Asianet Suvarna News Asianet Suvarna News

ಜಿಲ್ಲಾಧಿಕಾರಿಯ ಕನ್ನಡಕ ಕಸಿದ ಕೋತಿ: ಫ್ರೂಟಿ ಕೊಟ್ಟು ಸ್ಪೆಕ್ಟ್ಸ್‌ ಪಡೆದ ಪೊಲೀಸರು..!

ಉತ್ತರ ಪ್ರದೇಶದ ಮಥುರಾದ ವೃಂದಾವನದಲ್ಲಿ ಕೋತಿಗಳ ಕಾಟದ ವಿಡಿಯೋವೊಂದು ವೈರಲ್‌ ಆಗಿದೆ. ಜಿಲ್ಲಾಧಿಕಾರಿಯ ಕನ್ನಡಕವನ್ನೇ ಕೋತಿ ಕಿತ್ತುಕೊಂಡಿತ್ತು. 

monkey snatches district magistrate glassesin uttar pradaesh mathura makes him plead ash
Author
Bangalore, First Published Aug 22, 2022, 6:31 PM IST

ಕೋತಿಗಳ ಕಾಟವು ಭಾರತದ ಅನೇಕ ಭಾಗಗಳಲ್ಲಿ ಸಾಮಾನ್ಯವಾಗಿದೆ, ಅಲ್ಲಿ ಅವು ಜನರ ವಸ್ತುಗಳನ್ನು ಕಸಿದುಕೊಳ್ಳುತ್ತವೆ ಮತ್ತು ಕೆಲವೊಮ್ಮೆ ಆಹಾರಕ್ಕಾಗಿ ಮನೆಗಳಿಗೆ ನುಗ್ಗುತ್ತವೆ. ಇದು ನಮಗೆ ಸಾಮಾನ್ಯ ಎನ್ನಬಹುದು. ಆದರೆ, ಇತ್ತೀಚೆಗೆ ಉತ್ತರ ಪ್ರದೇಶದ ಮಥುರಾದ ವೃಂದಾವನದಲ್ಲಿ ಕೋತಿಯೊಂದು ಜಿಲ್ಲಾಧಿಕಾರಿಗಳ ಕನ್ನಡಕವನ್ನೇ ಕಿತ್ತುಕೊಂಡಿತ್ತು. ಈ ಘಟನೆಯ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಗಳ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ಅವರು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಜಿಲ್ಲಾಧಿಕಾರಿ ನವನೀತ್ ಚಹಾಲ್ ಮತ್ತು ಹಲವಾರು ಪೊಲೀಸರು ಕಟ್ಟಡದ ಕೆಳಗೆ ಜಮಾಯಿಸಿರುವುದನ್ನು ತೋರಿಸುತ್ತದೆ ಮತ್ತು ಕನ್ನಡಕವನ್ನು ಹಿಂಪಡೆಯಲು ಮಾರ್ಗವನ್ನು ಕಂಡುಹಿಡಿಯುತ್ತಿದೆ. ಕೆಲವು ಕೋತಿಗಳು ಕಟ್ಟಡದ ಸುತ್ತಲೂ ಜಿಗಿಯುವುದನ್ನು ಸಹ ಕಾಣಬಹುದು. ಸ್ವಲ್ಪ ಸಮಯದವರೆಗೆ ಪುರುಷರನ್ನು ಸ್ಥಳದಲ್ಲೇ ಕಾಯಿಸಿದ ಕೋತಿ, ಹಲವು ಬಾರಿ ನಾನಾ ಪರಿಯಲ್ಲಿ ಬೇಡಿಕೊಂಡ ಕಾರಣ ಕೋತಿ ಅಂತಿಮವಾಗಿ ಕನ್ನಡಕವನ್ನು ಹಿಂದಿರುಗಿಸುತ್ತದೆ.

“ಭಾರತದಲ್ಲಿ ಜಿಲ್ಲೆಯೊಂದರ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಿಂತ ಅಥವಾ ಜಿಲ್ಲಾಧಿಕಾರಿಗಿಂತ ಹೆಚ್ಚು ಶಕ್ತಿಶಾಲಿ ವ್ಯಕ್ತಿಯನ್ನು ನೀವು ನೋಡಿಲ್ಲದಿದ್ದರೆ ಇಲ್ನೋಡಿ. ಮಥುರಾದ ವೃಂದಾವನದಲ್ಲಿ ಡಿಎಂ ನವನೀತ್ ಚಹಾಲ್ ಅವರಿಂದ ಕೋತಿ ಕನ್ನಡಕವನ್ನು ಕಿತ್ತುಕೊಂಡಿದೆ. ಸ್ವಲ್ಪ ಮನವಿ ಮಾಡಿದ ನಂತರ, ಕೋತಿಗಳು ಕನ್ನಡಕವನ್ನು ಹಿಂತಿರುಗಿಸಿದವು” ಎಂದು ಸುಶಾಂತ ನಂದಾ ಶೀರ್ಷಿಕೆಯನ್ನು ಬರೆದಿದ್ದಾರೆ. ಈ ವಿಡಿಯೋ ಕ್ಲಿಪ್ ಅನ್ನು ಟ್ವಿಟ್ಟರ್‌ನಲ್ಲಿ 26 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು ಮತ್ತು ಈವರೆಗೆ 85 ಮಂದಿ ಈ ವಿಡಿಯೋವನ್ನು ರೀಟ್ವೀಟ್‌ ಮಾಡಿದ್ದಾರೆ. ಅಲ್ಲದೆ, ಬಳಕೆದಾರರು ಈ ವಿಡಿಯೋಗೆ ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ. ಹಲವರು ಮಜವಾಗಿ ಕಮೆಂಟ್‌ ಮಾಡಿದ್ದರೆ, ಇನ್ನೂ ಹಲವರು ನಾವೂ ಸಹ ಕೋತಿಯಿಂದ ದಾಳಿಗೊಳಗಾಗಿದ್ದೇವೆ ಎಂದಿದ್ದಾರೆ. 

