ಕೋರಮಂಗಲ ಪಿಜಿ ಮರ್ಡರ್: ಭಯಾನಕ ಸಿಸಿಟಿವಿ ದೃಶ್ಯಾವಳಿ ಲಭ್ಯ!
ಬೆಂಗಳೂರಿನ ಕೋರಮಂಗಲದ ಪಿಜಿಯಲ್ಲಿ ಬಿಹಾರ ಯುವತಿ ಕೃತಿ ಕುಮಾರಿ ಕೊಲೆ ಮಾಡಿದ ಭೀಕರ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಬೆಂಗಳೂರು(ಜು.26): ಕೋರಮಂಗಲದ ಕೃತಿ ಕುಮಾರಿ ಲೈವ್ ಮರ್ಡರ್ ವಿಡಿಯೋ ವೈರಲ್ ಆಗಿದೆ. ಹೌದು, ಆರೋಪಿ ಅಭಿಷೇಕ್ ಕೃತಿ ಕುಮಾರಿಯನ್ನ ಕೊಲೆ ಮಾಡುವ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಬೆಂಗಳೂರಿನಲ್ಲಿ ಜು.23 ರಂದು ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಕೊಲೆ ನಡೆದಿತ್ತು. ರಾತ್ರಿ 11.13 ನಿಮಿಷಕ್ಕೆ ಆರೋಪಿ ಅಭಿಷೇಕ್ ಪಿಜಿಗೆ ಬಂದು ಕೃತಿ ಕುಮಾರಿ ಇದ್ದ ರೂಮ್ ಬಾಗಿಲು ಬಡಿದಿದ್ದಾನೆ. ಈ ವೇಳೆ ಡೋರ್ ಓಪನ್ ಮಾಡುತ್ತಿದ್ದಂತೆ ಚಾಕುವಿನಿಂದ ಇರಿಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಕೃತಿ ಕುಮಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ರೂ, ಬಿಡದೇ ಹಲವು ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ಸದ್ಯ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಅಭಿಷೇಕ್ ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿ ಅಭಿಷೇಕ್ ಬಟ್ಟೆ ಬದಲಿಸಿಕೊಂಡು ಪರಾರಿಯಾಗಿದ್ದಾನೆ. ಅಭಿಷೇಕ್ ಭೂಪಾಲ್ ಗೆ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಕೋರಮಂಗಲ ಪೊಲೀಸರು ಭೂಪಾಲ್ ಗೆ ಆರೋಪಿಯನ್ನ ಅರೆಸ್ಟ್ ಮಾಡಲು ತೆರಳಿದ್ದಾರೆ.
ಬೆಂಗಳೂರಿಗೆ ಸರಬರಾಜು ಆಗುತ್ತಿದೆಯೇ ನಾಯಿ ಮಾಂಸ? ರಾಜಸ್ಥಾನದಿಂದ ಬಂದ 4000 ಕೆಜಿ ಉದ್ದಬಾಲದ ಮಾಂಸ ಯಾವುದು?
ಎರಡೇ ನಿಮಿಷದಲ್ಲಿ ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಪಿಜಿಯ ಗೇಟಿನ ಒಳಗೆ ಹೋದ ಆರೋಪಿ ಅಭಿಷೇಕ್ ಕೃತಿ ಕುಮಾರಿ ಇರುವ ಕೋಣೆಯ ಬಾಗಿಲು ಬಡಿದಿದ್ದಾನೆ. ಹೊರಗೆ ಬಂದು ನೋಡಿದ ಕೃತಿ ಕುಮಾರಿಯ ಜುಟ್ಟು ಹಿಡಿದುಕೊಂಡು ಚಾಕುವಿನಿಂದ ಚುಚ್ಚಲು ಮುಂದಾಗಿದ್ದಾನೆ. ಆಗ ಕೃತಿ ಕುಮಾರಿ ಸಹಾಯಕ್ಕಾಗಿ ಕೂಗಾಡಿದ್ದಾರೆ. ಆದರೆ, ಆಗಂತುಕನ ಕೈಯಲ್ಲಿ ಚಾಕು ಇದ್ದುದ್ದರಿಂದ ಯಾರೊಬ್ಬರೂ ಸಹಾಯಕ್ಕೆ ಬಂದಿಲ್ಲ. ಆದರೆ, ತನ್ನ ಪ್ರಾಣ ಉಳಿಸಿಕೊಳ್ಳಲು ಯುವತಿ ಸಾಕಷ್ಟು ಪ್ರಯತ್ನ ಮಾಡಿದ್ದಾಳೆ. ಆದರೆ, ಬಲಿಷ್ಠವಾಗಿದ್ದ ಆರೋಪಿ ಆಕೆಯ, ಮೈ-ಕೈಗೆಲ್ಲಾ ಚಾಕುವಿನಿಂದ ಚುಚ್ಚಿದ್ದಾನೆ. ಆಗ ನೋವಿನಿಂದ ಒದ್ದಾಡುತ್ತಿದ್ದ ಕೃತಿ ಕುಮಾರಿಯ ಕುತ್ತಿಗೆಯನ್ನು ಮೂರ್ನಾಲ್ಕು ಬಾರಿ ಸೀಳಿದ್ದಾನೆ. ಇದರಿಂದ ಆತನಿಂದ ರಕ್ಷಣೆ ಮಾಡಿಕೊಳ್ಳಲು ವಿರೋಧಿಸುತ್ತಲೇ ಆಕೆಯ ಧ್ವನಿ ಬಾಯಿಂದ ಬರದೇ ಕುತ್ತಿಗೆಯಿಂದ ರಕ್ತ ಚಿಮ್ಮಿದೆ. ಈಕೆಯ ಸಾವು ಖಚಿತ ಎಂದು ಗ್ಯಾರಂಟಿಯಾದ ನಂತರ ಕೃತಿ ಕುಮಾರಿಯನ್ನು ಬಿಟ್ಟು ಅಲ್ಲಿಂದ ಪರಾರಿ ಆಗಿದ್ದಾನೆ.
