ್ಲ. ಅಧಿಕಾರಿಗಳು ಫೆಬ್ರವರಿ 8 ರಂದು ಜೆಸಿಬಿ ಹಾಗೂ 50 ಪೊಲೀಸರ ಮೂಲಕ ಸ್ಥಳಕ್ಕೆ ತೆರಳಿ ಅಕ್ರಮ ಮದರಸಾ ತೆರವು ಮಾಡಲಾಗಿತ್ತು. ತೆರವು ಕಾರ್ಯಾಚರಣೆ ನಡೆದ ಅರ್ಧ ಗಂಟೆಗಳ ಕಾಲ ಎಲ್ಲವೂ ಶಾಂತವಾಗಿತ್ತು. ಆಧರೆ ಅರ್ಧಗಂಟೆಗಳ ಬಳಿ 250 ರಿಂದ 300 ಮಂದಿ ದಿಢೀರ್ ಆಗಮಿಸಿ ದಾಳಿ ನಡೆಸಿದ್ದರು. ಇದು ಪೂರ್ವನಿಯೋಜಿತ ದಾಳಿಯಾಗಿತ್ತು ಎಂದು ವಂದನಾ ಸಿಂಗ್ ಹೇಳಿದ್ದಾರೆ.

ಶೇಖರಿಸಿಟ್ಟಿದ್ದ ಪೆಟ್ರೋಲ್ ಬಾಂಬ್, ಕಲ್ಲುಗಳನ್ನು ಪೊಲೀಸರು ಹಾಗೂ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳ ಮೇಲೆ ತೂರಿಸಿದ್ದಾರೆ. ಪೊಲೀಸ್ ಠಾಣೆ ಮೇಲೂ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಪೊಲೀಸ್ ವಾಹನಗಳು ಹೊತ್ತಿ ಉರಿದಿದೆ. 50ಕ್ಕೂ ಹೆಚ್ಚು ಪೊಲೀಸರು, ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ವಂದನಾ ಸಿಂಗ್ ಹೇಳಿದ್ದಾರೆ.

ಅಕ್ರಮ ಮದರಸಾ ಧ್ವಂಸ ಮಾಡಿದ ಬೆನ್ನಲ್ಲೇ ಪೊಲೀಸ್‌ ಪಡೆ ಮೇಲೆ ಕಲ್ಲು ತೂರಿದ ಮುಸ್ಲಿಮರು!
 

Follow Us:
Download App:
  • android
  • ios