ಮನೆಯ ಪಕ್ಕದಲ್ಲಿ ಜೋಪಡಿಯಲ್ಲಿ‌ ವಾಸ ಇದ್ದ ಕುಟುಂಬ. ಮನೆ ಗೋಡೆ ಜೋಪಡಿ ಮೇಲೆ ಕುಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. 

ಧಾರವಾಡ(ಜು.26):  ಸತತವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಮನೆ ಗೋಡೆ ಕುಸಿದ ಬಿದ್ದ ಪರಿಣಾಮ ಮೂವರು ಗಾಯಗೊಂಡ ಘಟನೆ ಧಾರವಾಡ ತಾಲೂಕಿನ ವೆಂಕಟಾಪುರ ಗ್ರಾಮದ ಶಿದ್ದರ ಕಾಲೋನಿಯಲ್ಲಿ ಇಂದು(ಶುಕ್ರವಾರ) ನಡೆದಿದೆ.

ಗೋಡೆ ಬಿದ್ದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಯಲ್ಲಪ್ಪ ರಾಮಣ್ಣ ಇಪ್ಪಿಯವರ (40), ಹನುಮವ್ವ ಇಪ್ಪಿಯವರ (35) ‌ಹಾಗೂ ಯಲ್ಲಕ್ಕ ಇಪ್ಪಿಯವರ ಗಾಯಗೊಂಡವರು. 

ಚಿಕ್ಕಮಗಳೂರು: ಭಾರೀ ಮಳೆಗೆ ಧರೆಗುರುಳಿದ ಬೃಹತ್‌ ಮರ, ಪವಾಡ ಸದೃಶ ರೀತಿಯಲ್ಲಿ ಚಾಲಕರು ಪಾರು..!

ಮನೆಯ ಪಕ್ಕದಲ್ಲಿ ಜೋಪಡಿಯಲ್ಲಿ‌ ವಾಸ ಇದ್ದ ಕುಟುಂಬ. ಮನೆ ಗೋಡೆ ಜೋಪಡಿ ಮೇಲೆ ಕುಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಧಾರವಾಡ ಗರಗ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.