News Hour: ದೆಹಲಿಯಲ್ಲೂ ಪ್ರತಿಧ್ವನಿಸಿದ ಮುಡಾ ಮತ್ತು ವಾಲ್ಮೀಕಿ ಹಗರಣ..!

ರಾಜ್ಯ ಸರ್ಕಾರದ ಮುಡಾ ಹಾಗೂ ವಾಲ್ಮೀಕಿ ಹಗರಣದ ವಿವಾದ ದೆಹಲಿಯಲ್ಲೂ ಪ್ರತಿಧ್ವನಿಸಿದೆ. ಶುಕ್ರವಾರ ಬಿಜೆಪಿ ಹಾಗೂ ಜೆಡಿಎಸ್‌ ಈ ಕುರಿತಾಗಿ ದೆಹಲಿಯಲ್ಲೂ ಪ್ರತಿಭಟನೆ ನಡೆದಿದೆ.
 

First Published Jul 26, 2024, 11:18 PM IST | Last Updated Jul 26, 2024, 11:18 PM IST

ಬೆಂಗಳೂರು (ಜು.26): ರಾಜ್ಯ ಕಾಂಗ್ರೆಸ್‌ ಸರ್ಕಾರದ ಮುಡಾ ಹಾಗೂ ವಾಲ್ಮೀಕಿ ನಿಗಮ ಹಗರಣ ದೆಹಲಿಯಲ್ಲೂ ಪ್ರತಿಧ್ವನಿಸಿದೆ. ಸಂಸತ್‌ ಭವನ ಎದುರು ಬಿಜೆಪಿ- ಜೆಡಿಎಸ್​ ಸಂಸದರು ಜಂಟಿಯಾಗಿ ಪ್ರತಿಭಟನೆ ನಡೆಸಿದ್ದಾರೆ. ಮುಡಾ, ವಾಲ್ಮೀಕಿ ಹಗರಣ ಸಿಬಿಐ ತನಿಖೆಗೆ ನೀಡುವಂತೆ ಆಗ್ರಹಿಸಿದ್ದಾರೆ.

ಇದಲ್ಲದೆ, ರಾಜ್ಯಸಭೆ, ಲೋಕಸಭೆಯಲ್ಲೂ ವಾಲ್ಮೀಕಿ ಹಗರಣ ಸದ್ದು ಮಾಡಿದೆ. ಲೋಕಸಭೆಯಲ್ಲಿ ಸಂಸದ ಪಿಸಿ ಮೋಹನ್ ಹಗರಣ ಪ್ರಸ್ತಾಪಿಸಿದರೆ,  ರಾಜ್ಯಸಭೆಯಲ್ಲಿ ಸಂಸದ ಈರಟ್ಟ ಕಡಾಡಿ ಹಗರಣ ಪ್ರಸ್ತಾಪ ಮಾಡಿದ್ದಾರೆ.

ನನ್ನ ಜಾಗ ಡಿನೋಟಿಫಿಕೇಷನ್ ಮಾಡಿ ಅಂಥ ನಿಂಗಪ್ಪ ಸ್ವರ್ಗದಿಂದ ಅರ್ಜಿ ಕೊಟ್ರಾ, ಸಿದ್ದರಾಮಯ್ಯ ಅವರೇ: ಎಚ್‌ಡಿಕೆ ಪ್ರಶ್ನೆ

ಉಭಯ ಕಲಾಪದಲ್ಲಿ ವಾಲ್ಮೀಕಿ ಕಿಚ್ಚು ಹೆಚ್ಚುತ್ತಿದ್ದಂತೆ, ಕಾಂಗ್ರೆಸ್​ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ  ಬಂದ್ಮೇಲೆ ನಿತ್ಯ ಅಕ್ರಮ ಹೊರ ಬರ್ತಿದೆ. ಸರ್ಕಾರದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ  ಪಂಗಡಕ್ಕೆ ಮೀಸಲಿಟ್ಟ ಹಣ ದುರ್ಬಳಕೆ’ ಆಗಿದೆ ಎಂದು ಈರಣ್ಣ ಕಡಾಡಿ ದೂರಿದ್ದಾರೆ.