ಇನ್ನು ಆರೋಪಿ ಕೃತಿ ಕುಮಾರಿಯನ್ನು ಕೇವಲ 2 ನಿಮಿಷದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕತ್ತು, ಎದೆ ಹೊಟ್ಟೆ ಭಾಗ ಸೇರಿ ಹಲವು ಕಡೆ ಇರಿದಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಕೃತಿ ಕುಮಾರಿ ಒದ್ದಾಡಿದ್ದಾಳೆ. ರಕ್ತದ ಮಡುವಿನಲ್ಲಿದ್ದ ಕೃತಿ ಕುಮಾರಿ ಸಹಾಯಹಸ್ತ ಚಾಚಿದ್ರೂ ಪಿಜಿಯಲ್ಲಿದ್ದ ಮೂರು ಯುವತಿಯರು ಮಾತ್ರ ಹತ್ತಿರ ಬಂದಿಲ್ಲ. ಪೀಜಿಯಲ್ಲಿದ್ದ ಯುವತಿಯರು ಮಾತ್ರ ಅಕ್ಷರಶಃ ಮಾನವೀಯತೆಯನ್ನೇ ಮರೆತಂತೆ ವರ್ತನೆ ಮಾಡಿದ್ದಾರೆ. ಕೊನೆಗೆ ಆಂಬುಲೆನ್ಸ್‌ಗೆ ಕರೆ ಮಾಡಿಯಾದರೂ ಜೀವ ಉಳಿಸುವ ಪ್ರಯತ್ನ ಮಾಡಬಹುದಿತ್ತು. ಇದನ್ನೂ ಮಾಡದೆ ಸುಮ್ಮನೆ ಮೊಬೈಲ್ ಹಿಡಿದುಕೊಂಡು ನಿಂತಿದ್ದಾರೆ.
ಬೆಂಗಳೂರಲ್ಲಿ ಪ್ರತಿ ಕೆ.ಜಿ ಮಟನ್‌ಗೆ 750 ರೂ., ಆದರೆ ರಾಜಸ್ಥಾನದಿಂದ ತರಿಸಿಕೊಳ್ಳೋ 450 ರೂ. ಮಾಂಸ ಯಾವುದು?
ರಕ್ತ ಸೋರುತ್ತಿದಾಗ ಕೈ ಚಾಚಿ ಕೃತಿ ಕುಮಾರಿ ಕಾಪಾಡಿ ಅಂತ ಕರೆಯುತ್ತಿದ್ರೂ ಯುವತಿಯರು ಮಾತ್ರ ಹತ್ತಿರ ಕೂಡ ಹೋಗಿಲ್ಲ. ಕೈಯಲ್ಲಿ ಮೊಬೈಲ್ ಫೋನ್ ನೋಡ್ತಾ ಮೆಟ್ಟಿಲ ಮೇಲಿಂದ ಯುವತಿಯರು ಹೋಗಿದ್ದಾರೆ. ಕರುಣೆಯೇ ಇಲ್ಲದಂತೆ ಪಿಜಿ ಯುವತಿಯರು ವರ್ತಿಸಿದ್ದಾರೆ. ಗಾಬರಿಯಲ್ಲಿ ಏನು ಮಾಡದೇ ಕೃತಿ ಕುಮಾರಿ ಬಳಿಯು ಹೋಗದೇ ಯುವತಿಯರು ನೋಡ್ತಾ ನಿಂತಿದ್ದರು. ಈ ಎಲ್ಲಾ ದೃಶ್ಯಗಳು ಪಿಜಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.