Asianet Suvarna News Asianet Suvarna News

ಅಕ್ರಮ ಮದರಸ ಧ್ವಂಸದಿಂದ ಉತ್ತರಖಂಡದಲ್ಲಿ ಭಾರಿ ಹಿಂಸಾಚಾರ, ಕಂಡಲ್ಲಿ ಗುಂಡು ಆದೇಶ, ನಾಲ್ವರು ಸಾವು!

ಅಕ್ರಮ ಮದರಸಾ ಧ್ವಂಸದಿಂದ ಉತ್ತರಖಂಡದಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿದೆ. ಪೊಲೀಸ್ ಠಾಣೆ ಮೇಲೆ ಮುಸ್ಲಿಮರು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಉದ್ರಿಕ್ತರನ್ನು ಚದುರಿಸಲು ಪೊಲೀಸರ ನಡೆಸಿದ ದಾಳಿಗೆ ನಾಲ್ವರು ಮೃತಪಟ್ಟಿದ್ದು, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆದರೆ ಭಾರಿ ಸಂಖ್ಯೆಯಲ್ಲಿ ಮುಸ್ಲಿಮರು ಶಸ್ತ್ರಾಸ್ತ್ರಗಳ ಮೂಲಕ ದಾಳಿ ಆರಂಭಿಸಿರುವ ಕಾರಣ ಕಂಡಲ್ಲಿ ಗುಂಡು ಆದೇಶ ಹೊರಡಿಸಲಾಗಿದೆ.
 

Uttarakhand Violence 4 killed 250 injured during illegal built Madrasa demolition shoot at sight order issued ckm
Author
First Published Feb 9, 2024, 9:49 AM IST

ಡೆಹ್ರಡೂನ್(ಫೆ.09) ಅಕ್ರಮ ಮದರಸಾ ಕಟ್ಟಡ ಕೆಡವಲು ಆಗಮಿಸಿದ ಅಧಿಕಾರಿಗಳು ಹಾಗೂ ಪೊಲೀಸರ ಮೇಲೆ ಮುಸ್ಲಿಮರು ನಡೆಸಿದ ಏಕಾಏಕಿ ದಾಳಿಯಿಂದ ಉತ್ತರಖಂಡದ  ಹಲ್ದ್ವಾನಿ ಉದ್ವಿಘ್ನಗೊಂಡಿದೆ. ಮುಸ್ಲಿಮರು ಪೊಲೀಸರು ಹಾಗೂ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ. ಉದ್ರಿಕ್ತರ ಗುಂಪು ನೇರವಾಗಿ ಪೊಲೀಸ್ ಠಾಣೆಗೆ ನುಗ್ಗಿ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಉದ್ರಿಕ್ತರ ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಪೊಲೀಸರು, ಅಧಿಕಾರಿಗಳು ಹಾಗೂ ಪತ್ರಕರ್ತರು ತೀವ್ರವಾಗಿ ಗಾಯಗೊಂಡಿದ್ದಾರೆ. ಭಾರಿ ಸಂಖ್ಯೆಯಲ್ಲಿ ಮುಸ್ಲಿಮರು ಶಸ್ತ್ರಾಸ್ತ್ರದ ಮೂಲಕ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಹೀಗಾಗಿ ಪೊಲೀಸರು ಉದ್ರಿಕ್ತರನ್ನು ಚದುರಿಸಿ ಶಾಂತಿ ಕಾಪಾಡಲು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದು, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲ್ದ್ವಾನಿಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದ್ದು,ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮ ಕಂಡಲ್ಲಿ ಗುಂಡು ಆದೇಶ ಹೊರಡಿಸಲಾಗಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದೆ.

