ಕೋತಿಯೊಂದು ಅಂಗಡಿಯೊಂದರಿಂದ ಶರಾಬು ಕದ್ದೊಯ್ದು ಕುಡಿಯುತ್ತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಯ್ ಬರೇಲಿ: ಶರಾಬಿಗಾಗಿ ಕುಡುಕರು ಬಾಯ್ಬಿಡುವುದನ್ನು ನೀವು ನೋಡಿರಬಹುದು. ಕುಡಿತದ ದಾಸರಾದ ಕೆಲವರು ಒಂದು ಪೆಗ್‌ಗಾಗಿ ಬಾಯ್ ಬಾಯ್ ಬಿಡುವುದನ್ನು ನೀವು ನೋಡಿರಬಹುದು. ಆದರೆ ಕೋತಿಗಳು ಶರಾಬು ಇಷ್ಟಪಡುತ್ತವಾ? ಹೌದು ಅಂತ ಸಾಕ್ಷಿ ನೀಡ್ತಿದೆ ಈ ವೈರಲ್ ವಿಡಿಯೋ. ಈ ವಿಡಿಯೋದಲ್ಲಿ ಕೋತಿಯೊಂದು ಅಂಗಡಿಯೊಂದರಿಂದ ಶರಾಬು ಕದ್ದೊಯ್ದು ಕುಡಿಯುತ್ತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದಹಾಗೆ ಉತ್ತರಪ್ರದೇಶದ (Uttara Pradesh) ರಾಯ್ ಬರೇಲಿಯಲ್ಲಿ (Rae bareli) ನಡೆದ ಘಟನೆ ಇದಾಗಿದೆ. ಅಂಗಡಿ ಮುಂದೆ ಗ್ರಾಹಕರ ಕೈಯಲ್ಲಿದ್ದ ಮದ್ಯದ ಬಾಟಲಿಯನ್ನು ಕಸಿದುಕೊಂಡ ಕೋತಿ ಅದನ್ನು ಸ್ವಲ್ಪ ತಡ ಮಾಡದೇ ದೊಡ್ಡ ಕುಡುಕ ಕುಡಿದಂತೆ ಬಾಯಿಗಿಟ್ಟು ಕುಡಿಯುತ್ತಿದೆ. ಕಿಂಗ್ ಫಿಷರ್ ಸಂಸ್ಥೆಯ ಮದ್ಯ ಇದಾಗಿದ್ದು, ಕೋತಿಯೂ ಮದ್ಯ ಕುಡಿಯುತ್ತಿರುವ ಸ್ಟೈಲ್ ನೋಡಿದರೆ ಇದು ಕೂಡ ವಿಜಯ್ ಮಲ್ಯ ಮಾಲೀಕತ್ವದ ಕಿಂಗ್ ಫಿಷರ್ ಮದ್ಯದ ಪ್ರೇಮಿಯ ಎಂದು ಪ್ರಶ್ನಿಸುವಂತಿದೆ ಈ ದೃಶ್ಯ.
ಗದಗಂಜಿ (Gadaganj) ಪೊಲೀಸ್ ಠಾಣೆ ವ್ಯಾಪ್ತಿಯ ಅಚಲ್‌ಗಂಜ್ (Achalganj) ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಈ ದೃಶ್ಯವನ್ನು ಅಲ್ಲೇ ಇದ್ದವರು ಯಾರೋ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಪ್ರಾಣಿಗಳು ಕೂಡ ಶರಾಬನ್ನು ಇಷ್ಟಪಡುತ್ತವೆ ಎಂಬುದನ್ನು ಸಾಬೀತುಪಡಿಸಿದೆ. ಆದರೆ ಈ ಘಟನೆಯಿಂದ ಇಲ್ಲಿನ ಸರಾಯಿ ಅಂಗಡಿಯ ಮಾಲೀಕರು ಚಿಂತೆಗೊಳಗಾಗಿದ್ದಾರಂತೆ. ಇಲ್ಲಿ ಕೋತಿಗಳ ಕಾಟ ಸಾಮಾನ್ಯ ಎನಿಸಿದ್ದು, ಕೋತಿಗಳು ಮದ್ಯದ ಬಾಟಲ್ ಕಿತ್ತುಕೊಂಡು ಹೋಗುತ್ತಿರುವುದರಿಂದ ಈ ಅಂಗಡಿಗೆ ಮದ್ಯಪ್ರಿಯರು ಬರಲು ಹಿಂದೇಟು ಹಾಕುತ್ತಿದ್ದಾರಂತೆ. ಈ ಬಗ್ಗೆ ಮದ್ಯದಂಗಡಿ ಮಾಲೀಕರು ಅರಣ್ಯ ಇಲಾಖೆ (forest department) ಸಿಬ್ಬಂದಿಗೆ ದೂರು ನೀಡಿದ್ದಾರೆ. ಅಲ್ಲದೇ ಈ ಪ್ರದೇಶದಿಂದ ಕೋತಿಗಳನ್ನು (Monkey) ದೂರ ಓಡಿಸುವಂತೆ ಆಗ್ರಹಿಸಿದ್ದಾರೆ.
ದಿನಾ ಆಹಾರ ತಿನ್ನಿಸುತ್ತಿದ್ದ ವ್ಯಕ್ತಿಯ ಹಣೆಗೆ ಮುತ್ತಿಟ್ಟು ವಿದಾಯ ಹೇಳಿದ ಕೋತಿ
ಕೆಲವು ಪ್ರದೇಶಗಳಲ್ಲಿ ಕೋತಿಗಳ ಕಾಟ ವಿಪರೀತವಾಗಿರುತ್ತದೆ. ಕೆಲವು ಪ್ರವಾಸಿ ತಾಣಗಳಲ್ಲಿ ಜನರ ಕೈಯಲ್ಲಿರುವ ವಸ್ತುಗಳನ್ನೆಲ್ಲಾ ಕಿತ್ತುಕೊಂಡು ಕೋತಿಗಳು ಪರಾರಿಯಾಗುತ್ತವೆ. ಕೆಲ ದಿನಗಳ ಹಿಂದೆ ಆಗ್ರಾದಲ್ಲಿ ಅಧಿಕಾರಿಯೊಬ್ಬರ ಕೂಲಿಂಗ್ ಗ್ಲಾಸ್‌ನ್ನು ಕೋತಿಯೊಂದು ಹೊತ್ತೊಯ್ದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು.
ಜಿಲ್ಲಾಧಿಕಾರಿಯ ಕನ್ನಡಕ ಕಸಿದ ಕೋತಿ: ಫ್ರೂಟಿ ಕೊಟ್ಟು ಸ್ಪೆಕ್ಟ್ಸ್ ಪಡೆದ ಪೊಲೀಸರು..!