ತಾಲಿಬಾನಿಗಳ ನಿಯಮ ಪಾಲಿಸದ ಭಾರತೀಯ ಪ್ರಸಿದ್ಧ ಲೇಖಕಿ ಗುಂಡಿಕ್ಕಿ ಹತ್ಯೆ!

ಆಕೆ ಪ್ರಸಿದ್ಧ ಭಾರತೀಯ ಲೇಖಕಿ, ಅಫ್ಘಾನಿಸ್ತಾನ ಮೂಲದ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಆಕೆ , ತಾಲಿಬಾನಿಗಳ ನಿಯಮಗಳನ್ನು ಪಾಲಿಸಲು ನಿರಾಕರಿಸಿದ್ದಳೆಂಬ ಕಾರಣಕ್ಕಾಗಿ ಹತ್ಯೆ ಮಾಡಲಾಯ್ತು.

Reason behind Taliban shot dead Indian Bengali author Sushmita Banerjee gow

ಆಕೆ ಪ್ರಸಿದ್ಧ ಭಾರತೀಯ ಲೇಖಕಿ, ಕಲ್ಕತ್ತಾದಲ್ಲಿ ಉದ್ಯಮಿಯಾಗಿದ್ದ ಅಫ್ಘಾನಿಸ್ತಾನ ಮೂಲದ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಆಕೆ , ತಾಲಿಬಾನಿಗಳ ನಿಯಮಗಳನ್ನು ಪಾಲಿಸಲು ನಿರಾಕರಿಸಿದ್ದಳೆಂಬ ಕಾರಣಕ್ಕಾಗಿ 2013 ರಲ್ಲಿ ಗುಂಡಿಕ್ಕಿ ಕೊಲ್ಲಲಾಯ್ತು. ಆಕೆಯೇ ಸುಸ್ಮಿತಾ ಬ್ಯಾನರ್ಜಿ. ಈಕೆಯ ಜೀವನಗಾಥೆಯೇ ಒಂದು ರೋಚಕ ಕಥೆ.

ಕಾಬುಲಿವಾಲಾರ ಬೆಂಗಾಲಿ ಪತ್ನಿ (ಕಾಬುಲಿವಾಲಾರ್ ಬಂಗಾಲಿ ಬೌ) ಎಂಬ ಪ್ರಸಿದ್ಧ ಕೃತಿಯನ್ನು ಬರೆದಿದ್ದಳು. ಇದು ಅಫ್ಘಾನಿಸ್ತಾನದ ವಿವಾಹದ ಅನುಭವಗಳು, ಅಲ್ಲಿನ ಜೀವನ, ಮತ್ತು ತಾಲಿಬಾನಿಗಳ ಆಳ್ವಿಕೆಯನ್ನು ಆಧರಿಸಿದ ಕೃತಿಯಾಗಿದೆ. 50 ನೇ ವಯಸ್ಸಿನಲ್ಲಿ ಶಂಕಿತ ತಾಲಿಬಾನ್ ಉಗ್ರಗಾಮಿಗಳು 2013 ರ ಸೆಪ್ಟೆಂಬರ್ ನಲ್ಲಿ  ಅಫ್ಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದಲ್ಲಿರುವ ತನ್ನ ಮನೆಯ ಹೊರಗೆ ಗುಂಡಿಗೆ ಬಲಿಯಾದಳು.

ಕೊಲ್ಕತ್ತಾದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರು. ತಂದೆ ನಾಗರಿಕ ರಕ್ಷಣಾ ವಿಭಾಗದಲ್ಲಿದ್ದರೆ ತಾಯಿ ಗೃಹಿಣಿಯಾಗಿದ್ದರು. ನಾಲ್ವರು ಮಕ್ಕಳಲ್ಲಿ ಈಕೆ ಒಬ್ಬಳೇ ಹೆಣ್ಣು ಮಗುವಾಗುದ್ದಳು.