ಕಾನೂನು ಬಾಹಿರವಾಗಿ ನಿರ್ಮಿಸಲಾಗಿದೆ ಎಂಬ ಆರೋಪದಡಿ ಉತ್ತರಾಖಾಂಡದ ಹಲ್ದ್ವಾನಿಯಲ್ಲಿ ಅಧಿಕಾರಿಗಳು ಮದರಸಾವೊಂದನ್ನು ಕೆಡವಲು ಹೋದಾಗ ಅಧಿಕಾರಿಗಳು ಮತ್ತು ಕೆಲ ಗುಂಪಿನ ನಡುವೆ ಭಾರೀ ಮಾರಾಮಾರಿ ನಡೆದಿದೆ. ಪುಂಡರ ಗುಂಪುಗಳ ದೂರದಲ್ಲಿ ನಿಂತು ಅಧಿಕಾರಿಗಳಿಗೆ ಕಲ್ಲಿನಿಂದ ಹೊಡೆದಿದ್ದಾರೆ. ಈ ಘಟನೆಯಲ್ಲಿ 100ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.

 

ಅಕ್ರಮ ಮದರಸಾ ಧ್ವಂಸ ಮಾಡಿದ ಬೆನ್ನಲ್ಲೇ ಪೊಲೀಸ್‌ ಪಡೆ ಮೇಲೆ ಕಲ್ಲು ತೂರಿದ ಮುಸ್ಲಿಮರು!

ಹಲ್ದ್ವಾನಿಯ ವನಭುಲ್ಪುರದಲ್ಲಿದ್ದ ಮದರಸಾ ಕೆಡವಲು ಜೆಸಿಬಿ ಯಂತ್ರದೊಂದಿಗೆ ಬಂದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಏಕಾಏಕಿ ದಾಳಿ ನಡೆಸಿದ ಕೂಡಲೇ ಭದ್ರತೆ ಹೆಚ್ಚಿಸಲಾಗಿದ್ದು ಪರಿಸ್ಥಿತಿ ಉದ್ವಿಗ್ನವಾಗಿದೆ. ಇದೇ ವೇಳೆ ಕೆಲ ಕಿಡಿಗೇಡಿಗಳು ಪೊಲೀಸ್‌ ಠಾಣೆಯ ಹೊರನಿಂತಿದ್ದ ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಲ್ದ್ವಾನಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಸೆಕ್ಷನ್ 144 ಜಾರಿ ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಇತ್ತ ಅಕ್ರಮ ಮದರಸಾ ಧ್ವಂಸ ಕಾರ್ಯಾಚರಣೆಗೆ ಸದ್ಯ ಬ್ರೇಕ್ ಹಾಕಲಾಗಿದೆ. ಪರಿಸ್ಥಿತಿ ನಿಯಂತ್ರಣದ ಬಳಿಕ ಕಾರ್ಯಾಚರಣೆ ಮುಂದುವರಿಸುವ ಸಾಧ್ಯತೆ ಇದೆ.

ಶೀಘ್ರವೇ ಇನ್ನೊಂದು ಪುಲ್ವಾಮಾ ದಾಳಿ ನಡೆಯಲಿದೆ: ಮದ್ರಾಸದ ವಿದ್ಯಾರ್ಥಿಯಿಂದ ಟ್ವಿಟ್ಟರ್‌ನಲ್ಲಿ ಪೋಸ್ಟ್

ಇದರ ನಡುವೆ ಮದರಸಾ ಧ್ವಂಸಕ್ಕೆ ತಡೆ ನೀಡುವಂತೆ ಕೋರಿ ಮುಸ್ಲಿಮರು ಉತ್ತರಖಂಡ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಹೈಕೋರ್ಟ್ ತಡೆ ನೀಡಲು ನಿರಾಕರಿಸಿದೆ. ವಿಚಾರಣೆಯನ್ನು ಫೆಬ್ರವರಿ 14ಕ್ಕೆ ಮಾಡುವುದಾಗಿ ಕೋರ್ಟ್ ಹೇಳಿದೆ. 

Follow Us:
Download App:
  • android
  • ios