ಕೋತಿಯು ಟ್ರೀಟ್‌ಗೆ ಬದಲಾಗಿ ಕನ್ನಡಕವನ್ನು ಹಿಂದಿರುಗಿಸಲು ಒಪ್ಪಿಕೊಂಡಿರಬಹುದು ಎಂದು ಒಬ್ಬರು ಬರೆದುಕೊಂಡಿದ್ದಾರೆ. ಈ ವಿಡಿಯೋ ಕ್ಲಿಪ್‌ ನೋಡಿದ ಅನೇಕ ಜನರು 
ಕೆಲವು ಕುಖ್ಯಾತ ಕೋತಿಗಳೊಂದಿಗೆ ದಾಳಿಗೊಳಗಾಗಿರುವುದನ್ನು, ವಸ್ತುಗಳನ್ನು ಕಳೆದುಕೊಂಡಿರುವುದನ್ನು ಹಂಚಿಕೊಳ್ಳಲು ಪ್ರೇರೇಪಿಸಿತು. ಕೋತಿಗಳು ಆಗಾಗ್ಗೆ ವಸ್ತುಗಳನ್ನು ಕಸಿದುಕೊಳ್ಳುತ್ತವೆ ಮತ್ತು ಅವುಗಳನ್ನು ಮರಳಿ ಪಡೆಯಲು ಆಹಾರ ನೀಡಬೇಕು ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ. ಹಾಗೆ, ಕನ್ನಡಕಗಳನ್ನು ಹಿಂಪಡೆಯಲು ಹಲವಾರು ಪೊಲೀಸರು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದನ್ನು ನೋಡಿ ಹಲವರು ನಕ್ಕಿದ್ದಾರೆ.

ಮಂಗಗಳ ಚೇಷ್ಟೆಗಳಿಗೆ ಜಿಲ್ಲಾಧಿಕಾರಿಯೊಬ್ಬರೇ ಖಂಡಿತ ಬಲಿಯಾಗಿಲ್ಲ ಎಂದೂ ಬಳಕೆದಾರರೊಬ್ಬರು ಬರೆದಿದ್ದಾರೆ. ವೃಂದಾವನ ಹಾಘೂ ಮಥುರಾದಲ್ಲಿ ಕೋತಿಗಳು ಜನರ ವಸ್ತುಗಳನ್ನು ಕಿತ್ತುಕೊಳ್ಳುವುದು ಸಾಮಾನ್ಯವಾಗಿದೆ. ಹಣ್ಣು ಅಥವಾ ಹಣ್ಣಿನ ಜ್ಯೂಸ್‌ನಂತಹ ಟ್ರೀಟ್‌ ಕೊಟ್ಟರೆ ಮಾತ್ರ ಕಿತ್ತುಕೊಂಡ ವಸ್ತುಗಳನ್ನು ವಾಪಸ್‌ ಪಡೆಯಬಹುದಾಗಿದೆ. 

ಇನ್ನೊಬ್ಬ ಬಳಕೆದಾರರು, ‘’ನನಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆ ನಾನು ಕನ್ನಡಕ ಬಿಟ್ಟು ಹೋಗಿದ್ದೆ. ಬಹುಶ: ಕನ್ನಡಕವನ್ನು ಕಿತ್ತುಕೊಳ್ಳುವುದು ಇದೊಂದೇ ಸ್ಥಳದಲ್ಲಿರಬೇಕು’’ ಎಂದು ಟ್ವೀಟ್‌ ಮಾಡಿದ್ದಾರೆ. ಇದೇ ರೀತಿ ಇನ್ನೊಬ್ಬರು, ಆಟೋದಲ್ಲಿ ಹೋಗುತ್ತಿದ್ದ ನನ್ನ ಕನ್ನಡಕವನ್ನು ಕೋತಿ ಕಿತ್ತುಕೊಂಡಿತು. ಬಳಿಕ ಚಿಕ್ಕ ಹುಡುಗ ಕೋತಿಗೆ ಫ್ರೂಟಿ ಕೊಟ್ಟು ಕನ್ನಡಕ ಪಡೆದುಕೊಂಡ. ಅದಕ್ಕಾಗಿ, ನನ್ನ ಬಳಿ 50 ರೂ. ಪಡೆದ. ಕೇವಲ 5 ನಿಮಿಷದೊಳಗೆ ಸಂಪೂರ್ಣ ಘಟನೆ ನಡೆಯಿತು ಎಂದು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ಹಾಗಾದರೆ ನೀವು ಸಹ ಈ ಮಂಗಳಿಂದ ಇದೇ ರೀತಿ ಕುಷೇಷ್ಟೆಗೆ ಒಳಗಾಗಿದ್ದೀರಾ..?

Follow Us:
Download App:
  • android
  • ios