ಕೊಲ್ಕತ್ತಾದಲ್ಲಿ ರಂಗಭೂಮಿಯ ರಿಹರ್ಸಲ್‌ ಸಮಯದಲ್ಲಿ ತನ್ನ  ಪತಿ ಅಫ್ಘಾನ್ ಉದ್ಯಮಿ ಜನಬಾಜ್ ಖಾನ್ ನನ್ನು  ಭೇಟಿಯಾಗಿ ಪ್ರೀತಿಯಲ್ಲಿ ಬಿದ್ದಳು. ಕೋಲ್ಕತ್ತಾದಲ್ಲಿ ರಹಸ್ಯವಾಗಿ ಮದುವೆಯಾದ ಬಳಿಕ ಪೋಷಕರು ವಿರೋಧಿಸುತ್ತಾರೆ, ವಿಚ್ಛೇದನ ನೀಡಲು ಹೇಳುತ್ತಾರೆ ಎಂಬ ಭಯದಿಂದ ಖಾನ್ ಜೊತೆ ಆಫ್ಘಾನಿಸ್ತಾನಕ್ಕೆ ಓಡಿಹೋದಳು.

ಆದರೆ ಆಫ್ಘಾನಿಸ್ತಾನಕ್ಕೆ ಹೋದ ಬಳಿಕ ಜನಬಾಜ್ ಖಾನ್ ಮೊದಲ ಹೆಂಡತಿ ಇರುವುದು ಗೊತ್ತಾಯಿತು. ಆಘಾತಕ್ಕೊಳಗಾದರು ಕೂಡ ಇಡೀ ಕುಟುಂಬದ ಜೊತೆಗೆ ಪತಿಯ ಪೂರ್ವಜರ ಮನೆಯಲ್ಲಿ ವಾಸಿಸಲು ಆರಂಭಿಸಿದಳು. ಪತಿ ಖಾನ್ ತಮ್ಮ ವ್ಯವಹಾರವನ್ನು ಮುಂದುವರಿಸಲು ಕೋಲ್ಕತ್ತಾಗೆ ಮರಳಿದರು, ಆದರೆ ಬ್ಯಾನರ್ಜಿಗೆ ಮರಳಲು ಸಾಧ್ಯವಾಗಲಿಲ್ಲ.

ಅಫ್ಘಾನಿಸ್ತಾನದಿಂದ ಪಲಾಯನ ಮಾಡಲು ಆಕೆ ಎರಡು ಬಾರಿ ಪ್ರಯತ್ನಿಸಿದಳು. ಆಕೆಯ ಪ್ರಯತ್ನ ಫಲ ಕೊಡಲಿಲ್ಲ. ಕೊನೆಗೆ ಬ್ಯಾನರ್ಜಿಯನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಆಕೆಯ ವಿರುದ್ಧ ಫತ್ವಾ ಹೊರಡಿಸಲಾಯಿತು ಮತ್ತು ಅವಳು 22 ಜುಲೈ 1995 ರಂದು ಆಕೆಯನ್ನು ಸಾಯಿಸಲು ನಿರ್ಧಾರ ಮಾಡಲಾಗಿತ್ತು. ಆದರೆ ಅದು ಹೇಗೋ ಗ್ರಾಮದ ಮುಖ್ಯಸ್ಥನ ಸಹಾಯದಿಂದ ಓಡಿ ಹೋಗಿ ಕಾಬೂಲ್ ತಲುಪಿದರು ಮತ್ತು 12 ಆಗಸ್ಟ್ 1995 ರಂದು ಕೋಲ್ಕತ್ತಾಗೆ ವಿಮಾನ ಏರಿದರು.

2013 ರವರೆಗೆ ಭಾರತದಲ್ಲಿ ಭಾರತದಲ್ಲೇ ಇದ್ದರು. ಈ ಸಮಯದಲ್ಲಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದರು. ಅಂತಿಮವಾಗಿ ಪತಿಯ ಜೊತೆಗೆ ರಾಜಿ ಮಾಡಿಕೊಂಡರು. ಭಾರತದಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಇದಾದ ನಂತರ ಆಗ್ನೇಯ ಅಫ್ಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿ ವೃತ್ತಿ ಜೀವನ ಆರಂಭಿಸಿದರು ಜೊತೆಗೆ ಸ್ಥಳೀಯ ಮಹಿಳೆಯರ ಜೀವನವನ್ನು ಚಿತ್ರೀಕರಿಸಲು ಪ್ರಾರಂಭಿಸಿದರು. 

4 ಸೆಪ್ಟೆಂಬರ್ 2013 ರ ರಾತ್ರಿ ಪಕ್ಟಿಕಾದಲ್ಲಿರುವ ಆಕೆಯ ಮನೆಗೆ ತಾಲಿಬಾನಿಗಳು ಬಲವಂತವಾಗಿ ಪ್ರವೇಶಿಸಿ ಗಂಡ ಮತ್ತು ಆಕೆಯನ್ನು ಅಪಹರಿಸಿದರು. ಮರುದಿನ ಪ್ರಾಂತೀಯ ರಾಜಧಾನಿ ಶರಣನ ಹೊರವಲಯದಲ್ಲಿ ಆಕೆಯ ಶವ ಪತ್ತೆಯಾಯ್ತು. ಆಕೆಯ ದೇಹದಲ್ಲಿ 20 ಗುಂಡು ತಾಗಿದ ಗಾಯವಿತ್ತು. ವಿವಿಧ ಕಾರಣಗಳಿಗಾಗಿ ಆಕೆಯನ್ನು ತಾಲಿಬಾನಿಗಳು ಗುರಿಯಾಗಿಸಿಕೊಂಡಿರಬಹುದು ಎಂದು ಪೊಲೀಸರು ಊಹಿಸಿದರು. ಆದರೆ ತಾಲಿಬಾನ್‌ ಈ ಕೃತ್ಯವನ್ನು ನಿರಾಕರಿಸಿತು. ಕೊನೆಗೆ ತಾಲಿಬಾನ್ ಗುಂಪಿನ ವಕ್ತಾರರು ಬ್ಯಾನರ್ಜಿಯನ್ನು ಕೊಂದಿದ್ದಾರೆ ಎಂದು ಘೋಷಿಸಲಾಯ್ತು. ಏಕೆಂದರೆ  ಆಕೆ ಭಾರತೀಯ ಗೂಢಚಾರಿಣಿ ಯಾಗಿರಬಹುದೆಂದು ಅನುಮಾನಿಸಿದ್ದರು ಎನ್ನುವ ಕಾರಣ ನೀಡಲಾಯ್ತು. ಆದರೆ ಆಕೆ ತಾಲಿಬಾನಿಗಳ ನಿಯಮಗಳನ್ನು ಪಾಲಿಸಲು ನಿರಾಕರಿಸಿದ್ದಳೆಂಬ ಕಾರಣಕ್ಕಾಗಿ ಕೊಲ್ಲಲಾಯಿತು ಎಂಬುದನ್ನು ಬಹುತೇಕ ಉಲ್ಲೇಖಗಳು ಹೇಳುತ್ತವೆ. 

2003 ರಲ್ಲಿ, ಮನಿಶಾ ಕೊಯಿರಾಲಾ ನಟಿಸಿದ ಬಾಲಿವುಡ್ ಚಲನಚಿತ್ರವಾದ ಎಸ್ಕೇಪ್ ಫ್ರಮ್ ತಾಲಿಬಾನ್ ಚಿತ್ರವನ್ನು ಸುಶ್ಮಿತಾ ಬ್ಯಾನರ್ಜಿಯವರು 1995 ರಲ್ಲಿ ಕಾಬುಲಿವಾಲರ್ ಬಂಗಾಲಿ ಬೌ ಪುಸ್ತಕವನ್ನು ಆಧರಿಸಿ ಮಾಡಲಾಗಿದೆ. ತಾಲಿಬಾನಿ ಅತ್ಯಾಚಾರ್-ದೇಶೇ ಒ ಬಿದೇಶೆ (ತಾಲಿಬಾನ್ ದೌರ್ಜನ್ಯಗಳು), ಮುಲ್ಲಾ ಒಮರ್, ತಾಲಿಬಾನ್ ಒ ಅಮಿ (ಮುಲ್ಲಾ ಒಮರ್, ತಾಲಿಬಾನ್ ಮತ್ತು ನಾನು) (2000), ಏಕ್ ಬೊರ್ನೊ ಮಿಥ್ಯಾ ನೋಯಿ ( ಒಂದು ಮಾತು ಸುಳ್ಳು ಅಲ್ಲ ) (2001) ಮತ್ತು ಸಭ್ಯತಾರ್ ಶೇಶ್ ಪುಣ್ಯಬಾನಿ (ನಾಗರಿಕತೆಯ ಸ್ವಾನ್ಸಾಂಗ್) ಪುಸ್ತಕಗಳನ್ನು ಬರೆದಿದ್ದಾರೆ.

Latest Videos
Follow Us:
Download App:
  • android
  • ios